HEALTH TIPS

No title

               ಕಿನ್ನಿಂಗಾರಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
   ಮುಳ್ಳೇರಿಯ: ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ ಚಂದ್ರಗಿರಿ ವಲಯ ಆಶ್ರಯದಲ್ಲಿ ಕಿನ್ನಿಂಗಾರಿನ ಕೆ. ಆರ್. ಸೆಂಟರಿನಲ್ಲಿ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು ಮತ್ತು ಸ್ಫೂತರ್ಿ ಲ್ಯಾಬ್ ಅಡೂರು ಇವರ ಸಹಕಾರದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ, ರಕ್ತಗುಂಪು ನಿರ್ಣಯ ಮತ್ತು ಮಧುಮೇಹ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರಗಿತು.
    ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಚಂದ್ರಗಿರಿ ವಲಯ ಸಹಾಯ ಪ್ರಧಾನ ಡಾ. ಶಿವಕುಮಾರ್ ಅಡ್ಕ  ಧ್ವಜಾರೋಹಣ ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
   ಮುಳ್ಳೇರಿಯ ಹವ್ಯಕ ಮಂಡಲ ಸಹಾಯ ಪ್ರಧಾನ ಡಾ.ಡಿ.ಪಿ ಭಟ್  ದೀಪಜ್ವಲನ ಮಾಡಿ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು. ಡಾ.ಆನಂದ್ ಯಸ್ ಹಂದೆ ಮಾತನಾಡಿ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಡಾ. ತಿರುಮಲೇಶ್ ಕೆ. ಯಸ್ ಉಪಸ್ಥಿತರಿದ್ದು ಶಿಬಿರದ ಯಶಸ್ವಿಗೆ ಸಹಕರಿಸಿದರು.
ಮಚ್ಚೇಂದ್ರನಾಥ್ ಮತ್ತು ಗಣೇಶ್ ಪ್ರಸಾದ್ ಇವರು ನೇತ್ರ ತಪಾಸಣಾ ವಿಭಾಗದ ಸಂಯೋಜನೆ ಮತ್ತು ಕಾರ್ಯನಿರ್ವಹಣೆ ಮಾಡಿದರು.
   ಈ ಸಂದರ್ಭದಲ್ಲಿ ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮುಳ್ಳೇರಿಯ ಹವ್ಯಕ ಮಂಡಲ ಸಂಸ್ಕಾರ ವಿಭಾಗ ಪ್ರಧಾನ ನವನೀತಪ್ರಿಯ ಕೈಪ್ಪಂಗಳ, ಮುಷ್ಠಿ ಭಿಕ್ಷಾ ಪ್ರಧಾನೆ ಗೀತಾಲಕ್ಷ್ಮಿ, ಚಂದ್ರಗಿರಿ ವಲಯ ಪದಾಧಿಕಾರಿಗಳಾದ ಹರಿಯಪ್ಪ ಭಟ್, ಜಿ. ಕೆ. ಕುಳೂರು, ಸುಬ್ರಹ್ಮಣ್ಯ ಭಟ್ ಮೀನಗದ್ದೆ, ಸೌಮ್ಯಾ ಜಿ ಕೆ , ಶಾಮ್ ಪ್ರಸಾದ್ ಕೈಪ್ಪಂಗಳ, ರಾಜಗೋಪಾಲ ಕುಂಜತ್ತೋಡಿ, ತ್ರಿಪುರಾ ಸಂಯುಕ್ತ ಮತ್ತು ಗುರಿಕ್ಕಾರರುಗಳು ಉಪಸ್ಥಿತರಿದ್ದು ಸಹಕರಿಸಿದರು. ಶ್ರೀಲಕ್ಷ್ಮಿ ಪೆಲತ್ತಡಿ , ಕವನ ಕೈಪ್ಪಂಗಳ ಇವರು ಪ್ರಾರ್ಥನೆ ಹಾಡಿದರು. ವಲಯ ಕಾರ್ಯದಶರ್ಿ ರಾಜಗೋಪಾಲ ಕೈಪ್ಪಂಗಳ ವಂದಿಸಿದರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries