HEALTH TIPS

No title

          ಆಸ್ಪತ್ರೆಯಲ್ಲಿ ದೀರ್ಘಕಾಲ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ನೆರವು ಬೇಕಿದೆ
      ಉಪ್ಪಳ: ಐ.ಟಿ.ಐ.ತಾಂತ್ರಿಕ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರಬೇಕಾಗಿದ್ದ 25 ರ ಹರೆಯದ ಸದೃಢ ಯುವಕನೋರ್ವ ರೋಗಪೀಡಿತನಾಗಿ ಆಸ್ಪತ್ರೆಯೊಂದರ ಹಾಸಿಗೆಯಲ್ಲಿ ಉಳಿದಿರುವ ವ್ಯಥೆಯ ದುರಂತ ಕಥೆ ಪೈವಳಿಕೆ ಪಂಚಾಯತಿನ ಬೆರಿಪದವು ಕಟ್ಟತ್ತಾರು ಪ್ರದೇಶದ ಪ್ರಶಾಂತ್ ಎಂಬವರದು.ಕೂಲಿ ಕಾಮರ್ಿಕ ಸುರೇಶ್ ನಾಯಕ್ ಪ್ರೇಮಾ ದಂಪತಿ ಪುತ್ರ ಪ್ರಶಾಂತ್ ಎಂಬವರಿಗೆ ಕಳೆದ 2015 ನವೆಂಬರ್ ತಿಂಗಳ ಅದೊಂದು ದಿನ ಜ್ವರಬಾಧಿಸಿದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಒಯ್ದು ದಾಖಲಿಸಲಾಯಿತು.ವೈದ್ಯರು ತಪಾಸಣೆ ನಡೆಸಿದಾಗ ಯುವಕನ ತಲೆಯಲ್ಲಿ ಮೆದುಳು ಜ್ವರದಿಂದ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿ ಚಿಕಿತ್ಸೆ ನೀಡಿದರು.ನಿರಂತರ 48 ದಿನಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದರೂ ರೋಗ ಗುಣವಾಗಲಿಲ್ಲ.ಬದಲಾಗಿ ಪ್ರಶಾಂತ್ ನ ದೇಹ ಚಲನೆ ಇಲ್ಲದೆ ನಿಶ್ಚಲವಾಯಿತು.
   ಯುವಕನ ರೋಗ ವೈದ್ಯಲೋಕಕ್ಕೆ ಸವಾಲಾಗಿ, ರೋಗ ಗುಣವಾಗದ ಈತನನ್ನು ಮನೆಗೆ ಮರಳಿ ಕರೆತರಲಾಯಿತು.ಒಂದು ವಾರ ಕಾಲ ಮನೆಯಲ್ಲಿ ಹಾಸಿಗೆಗೆ ಶರಣಾಗಿದ್ದ ಈತನನ್ನು ಬಳಿಕ ಯಾರೋ ಪುಣ್ಯಾತ್ಮರ ಸಲಹೆಯಂತೆ ಕೇರಳದ ಎನರ್ಾಕುಲಂನ ತ್ರಿಪುಣ್ಣಿತ್ತುರ ಆಯುವರ್ೇದ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಇಲ್ಲಿ ಎರಡೂವರೆ ವರ್ಷಗಳಿಂದ ದೀರ್ಘ ಕಾಲದ ಚಿಕಿತ್ಸೆ ಫಲನೀಡಿ ಇದೀಗ ಈತನ ರೋಗ ವಾಸಿಯಾಗುವ ಹಂತದಲ್ಲಿದೆ.ಆದರೆ ಇನ್ನೂ ಕೆಲಕಾಲ ಇಲ್ಲಿಯೇ ಉಳಿದು ಚಿಕಿತ್ಸೆ ಪಡೆಯ ಬೇಕಾಗಿದೆ.
   ಈ ತನಕ ಮಂಗಳೂರಿನ ಆಸ್ಪತ್ರೆಯಲ್ಲಿ ಸುಮಾರು 4 ಲಕ್ಷ, ಎನರ್ಾಕುಲಂನ ಆಯುವರ್ೇದ ಆಸ್ಪತ್ರೆಯಲ್ಲಿ 7ಲಕ್ಷ ಚಿಕಿತ್ಸೆಗೆ ವೆಚ್ಚವಾಗಿದೆ.ಕೂಲಿ ಕಾಮರ್ಿಕ ತಂದೆ,ಮತ್ತು ಓರ್ವ ಸಹೋದರನ ದುಡಿತದಿಂದ ಮತ್ತು ಸಾಲಮಾಡಿ ಚಿಕಿತ್ಸೆ ನಡೆಸಲಾಗಿದೆ. ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಸಂಘಟನೆ ಸಹಿತ ಕೆಲವು ಸಂಘ ಸಂಸ್ಥೆಗಳು ಈತನಿಗೆ ನೆರವು ನೀಡಿದೆ. ಆದರೆ ಅಮ್ಮನೊಂದಿಗೆ ಬಲುದೂರದ ಕೇರಳದ ಆಸ್ಪತ್ರೆಯ ಕೊಠಡಿಯನ್ನೇ ಮನೆ ಮಾಡಿರುವ ಪ್ರಶಾಂತ ಪೂರ್ಣ ಗುಣಮುಖವಾಗಬೇಕಾದರೆ ಇನ್ನೂ ಕನಿಷ್ಟ 6 ತಿಂಗಳ ಕಾಲ ಚಿಕಿತ್ಸೆ ಮುಂದುವರಿಸಬೇಕಾಗಿದೆ.ಇದಕ್ಕೆ ಸುಮಾರು ಸುಮಾರು 4 ಲಕ್ಷ ಬೇಕಾಗಿದೆ.ಕಡು ಬಡತನದಲ್ಲಿರುವ ಈ ಬಡ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ನಿಭಾಯಿಸಲು ಕಷ್ಟವಾಗಿದೆ.ಸಹೃದಯಿ ದಾನಿಗಳ ಮತ್ತು ಸಂಘಟನೆಗಳ ನೆರವು ಬೇಕಾಗಿದೆ.ಸಹಾಯ ನೀಡಲು ಬಯಸುವವರು ಪ್ರಶಾಂತರ ಸಹೋದರ ಗಣೇಶ್ ಪ್ರಸಾದ್ ಕಟ್ಟತ್ತಾರು ಮನೆ,ಅಂಚೆ ಬೆರಿಪದವು ಬಾಯಾರು ಗ್ರಾಮ ಅಥವಾ ವಿಜಯಾ ಬ್ಯಾಂಕಿನ ಬಾಯಾರು ಮುಳಿಗದ್ದೆ ಶಾಖೆಯ ಎಸ್.ಬಿ -200201010006050 -ಐ.ಎಫ್.ಸಿ.ಕೋಡ್ ವಿ.ಐ.ಜೆ.ಬಿ -0000002002 ಖಾತೆಗೆ ಪಾವತಿಸಬಹುದಾಗಿದೆ.ಹೆಚ್ಚಿನ ವಿವರಗಳಿಗೆ 08971779276 ಮೊಬೈಲ್ಗೆ ಸಂಪಕರ್ಿಸಬಹುದಾಗಿದೆ.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries