HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಚಬಹಾರ್ ಹೂಡಿಕೆ ಭರವಸೆ ಈಡೇರಿಸದಿದ್ದರೆ ವಿಶೇಷ ಸವಲತ್ತುಗಳಿಗೆ ಕತ್ತರಿ: ಭಾರತಕ್ಕೆ ಇರಾನ್ ಎಚ್ಚರಿಕೆ
     ನವದೆಹಲಿ: ಚಬಹಾರ್ ಬಂದಿನ ವಿಸ್ತರಣೆಯ ಯೋಜನೆಯಲ್ಲಿ ನೀಡಲಾಗಿದ್ದ ಹೂಡಿಕೆ ಭರವಸೆಗಳನ್ನು ಈಡೇರಿಸದ ಭಾರತದ ವಿರುದ್ಧ ಇರಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
    ಇರಾನ್ ನ ಉಪ ರಾಯಭಾರಿ ಮಸೂದ್ ರೆಜ್ವಾನಿಯನ್ ರಹಾಘಿ ಪ್ರಮುಖ ಭಾರತ-ಇರಾನ್ ನಡುವಿನ ಕಾರ್ಯತಂತ್ರದ ಭಾಗವಾಗಿರುವ ಚಬಹಾರ್ ಬಂದರಿಗೆ ಹೂಡಿಕೆ ಮಾಡುವ ಸಂಬಂಧ ಭಾರತ ನೀಡಿದ್ದ ಭರವಸೆಗಳು ಈ ವರೆಗೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತವನ್ನು ಟೀಕಿಸಿದ್ದಾರೆ.
    ಇದೇ ವೇಳೆ ಇರಾನ್ ನಿಂದ ತೈಲ ಆಮದ ಪ್ರಮಾಣವೂ ಇಳಿಕೆಯಾಗಿರುವುದರ ಬಗ್ಗೆಯೂ ಮಾತನಾಡಿರುವ ಇರಾನ್ ನ ಉಪರಾಯಭಾರಿ, ಇರಾನ್ ನಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ ಭಾರತ ಇರಾನ್ ನಿಂದ ಪಡೆಯುತ್ತಿರುವ ವಿಶೇಷ ಸವಲತ್ತುಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
   ಚಬಹಾರ್ ಬಂದರಿನಲ್ಲಿ ಈವರೆಗೂ ಭಾರತ ನೀಡಿದ್ದ ಭರವಸೆಗಳ ಪ್ರಕಾರ ಹೂಡಿಕೆ ಮಾಡದೇ ಇರುವುದು ದುರದೃಷ್ಟಕರ, ಹೂಡಿಕೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ  ಈಗಲಾದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಇರಾನ್ ನ ಅಧಿಕಾರಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries