HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಸಮಕಾಲೀನ ವಸ್ತು ವಿಷಯಗಳ ಕಥೆಗಳು ಬದುಕಿಗೆ ಮಾರ್ಗದಶರ್ಿ-ಕೃಷ್ಣವೇಣಿ ಕಿದೂರು
                          ಕಥಾ ಸಲ್ಲಾಪ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅನಿಸಿಕೆ
    ಕುಂಬಳೆ: ಬದುಕಿನ ದೈನಂದಿನ ಆಗುಹೋಗುಗಳಿಗೆ ನಿಕಟವಾಗಿರುವ ಸಮಕಾಲೀನ ಕಥೆಗಳಿಗೆ ಸಾಹಿತ್ಯ ಪ್ರಪಂಚದಲ್ಲಿ ಬೇಡಿಕೆ ಇದೆ. ವ್ಯಕ್ತಿ ಕೇಂದ್ರಿತವಲ್ಲದ ವಸ್ತುಗಳನ್ನು ಹೆಚ್ಚು ಉತ್ಪ್ರೇಕ್ಷೆಗಳಿಲ್ಲದೆ ಕಟ್ಟಿಕೊಡುವ ಕಲೆಗಾರಿಕೆ ಯುವ ಕಥೆಗಾರರಲ್ಲಿ ಇರಬೇಕು ಎಂದು ಲೇಖಕಿ, ಕಥೆಗಾತರ್ಿ ಕೃಷ್ಣವೇಣಿ ಕಿದೂರು ಅಭಿಪ್ರಾಯ ವ್ಯಕ್ತಪಡಿಸಿದರು.
    ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸಾಹಿತ್ತಿಕ ಕಾರ್ಯಕ್ರಮಗಳ ಭಾಗವಾಗಿ ಭಾನುವಾರ ಅಪರಾಹ್ನ ಸೀತಾಂಗೋಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಐದನೇ ಸರಣಿ ಸಾಹಿತ್ಯ ಕಾರ್ಯಕ್ರಮ "ಕಥಾ ಸಲ್ಲಾಪ"  ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ಕಾಸರಗೋಡಿನ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಕಥಾ ಸಾಹಿತ್ಯ ಪರಿಪುಷ್ಟವಾಗಿ ಬೆಳೆದು ಬಂದಿದೆ. ಎಂ.ವ್ಯಾಸರಂತಹ ಮಹಾನ್ ಕವಿಗಳ ಕಥೆಗಳು ಯುವ ಕಥೆಗಾರರಿಗೆ ಮಾರ್ಗದಶರ್ಿಯಾಗಿದ್ದು, ಮನುಷ್ಯನ ನಿತ್ಯ ಜೀವನದ ನೋವು-ನಲಿವು-ಸಂಘರ್ಷ, ಅಚ್ಚರಿಗಳು ವಸ್ತು ವಿಷಯಗಳಾಗಿ ಕಥೆಗಳಾಗುವುದು ಮುಂದಿನ ತಲೆಮಾರಿಗೆ ಇತಿಹಾಸವಾಗಿ, ಬದುಕಿಗೆ ಮಾರ್ಗದಶರ್ಿಯಾಗಿ ನೆರವಾಗುತ್ತದೆ ಎಂದು ಅವರು ತಿಳಿಸಿದರು.
   ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾಹಿತಿ, ಲೇಖಕ, ಪುತ್ತಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜಾ ಅವರು ಮಾತನಾಡಿ, ಆಳವಾದ ಜೀವನಾನುಭವಗಳಿಂದ ಹೊರಹೊಮ್ಮುವ ಕಥಾ ಸಾಹಿತ್ಯ ವ್ಯಕ್ತಿ-ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದರು. ಹೆಚ್ಚು ಚಿಂತನೆಗಳಿಗೆ ಎಡೆಮಾಡುವ ಚಿಕ್ಕ-ಚೊಕ್ಕ ಕಥೆಗಳು ಇಂದು ಅಗತ್ಯವಿದ್ದು, ಯುವ ಕಥೆಗಾರರು ಹೆಚ್ಚು ಓದು ಮತ್ತು ಅನುಭವಗಳನ್ನು ಸಂಪಾದಿಸುವಲ್ಲಿ ಕ್ರಿಯಾಶೀಲರಾಗಬೇಕೆಂದು ಅವರು ಈ ಸಂದರ್ಭ ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಪಿಸಿಆರ್ಐಯ ಹಿರಿಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಹಳೆಮನೆ ಅವರು ಮಾತನಾಡಿ, ಕಲೆ-ಸಾಹಿತ್ಯಗಳು ಸಂಘರ್ಷ ರಹಿತ ಸಮಾಜ ನಿಮರ್ಾಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಹೆಚ್ಚು ಕ್ರಿಯಾಶೀಲತೆ ಮತ್ತು ಧನಾತ್ಮಕ ಚಿಂತನೆಗಳಿಂದೊಡಗೂಡಿದ ಕಥಾ ಸಾಹಿತ್ಯ ಅಭಿವೃದ್ದಿಶೀಲ ಸಮಾಜದ ಪ್ರಾಮುಖ್ಯ ಅಂಗ ಎಂದು ತಿಳಿಸಿದರು.
  ಕಲಾಗ್ರಾಮದ ನಿದರ್ೇಶಕ ಪ್ರಸಾದ್ ಮಣಿಯಂಪಾರೆ, ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯ ಕೆ.ಮೊಹಮ್ಮದ್ ಕುಂಞಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ನಡೆದ ಕಥಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ,ಹರೀಶ್ ಪೆರ್ಲ, ಸನ್ನಿಧಿ ಟಿ. ರೈ, ಸಹನಾ ಡಿ, ಪದ್ಮಾವತಿ ಪೆರಡಾಲ, ಜ್ಯೋಸ್ನ್ಯಾ ಕಡಂದೇಲು, ಪಾರ್ವತಿ ಎಂ. ಭಟ್ ಕೂಳಕ್ಕೋಡ್ಳು, ಶಾರದಾ ಎಸ್.ಭಟ್ ಕಾಡಮನೆ, ರಾಜಶ್ರೀ ಟಿ.ರೈ, ಸುಭಾಶ್ ಪೆರ್ಲ, ಚೇತನಾ ಕುಂಬ್ಳೆ, ಶ್ವೇತಾ ಕಜೆ, ಶ್ಯಾಮಲಾ ರವಿರಾಜ್, ಚಿತ್ರಕಲಾ ಆಚಾರ್ಯ, ಲತಾ ಆಚಾರ್ಯ ಬನಾರಿ, ಸುಶೀಲಾ ಪದ್ಯಾಣ, ಪ್ರಭಾವತಿ ಕೆದಿಲಾಯ ಪುಂಡೂರು, ದಯಾನಂದ ರೈ ಕಲ್ವಾಜೆ, ಅಭಿಲಾಷ್ ಎಸ್.ಬಿ.ಪೆರ್ಲ,ಚಿತ್ತರಂಜನ್ ಕಡಂದೇಲು ಸ್ವರಚಿತ ಕಥೆಗಳನ್ನು ವಾಚಿಸಿದರು.
   ಕವಿ ಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ಪುರುಷೋತ್ತಮ ಭಟ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ರವಿರಾಜ್ ಪ್ರಾರ್ಥನಾ ಗೀತೆ ಹಾಡಿದರು.
   ಮೂರುಗಂಟೆಗಳ ಕಾಲ ನಡೆದ ಸುಧೀರ್ಘ ಕಥಾಗೋಷ್ಠಿ, ಗಡಿನಾಡಿನ ಯುವ ಸಾಹಿತಿಗಳ ವೈವಿಧ್ಯ ಮಥೆಗಳೊಂದಿಗೆ ಸುಂದರವಾಗಿ ಮೂಡಿಬಂತು. ವಿದ್ಯಾಥರ್ಿಗಳಾದ ಚಿತ್ತರಂಜನ್ ಕಡಂದೇಲು, ಅಭಿಲಾಷ್ ಎಸ್.ಬಿ.ಪೆರ್ಲ ಹಾಗೂ ಸನ್ನಿಧಿ ಟಿ.ರೈ ಯವರ ಕಥೆಗಳು ಗಮನ ಸೆಳೆದವು. ರಾಜಶ್ರೀ ಟಿ.ರೈ ಹಾಗೂ ಶ್ವೇತಾ ಕಜೆ ತುಳು ಕಥೆಗಳನ್ನು ವಾಚಿಸಿದರು. ಹಿರಿಯ ಸಾಹಿತಿ ಹರೀಶ್ ಪೆರ್ಲ ಮೊಬೈಲ್ ಬಳಕೆಯ ಗೊಂದಲಗಳ ವಿಷಯವನ್ನೊಳಗೊಂಡ ಸಕಾಲಿಕ ಕಥೆಯ ವಾಚನದ ಮೂಲಕ ಗಮನ ಸೆಳೆದರು. ನಿವೃತ್ತ ಉಪಜಿಲ್ಲಾಧಿಕಾರಿ, ಕನ್ನಡ ಹೋರಾಟಗಳ ಮುಂಚೂಣಿಯ ಕಾರ್ಯಕರ್ತ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಜಿಲ್ಲಾ ಕ್ರೈಂ ಬ್ರಾಂಚ್ ಪೋಲೀಸ್ ಅಧಿಕಾರಿ ಪರಮೇಶ್ವರ ನಾಯ್ಕ, ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ, ಧಾಮರ್ಿಕ ಸಂಘಟಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಉದ್ಯಮಿ ತಾರಾನಾಥ ರೈ ಪೆರ್ಲ ಪಾಲ್ಗೊಂಡು ಗಮನ ಸೆಳೆದರು.
                                               ಪೋಟೋ: ಸ್ವಸ್ತಿ ಸ್ಟುಡಿಯೋ ಪೆರ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries