HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಶೈಕ್ಷಣಿಕ ಸವಲತ್ತಿಗೆ ವನ್ಟೈಂ ರಿಜಿಸ್ಟ್ರೇಶನ್
     ಕುಂಬಳೆ: ಕೇರಳ ರಾಜ್ಯದ ಪ್ಲಸ್ವನ್ನಿಂದ ತೊಡಗಿ ಪಿಎಚ್ಡಿ ತನಕದ ವಿದ್ಯಾಥರ್ಿಗಳಿಗೆ ಇನ್ನು  ಮುಂದೆ ಸ್ಟೈಫಂಡ್, ಶುಲ್ಕ ವಿನಾಯಿತಿ ಮೊದಲಾದ ಶಿಕ್ಷಣ ಸವಲತ್ತುಗಳು ಲಭಿಸುವ ನಿಟ್ಟಿನಲ್ಲಿ  ಹೊಸದಾಗಿ ವನ್ಟೈಂ ರಿಜಿಸ್ಟ್ರೇಶನ್ ವ್ಯವಸ್ಥೆಯು ಜಾರಿಗೆ ಬರಲಿದೆ. ಇದಕ್ಕಾಗಿ ವಿದ್ಯಾಥರ್ಿಗಳಿಗೆ ಆಧಾರ್ ಕಾಡರ್್ ಮತ್ತು  ಬ್ಯಾಂಕ್ ಖಾತೆ ಕಡ್ಡಾಯ ಮಾಡಲಾಗಿದೆ.
    ರಾಜ್ಯ ಪರಿಶಿಷ್ಟ  ಜಾತಿ ಮತ್ತು  ಪರಿಶಿಷ್ಟ  ವರ್ಗ ಇಲಾಖೆ ಹಾಗೂ ಸಿ-ಡಿಟ್ ಇವುಗಳು ಜಂಟಿಯಾಗಿ ನೂತನ ಯೋಜನೆಯನ್ನು ಅನುಷ್ಠಾನಕ್ಕೆ ತರಲಿವೆ. ಈ ಶೈಕ್ಷಣಿಕ ವರ್ಷದಿಂದ ಯೋಜನೆಯು ಸಾಕಾರಗೊಳ್ಳಲಿದೆ. ಕೇರಳದ ಸರಕಾರಿ, ಅನುದಾನಿತ, ಖಾಸಗಿ ಕಾಲೇಜುಗಳ, ಹೈಯರ್ ಸೆಕೆಂಡರಿ ಶಾಲೆಗಳ ವಿದ್ಯಾಥರ್ಿಗಳಿಗೆ ಪ್ರಸ್ತುತ ಶುಲ್ಕ ವಿನಾಯಿತಿ ನೀಡಲಾಗುತ್ತಿದ್ದ  ಇ-ಗ್ರ್ಯಾಂಟ್ ಯೋಜನೆಯನ್ನು  ಪರಿಷ್ಕರಿಸಿ ಇ-ಗ್ರ್ಯಾಂಟ್ಸ್ 3.0 ಎಂಬ ಆನ್ಲೈನ್ ಪೋರ್ಟಲ್ನ್ನು  ಸಿ-ಡಿಟ್ ತಯಾರಿಸಿದೆ.
   ಆಧಾರ್ ಮೂಲಕ ವನ್ಟೈಂ ನೋಂದಾವಣೆ ನಡೆಸಲು ನಿರ್ಧರಿಸಲಾಗಿದೆ. ಪ್ರಥಮ ವರ್ಷದ ವಿದ್ಯಾಥರ್ಿ ವನ್ಟೈಂ ನೋಂದಾವಣೆ ನಡೆಸಿದರೆ ಮುಂದಿನ ಶಿಕ್ಷಣಕ್ಕೆ ಶುಲ್ಕ ವಿನಾಯಿತಿ ಲಭಿಸುವ ಯೋಜನೆ ಇದಾಗಿದೆ. ಕೇರಳದ ಎಲ್ಲ  ವಿಶ್ವವಿದ್ಯಾಲಯಗಳು, ಕಾಲೇಜುಗಳು, ಹೈಯರ್ ಸೆಕೆಂಡರಿ ಶಾಲೆ ಮತ್ತಿತರ ಸಂಸ್ಥೆಗಳಲ್ಲಿ  ಈ ಶೈಕ್ಷಣಿಕ ವರ್ಷದಿಂದ ಇ-ಗ್ರ್ಯಾಂಟ್ಸ್ ಹೊಸ ಆವೃತ್ತಿಯ ಮೂಲಕ ಸೌಲಭ್ಯವನ್ನು  ಒದಗಿಸಲು ಮಹತ್ವದ ತೀಮರ್ಾನ ಕೈಗೊಳ್ಳಲಾಗಿದೆ.
   ಪ್ರಸ್ತುತ ಪ್ಲಸ್ವನ್ಗೆ ಸೇರಿದ ವಿದ್ಯಾಥರ್ಿ ಅಕ್ಷಯ ಕೇಂದ್ರದ ಮುಖಾಂತರ ಇ-ಗ್ರ್ಯಾಂಟ್ ಮುಖೇನ ಶಿಕ್ಷಣ ಸವಲತ್ತಿಗೆ ಅಜರ್ಿ ಸಲ್ಲಿಸಿದರೆ ಪದವಿಗೆ, ಸ್ನಾತಕೋತ್ತರ ಪದವಿಗೆ, ಇತರ ಉನ್ನತ ಶಿಕ್ಷಣಕ್ಕೆ ಸೇರ್ಪಡೆಗೊಳ್ಳುವಾಗ ಪ್ರತಿ ಬಾರಿಯೂ ಇ-ಗ್ರ್ಯಾಂಟ್ ಮೂಲಕ ಆನ್ಲೈನ್ ನೋಂದಣಿ  ನಡೆಸಬೇಕಾಗಿತ್ತು. ನೂತನ ಯೋಜನೆಯಲ್ಲಿ  ಯಾವುದಾದರೂ ಒಂದು ಕೋಸರ್್ನಲ್ಲಿ  ವನ್ಟೈಮ್ ರಿಜಿಸ್ಟ್ರೇಶನ್ ನಡೆಸಿದರೆ ಉನ್ನತ ಶಿಕ್ಷಣ ಕೊನೆಗೊಳ್ಳುವವರೆಗೆ ಶಿಕ್ಷಣ ಸವಲತ್ತು  ಲಭಿಸಲಿದೆ.
   ಇದೇ ವೇಳೆ ಜೂನ್ನಿಂದ ಎಸ್ಸಿ, ಎಸ್ಟಿ ವಿಭಾಗಗಳ ವಿದ್ಯಾಥರ್ಿಗಳಿಗೆ ಸ್ಟೈಫಂಡ್ ನೀಡಬೇಕಾಗಿದ್ದು, ಒಂದು ಸಂಸ್ಥೆ  ಕೂಡ ಇದುವರೆಗೆ ಆನ್ಲೈನ್ ನೋಂದಣಿ ನಡೆಸಿಲ್ಲ. ಹಳೆಯ ಆವೃತ್ತಿ ಬಳಸಬಾರದು ಎಂದು ಇಲಾಖೆಯೇ ಮುನ್ನೆಚ್ಚರಿಕೆ ನೀಡಿದೆ. ಹೊಸ ಆವೃತ್ತಿಯಲ್ಲಿ  ಅಗತ್ಯದ ತರಬೇತಿ ನೀಡದಿರುವುದು ಇದಕ್ಕೆ ಕಾರಣವಾಗಿದೆ. ಇನ್ನಾದರೂ ಹೊಸ ಆವೃತ್ತಿಯಲ್ಲಿ  ತರಬೇತಿ ನೀಡಬೇಕೆಂಬುದು ಇಲಾಖೆಯ ಲೆಕ್ಕಾಚಾರವಾಗಿದೆ.
   ನೂತನ ಯೋಜನೆಯ ಅಂಗವಾಗಿ ವಿವಿಧ ಜಿಲ್ಲೆಗಳಲ್ಲಿ  ಸಂಬಂಧಪಟ್ಟ  ಕಾಲೇಜು, ಹೈಯರ್ ಸೆಕೆಂಡರಿ ಶಾಲೆಗಳ ಅಧಿಕಾರಿಗಳಿಗೆ ಜುಲೈ ಮೊದಲ ವಾರದಲ್ಲಿ  ಪ್ರಾಥಮಿಕ ತರಬೇತಿ ನೀಡಲಾಗಿದೆ. ವೆಬ್ಸೈಟ್  ಹೊಸ ವಿಧಾನದಲ್ಲಿರುವುದರಿಂದ ಹಲವು ಸಂಸ್ಥೆಗಳು ಕೋಸರ್್, ಶುಲ್ಕ ಮಾಹಿತಿ ಇತ್ಯಾದಿಗಳನ್ನು  ಇದುವರೆಗೆ ಅಪ್ಲೋಡ್ ಮಾಡಿಲ್ಲ. ಯೋಜನೆ ಕುರಿತು ಅಂತಿಮ ಹಂತದ ವ್ಯವಸ್ಥೆ  ಆಗದಿರುವುದರಿಂದ ಇ-ಗ್ರ್ಯಾಂಟ್ಸ್ ಆರಂಭಿಸಲು ಅಡಚಣೆಯಾಗಿರುವುದಾಗಿ ತಿಳಿದುಬಂದಿದೆ.
   2009ರಲ್ಲಿ  ಕೇರಳದಾದ್ಯಂತ ಇ-ಗ್ರ್ಯಾಂಟ್ಸ್ ಯೋಜನೆಯನ್ನು  ಪರಿಶಿಷ್ಟ  ಜಾತಿ ಮತ್ತು  ಪರಿಶಿಷ್ಟ  ವರ್ಗ ಇಲಾಖೆಯು ಜಾರಿಗೊಳಿಸಿತ್ತು. ಇದೀಗ 9 ವರ್ಷಗಳ ಬಳಿಕ ಅನ್ಲೈನ್ ವ್ಯವಸ್ಥೆಯಲ್ಲಿ  ಪರಿಷ್ಕರಣೆ ಮಾಡಲಾಗಿದೆ. ಇನ್ನೊಂದೆಡೆ ಸಾಫ್ಟ್ವೇರ್ ಪರಿಷ್ಕರಣೆಗಳ ಕುರಿತು ಹೆಚ್ಚಿನ ಅಧಿಕಾರಿಗಳಿಗೆ ಮತ್ತು  ಸಿಬ್ಬಂದಿಗಳಿಗೆ ಸರಿಯಾದ ಅರಿವಿಲ್ಲ. ಈ ಮಧ್ಯೆ ಅಕ್ಷಯ ಕೇಂದ್ರಗಳ ಮುಖಾಂತರ ಆನ್ಲೈನ್ ಸೌಕರ್ಯ ಕಲ್ಪಿಸಲಾಗಿದೆ.
    ಯೋಜನೆ ವಿಳಂಬಕ್ಕೆ ಪರಿಹಾರ : ಶಿಕ್ಷಣ ವಲಯಕ್ಕೆ ಸಂಬಂಧಿಸಿದ ಕಡತಗಳು ವಿಳಂಬಗೊಳ್ಳುವುದನ್ನು  ಪರಿಹರಿಸಲು, ಸ್ಕಾಲರ್ಶಿಪ್ ಹಣದ ದುರುಪಯೋಗ ತಡೆಗಟ್ಟಲು, ಆದೇಶ ಲಭಿಸಲಿರುವ ಅಡಚಣೆಯನ್ನು  ಬಗೆಹರಿಸಲು, ಸ್ಟೈಫಂಡ್ ಮೊತ್ತವನ್ನು  ಪ್ರತಿ ತಿಂಗಳು ವಿದ್ಯಾಥರ್ಿಗಳಿಗೆ ನೇರವಾಗಿ ಸ್ವೀಕರಿಸಲು ಸಾಧ್ಯವಾಗಿಸುವ ಉದ್ದೇಶದಿಂದ ಇ-ಗ್ರ್ಯಾಂಟ್ಸ್ ಯೋಜನೆಯನ್ನು  ಜಾರಿಗೊಳಿಸಲಾಗಿದೆ. ಆನ್ಲೈನ್  ಮೂಲಕ ಅಜರ್ಿ ಸಲ್ಲಿಸಿ 10 ದಿನಗಳೊಳಗೆ ಹಣ ದೊರಕಲಿದೆ ಎಂಬುದು ಈ ಹೊಸ ಯೋಜನೆಯ ವಿಶೇಷತೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries