ಧನಸಹಾಯ ವಿತರಣೆ
ಕಾಸರಗೋಡು: ಮನೆ ಸಂಪೂರ್ಣ ಧರಾಶಾಹಿಯಾಗಿದ್ದು, ವಾಸ ಸೌಕರ್ಯವಿಲ್ಲದೆ ಕಂಗೆಟ್ಟ ಬಡಕುಟುಂಬಕ್ಕೆ ಅನಿವಾಸಿ ಯುವಕರ ಒಕ್ಕೂಟ ಸಂಗ್ರಹಿಸಿದ ಧನಸಹಾಯವನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಮಣಿಯಂಪಾರೆ ನಿವಾಸಿ ಸುಂದರ ಬೆಳ್ಚಡ ಅವರ ಬಡಕುಟುಂಬದ ಮನೆ ಧರಾಶಾಹಿಯಾದ ಬಳಿಕ ಶೌಚಾಲಯದ ಕೊಠಡಿಯಲ್ಲಿ ವಾಸಮಾಡುವಂತಾಗಿದೆ. ಪತ್ನಿಯೊಂದಿಗೆ ಸುಂದರ ಬೆಳ್ಚಡರು ಶೌಚಾಲಯ ಕೊಠಡಿಯಲ್ಲಿ ವಾಸವಿದ್ದರೆ, ಮಳೆಗಾಲವಾಗಿರುವುದರಿಂದ ಇವರ ಸಂಕಷ್ಟ ಹೇಳತಿರದು. ಶೌಚಾಲಯದ ಸಣ್ಣ ಕೊಠಡಿಯಲ್ಲಿ ಇವರಿಗೆ ಮಲಗಲು ಸ್ಥಳಾವಕಾಶ ಇಲ್ಲದಂತಾಗಿದೆ. ವೃದ್ಧ ದಂಪತಿ ಅಸೌಖ್ಯ ಪೀಡಿತರಾಗಿದ್ದು, ಚಿಕಿತ್ಸೆ ಹಾಗೂ ಇತರ ನಿತ್ಯ ಖಚರ್ುವೆಚ್ಚಗಳಿಗಾಗಿ ಸಾವಿರಾರು ರೂ. ಬೇಕಾಗುತ್ತದೆ. ದುಡಿಯಲು ಕೂಡಾ ಬಲಹೀನರಾದ ಈ ದಂಪತಿ ಕಣ್ಣೀರಿನೊಂದಿಗೆ ಕಾಲ ಕಳೆಯುವಂತಾಗಿದೆ.
ಇವರ ಸಂಕಷ್ಟವನ್ನು ಮನಗಂಡ ಶೇಣಿ ಮಣಿಯಂಪಾರೆ ಅನಿವಾಸಿ ಒಕ್ಕೂಟ ಸಂಗ್ರಹಿಸಿದ 25000 ರೂ.ವನ್ನು ಪ್ರಶಾಂತ್, ಬಾತಿಷ ಹಾಗೂ ಉಬೈದ್ ಮಣಿಯಂಪಾರೆ ಅವರು ಸುಂದರ ಬೆಳ್ಚಡ ಅವರಿಗೆ ಹಸ್ತಾಂತರಿಸಿದರು. ಎಂ.ಎಚ್.ಆರಿಸ್ ಶೇಣಿ, ರಿಫಾಯಿ, ಶಿಯಾಬ್, ರಫೀಕ್, ಪ್ರದೀಪ್, ಪ್ರಶಾಂತ, ಯತೀಶ್, ಸಫರ್ುದ್ದೀನ್, ಆರಿಸ್ ಪಾರೆ, ಖಾಶಿಂ, ಸಿದ್ದೀಕ್ ದೇರಡ್ಕ, ಗೋವಿಂದ, ಗಿರೀಶ, ಅಲಿ, ಜಾಬಿರ್, ಸತ್ತಾರ್, ಅನೂಪ್, ಹಮೀದ್ ಮತ್ತಿತರರು ಬಡಕುಟುಂಬಕ್ಕಾಗಿ ಹಣ ಸಂಗ್ರಹಿಸಿದ್ದರು.