ಸೂಪರ್ ಸಾನಿಕ್ ಕ್ರೂಸ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಒಡಿಶಾ: ಇಲ್ಲಿನ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಿಂದ ಇಂದು ಉಡಾಯಿಸಲಾದ ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಸೋಮವಾರ ಬೆಳಿಗ್ಗೆ 10-15 ರಸುಮಾರಿನಲ್ಲಿ ಉಡಾಯಿಸಲಾದ ಕ್ಷಿಪಣಿ ನಿಗದಿತ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ ಮೂಲಗಳು ಹೇಳಿಕೆ ನೀಡಿವೆ.
ಇದೇ ವರ್ಷದ ಮೇ 21 ಹಾಗೂ 22 ರಂದು ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಸ್ವದೇಶಿ ನಿಮರ್ಿತ ಎರಡು ಬ್ರಹ್ಮೊಸ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು. ಈಗ ಮೂರನೇ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದ್ದು, ಇಂಧನ ನಿರ್ವಹಣೆ ವ್ಯವಸ್ಥೆ ಮತ್ತಿತರ ಅಂಶಗಳನ್ನು ಈ ಕ್ಷಿಪಣಿ ಹೊಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡಿಆರ್ ಡಿ ಒ ಹಾಗೂ ರಷ್ಯಾದ ಎನ್ ಪಿಓಎಂ ಜಂಟಿ ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ದಿಪಡಿಸಲಾಗಿದ್ದು, ಭಾರತೀಯ ಸೇನೆ, ಭಾರತೀಯ ನೌಕೆ ಹಾಗೂ ವಾಯುಪಡೆಯ ಕಾಯರ್ಾಚರಣೆಗಳಲ್ಲಿ ಇದನ್ನು ಬಳಸಬಹುದಾಗಿದೆ.