ವಿಕಲಚೇತನರು ಉದ್ಯೋಗ ನೋಂದಾಯಿಸಲು ಕರೆ
ಮುಳ್ಳೇರಿಯ: ವಿಕಲಚೇತನರ ಪುರೋಗತಿಗಾಗಿ, ಅವರಿಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರಕಾರದ ಸಂಸ್ಥೆಯಾಗಿರುವ ವಿಕಲಚೇತನರ ರಾಷ್ಟ್ರೀಯ ಉದ್ಯೋಗ ಸೇವಾ ಕೇಂದ್ರದ ಪ್ರಯೋಜನವು ಮಾಹಿತಿಯ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಿಗುತ್ತಿಲ್ಲ. ವಿಕಲಚೇತನರಾದ ಪ್ರತಿಯೊಬ್ಬರೂ ಈ ಸಂಸ್ಥೆಯಲ್ಲಿ ಉದ್ಯೋಗ ನೋಂದಣಿಯನ್ನು ಮಾಡಿಕೊಳ್ಳಬೇಕು ಎಂದು ವಿಕಲಚೇತನರ ರಾಷ್ಟ್ರೀಯ ಉದ್ಯೋಗ ಸೇವಾ ಕೇಂದ್ರದ ಯೋಜನಾ ಸಂಯೋಜಕ ನಿರೇಶ್ ವಿ. ಜಿ. ಅವರು ಹೇಳಿದರು.
ಅವರು ಬೋವಿಕ್ಕಾನದ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಕಲಚೇತನರ ರಾಷ್ಟ್ರೀಯ ಉದ್ಯೋಗ ಸೇವಾ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್. ಎಸ್. ಎಸ್.)ಯ ಕುಂಬಳೆ ಕ್ಲಸ್ಟರ್ ವತಿಯಿಂದ ನಡೆದ ವಿಕಲಚೇತನರ ಉದ್ಯೋಗ ನೋಂದಾವಣೆ ಕಾರ್ಯಕ್ರಮದಲ್ಲಿ ಸರಕಾರದ ಯೋಜನೆಯನ್ನು ವಿವರಿಸುತ್ತ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಳಿಯಾರು ಗ್ರಾಮ ಪಂಚಾಯತು ಸದಸ್ಯೆ ಅನೀಸ ಮನ್ಸೂರ್ ಮಲ್ಲತ್ತ್ ಅವರು ಮಾತನಾಡಿ ಇಂತಹ ಯೋಜನೆಗಳ ಮಾಹಿತಿ ಗ್ರಾಮೀಣ ಪ್ರದೇಶದ ಜನರಿಗೆ ತಲುಪುವಂತಾಗಿ ವಿಕಲಚೇತನರಿಗೆ ಅದರ ಪೂರ್ಣ ಫಲ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಸೇವಾ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದು ಕರೆ ಇತ್ತರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ. ಬಿ. ಮೊಹಮ್ಮದ್ ಕುಂಞ್ಞಿ ಅವರು ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಎಂಡೋಸಲ್ಫಾನ್ ಬಾಧಿತ ಪ್ರದೇಶವಾದ ಬೋವಿಕ್ಕಾನದಲ್ಲಿ ಇಂತಹ ಶಿಬಿರವನ್ನು ಆಯೋಜಿಸಿರುವ ಬಗ್ಗೆ ಶ್ಲಾಘಿಸಿದರು. ಶಾಲಾ ಪ್ರಾಂಶುಪಾಲ ಮೆಜೋ ಜೋಸೆಫ್. ವಿ., ಮುಖ್ಯೋಪಾಧ್ಯಾಯ ಅರವಿಂದಾಕ್ಷನ್ ನಂಬಿಯಾರ್, ನೌಕರ ಸಂಘದ ಕಾರ್ಯದಶರ್ಿ ಕರೀಂ ಕೋಯಕ್ಕಿಲ್, ಮಣಿಕಂಠನ್. ಎಂ ಶುಭಾಶಂಸನೆಗೈದರು.
ರಾಷ್ಟ್ರೀಯ ಸೇವಾ ಯೋಜನೆಯ ಪಿ. ಎ. ಸಿ. ಸದಸ್ಯ ಶಾಹುಲ್ ಹಮೀದ್ ಸ್ವಾಗತಿಸಿ, ಎನ್. ಎಸ್. ಎಸ್. ಸಂಯೋಜನಾಕಾರಿ ಪ್ರೀತಮ್ ಎ.ಕೆ. ವಂದಿಸಿದರು. ಸುಮಾರು ನೂರರಷ್ಟು ವಿಕಲಚೇತನರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.