HEALTH TIPS

No title

                   ಪಶ್ಚಿಮ ಬಂಗಾಳ ಅಲ್ಲ, 'ಬಾಂಗ್ಲಾ'; ರಾಜ್ಯದ ಹೆಸರು ಬದಲಾವಣೆಗೆ ಮುಂದಾದ ಮಮತಾ ಸಕರ್ಾರ
    ಕೋಲ್ಕತಾ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಮಮತಾ ಬ್ಯಾನಜರ್ಿ ತಮ್ಮ ರಾಜ್ಯದ ಹೆಸರನ್ನು 'ಬಾಂಗ್ಲಾ' ಎಂದು ಮರು ನಾಮಕರಣ ಮಾಡಲು ಮುಂದಾಗಿದ್ದಾರೆ.
    ರಾಜ್ಯದ ಹೆಸರು ಬದಲಾಣೆಗೆ ಈ ಹಿಂದೆಯೇ ಸಿಎಂ ಮಮತಾ ಬ್ಯಾನಜರ್ಿ ಸಕರ್ಾರ ಮುಂದಾಗಿತ್ತಾದರೂ ಇದಕ್ಕೆ ಪರ-ವಿರೋಧ ಚಚರ್ೆಗಳು ಎದುರಾಗಿದ್ದರಿಂದ ಕೆಲ ಕಾಲ  ಈ ವಿವಾದಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಸ್ವತಃ ತೃಣಮೂಲ ಕಾಂಗ್ರೆಸ್ ಪಕ್ಷ ಬಂಗಾಳ ವಿಧಾನಸಭೆಯಲ್ಲಿ ಈ ಬಗ್ಗೆ ಮಸೂದೆಯನ್ನು ಮಂಡಿಸುವ ಮೂಲಕ ಮತ್ತೆ ಹಳೆಯ ವಿವಾದಕ್ಕೆ ನೀರೆರದಿದೆ.
    ಗುರುವಾರ ನಡೆದ ವಿಧಾನಸಭೆ ಕಲಾಪದಲ್ಲಿ ಪಶ್ಚಿಮ ಬಂಗಾಳ ಸಕರ್ಾರ ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರು ನಾಮಕರಣ ಮಾಡುವ ಮಸೂದೆಯನ್ನು ಮಂಡಿಸಿತು. ಇದಕ್ಕೆ ಟಿಎಂಸಿ ಸೇರಿದಂತೆ ಕೆಲ ಸ್ಥಳೀಯ ಪಕ್ಷೇತರ ಶಾಸಕರೂ ಬೆಂಬಲ ನೀಡುವುದರೊಂದಿಗೆ ಮಸೂದೆಗೆ ಅನುಮೋದನೆ ದೊರೆತಿದೆ ಎನ್ನಲಾಗಿದೆ. ಇನ್ನು ವಿಧಾನಸಭೆಯ ನಿರ್ಣಯಕ್ಕೆ ಗೃಹ ಸಚಿವಾಲಯ ಅನುಮೋದನೆ ನೀಡಿದ್ದೇ ಆದರೆ ಆಗ ಪಶ್ಚಿಮ ಬಂಗಾಳದ ಹೆಸರು ಅಧಿಕೃತವಾಗಿ 'ಬಾಂಗ್ಲಾ' ಆಗಲಿದೆ.
ಈ ಹಿಂದೆಯೇ ಪ್ರಸ್ತಾಪವಾಗಿತ್ತು ಹೆಸರು ಬದಲಾವಣೆ :
    ಈ ಹಿಂದೆಯೇ ಕಳೆದ ವರ್ಷವೇ ಪಶ್ಚಿಮ ಬಂಗಾಳ ಸಕರ್ಾರ ಹೆಸರು ಬದಲಾವಣೆದೆ ಮಸೂದೆ ಮಂಡಿಸಿ ಅನುಮೋದನೆಯನ್ನೂ ಪಡೆದಿತ್ತು. ಆದರೆ ಇಂಗ್ಲೀಷ್ ನಲ್ಲಿ ಬೆಂಗಾಲ್ ಎಂದು ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿ ಬಾಂಗ್ಲಾ ಎಂದು ನಾಮಕರಣ ಮಾಡಲು ಮುಂದಾಗಿತ್ತು. ಆದರೆ ಸಕರ್ಾರದ ಈ ಪ್ರಸ್ತಾಪಕ್ಕೆ ಗೃಹಸಚಿವಾಲಯ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಅಂದಿನ ಮಸೂದೆ ವಿಫಲವಾಗಿತ್ತು. ಇದೀಗ ಮೂರೂ ಭಾಷೆಗಳಲ್ಲೂ ರಾಜ್ಯದ ಹೆಸರನ್ನು ಬಾಂಗ್ಲಾ ಎಂದು ಎಂದು ನಿರ್ಧರಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries