HEALTH TIPS

No title

                      ಕೇರಳ ರಾಜ್ಯದಲ್ಲಿ  ರೀ ಸವರ್ೇ ಪ್ರಕ್ರಿಯೆಗೆ ಬ್ರೇಕ್
     ತಿರುವನಂತಪುರ: ರಾಜ್ಯದ ಭೂಮಿ ರೀ ಸವರ್ೇ ಪ್ರಕ್ರಿಯೆಗಳನ್ನು  ಇದೀಗ ನಿಲುಗಡೆ ಗೊಳಿಸಲಾಗಿದೆ. ಸಚಿವರ ಮಟ್ಟದ ಸಭೆಯನ್ನು  ಕೂಡ ನಡೆಸದೆ ಕೇರಳದ 14 ಜಿಲ್ಲೆಗಳ ವಿವಿಧ  ಗ್ರಾಮಗಳಲ್ಲಿ  ನಡೆಯುತ್ತಿದ್ದ  ರೀ ಸವರ್ೇಯನ್ನು  ನಿಲ್ಲಿಸಲಾಗಿದೆ. ಈ ಮಧ್ಯೆ ಕೇರಳದ ರೀ ಸವರ್ೇಯ ಮುಂದಿನ ಪ್ರಕ್ರಿಯೆಗಳನ್ನು  ಖಾಸಗಿ ವಲಯಕ್ಕೆ ಬಿಟ್ಟುಕೊಡುವ ಸೂಚನೆಯಿದೆ.
    ಸವರ್ೇ ಪ್ರಕ್ರಿಯೆಗಳ ಪ್ರಗತಿ ಮೌಲ್ಯಮಾಪನ ನಡೆಸಲು ಜೂನ್ 28ರಂದು ತಿರುವನಂತಪುರದಲ್ಲಿ  ಎಲ್ಲ  ಜಿಲ್ಲೆಗಳಿಗೆ ಸಂಬಂಧಿಸಿ ವೀಡಿಯೋ ಕಾನರೆನ್ಸ್  ನಡೆದಿತ್ತು. ರಾಜ್ಯ ಮತ್ತು  ಜಿಲ್ಲಾ  ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದ  ಈ ಕಾನರೆನ್ಸ್  ಸಭೆಯು ಸವರ್ೇ ಪ್ರಕ್ರಿಯೆಗಳಲ್ಲಿ  ಅಗತ್ಯದ ಪ್ರಗತಿ ಇಲ್ಲ  ಎಂಬ ಕಾರಣಕ್ಕೆ 32 ಗ್ರಾಮಗಳ ರೀ ಸವರ್ೇಯನ್ನು  ನಿಲ್ಲಿಸಲಾಗಿದೆ. ಆಗಸ್ಟ್  31ರ ಮುಂಚಿತವಾಗಿ ಕ್ರಮಗಳನ್ನು  ಪೂತರ್ಿಗೊಳಿಸಲಾಗುವ ಸ್ಥಳಗಳಲ್ಲಿ  ಮಾತ್ರವೇ ಇನ್ನು  ಸವರ್ೇ ನಡೆಯಲಿದೆ.
   ಇದರ ಆಧಾರದಲ್ಲಿ  ಸವರ್ೇ ಇಲಾಖೆಯ ಸವರ್ೇಯರ್, ಹೆಡ್ ಸವರ್ೇಯರ್, ಡ್ರಾಫ್ಟ್ಸ್ಮೆನ್, ಹೆಡ್ ಡ್ರಾಫ್ಟ್ಸ್ಮೆನ್ ಅವರನ್ನು  ತಾಲೂಕು ಕಚೇರಿಗಳಿಗೆ ವಗರ್ಾಯಿಸಲು ನಿರ್ಧರಿಸಲಾಗಿದೆ. ರಾಜ್ಯದ ಸವರ್ೇ ಪ್ರಕ್ರಿಯೆಗಳನ್ನು  ಅಂಗೀಕೃತ ಏಜೆನ್ಸಿಗಳಿಗೆ ಹಸ್ತಾಂತರಿಸಿ ಡಿಜಿಟಲ್ ಸವರ್ೇ ನಡೆಸುವುದರ ಅಂಗವಾಗಿ ಈ ತೀಮರ್ಾನ ಕೈಗೊಳ್ಳಲಾಗಿದೆ.
ಇದಲ್ಲದೆ ಜಿಲ್ಲೆಗಳ ವಿವಿಧ ಭಾಗಗಳಲ್ಲಿ  ಫಯಲ್ ಅದಾಲತ್ ನಡೆಸಿ ಲ್ಯಾಂಡ್ ರೆಕಾಡ್ಸರ್್ ಆ್ಯಂಡ್ ಮೈಂಟೆನೆನ್ಸ್ (ಎಲ್ಆರ್ಎಂ) ದೂರುಗಳನ್ನು  ಇತ್ಯರ್ಥಗೊಳಿಸಲು ಇಲಾಖೆಯ ನೌಕರರನ್ನು  ವಗರ್ಾಯಿಸಿರುವುದಾಗಿ ಅಧಿಕೃತ ಮಾಹಿತಿಯಿದೆ. ತಾಲೂಕು ಕಚೇರಿಗಳಲ್ಲಿ  ಸವರ್ೇ ಕಾರ್ಯಕ್ಕೆ ಸಂಬಂಸಿ ವಿಲೇವಾರಿ ನಡೆಸದೆ ಮೂಲೆಗುಂಪಾದ ಕಡತಗಳನ್ನು  ಸರಿಪಡಿಸಲು ಎಂಬ ಹೆಸರಿನಲ್ಲಿ  ಈ ಆದೇಶ ಹೊರಡಿಸಲಾಗಿದೆ.
    ಆದರೆ ಡಿಸೆಂಬರ್ ವರೆಗೆ ರಾಜ್ಯದಲ್ಲಿ  ಎಲ್ಲಿ  ಕೂಡ ಇನ್ನು  ರೀ ಸವರ್ೇಗೆ ಸಂಬಂಧಿಸಿದ ಯಾವುದೇ ಹೊಸ ಕೆಲಸಗಳು ನಡೆಯದು. ನಂತರ 2019ರ ಜನವರಿ 1ರಿಂದ ಕೇರಳ ಸರಕಾರವು ಅಂಗೀಕರಿಸುವ ಖಾಸಗಿ ಏಜೆನ್ಸಿಗೆ ಈ ಕಾರ್ಯ ಚಟುವಟಿಕೆಗಳನ್ನು  ಹಸ್ತಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ.
    ಹೊಸ ಕ್ರಮೀಕರಣದ ಅಂಗವಾಗಿ ಡ್ರಾಫ್ಟ್ಸ್ಮೆನ್, ಹೆಡ್ ಡ್ರಾಫ್ಟ್ಸ್ಮೆನ್ ಅವರು ಫೀಲ್ಡ್ನಲ್ಲಿ  ರೀ ಸವರ್ೇ, ಎಲ್ಆರ್ಎಂ ಅವರ ನೌಕರಿಗಳನ್ನು  ನಿರ್ವಹಿಸಬೇಕಾಗಿದೆ. ಈಗಿರುವ ವಿಧಾನದ ಪ್ರಕಾರ ಸವರ್ೇಯರ್ಗಳು ಫೀಲ್ಡ್ನಲ್ಲಿ  ತಯಾರಿಸುವ ರೆಕಾಡರ್್ಗಳನ್ನು  ಕಚೇರಿಯಲ್ಲಿ  ಡ್ರಾಫ್ಟ್ಸ್ಮೆನ್ಗಳು ತಪಾಸಣೆ ನಡೆಸಿ ಕುಂದುಕೊರತೆಗಳಿದ್ದರೆ ಅಗತ್ಯ ತಿದ್ದುಪಡಿಗಳನ್ನು  ಮಾಡುತ್ತಾರೆ. ಡ್ರಾಫ್ಟ್ಸ್ಮೆನ್ಗಳನ್ನು  ಫೀಲ್ಡ್ನಲ್ಲಿ  ನಿಯೋಜಿಸುವುದರೊಂದಿಗೆ ಇದು ಇಲ್ಲದಾಗಲಿದೆ.
     ನೂತನ ಕ್ರಮೀಕರಣ ಯೋಜನೆ :
   ಎಲ್ಆರ್ಎಂ ವಿಭಾಗ ಅಜರ್ಿಗಳನ್ನು  ಇತ್ಯರ್ಥಗೊಳಿಸುವುದರ ಅಂಗವಾಗಿ ತಾಲೂಕು ಮಟ್ಟದಲ್ಲಿರುವ ಮಾಹಿತಿಗಳನ್ನು  ನಿದರ್ೇಶನಾಲಯ ಸಂಗ್ರಹಿಸಿತ್ತು. ಮೂರು ತಿಂಗಳಲ್ಲಿ  ರಾಜ್ಯದ ಎಲ್ಲ  ಎಲ್ಆರ್ಎಂ ಅಜರ್ಿಗಳನ್ನು  ಪೂತರ್ಿಗೊಳಿಸಲು ನೂತನ ಕ್ರಮೀಕರಣ ನಡೆಸಲಾಗಿದೆ ಎಂಬ ವಾದ ಕೇಳಿ ಬರುತ್ತಿದೆ. ಆದರೆ ಖಾಸಗಿ ವಲಯವನ್ನು  ಸಹಕರಿಸುವ ಮೂಲಕ   ಮತ್ತು  ಡಿಜಿಟಲ್ ಸವರ್ೇ ಜಾರಿಗೊಳಿಸುವ ಮುಖೇನ ಕಾಲಾಂತರಗಳಿಂದ ರಾಜ್ಯದಲ್ಲಿ  ಕಾಯರ್ಾಚರಿಸುತ್ತಿರುವ ಸವರ್ೇ, ಭೂದಾಖಲೆ ನೌಕರರಿಗೆ ಆತಂಕದ ಸ್ಥಿತಿ ಉಂಟಾಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries