HEALTH TIPS

No title

                     ಐಸಿಸ್ ಸೇರಿದವರ ಆಸ್ತಿ ಮುಟ್ಟುಗೋಲು
      ಕಾಸರಗೋಡು: ಕೇರಳದಿಂದ ಉಗ್ರಗಾಮಿ ಸಂಘಟನೆ ಐಸಿಸ್ ಸೇರಿದವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ.
   ಭಯೋತ್ಪದಕ ಕೃತ್ಯಗಳಿಗಾಗಿ ದೇಶ ಬಿಟ್ಟು ಹೋದವರ ಆಸ್ತಿ ಮುಟ್ಟುಗೋಲು ಹಾಕುವುದಕ್ಕೆ ಕೊಚ್ಚಿ ಎನ್ಐಎ ನ್ಯಾಯಾಲಯ ನಿದರ್ೇಶ ನೀಡಿದ ಪ್ರಕಾರ ಪ್ರಕ್ರಿಯೆ ಆರಂಭಗೊಂಡಿದೆ.
   ಈ ನಿಟ್ಟಿನಲ್ಲಿ ಕೇರಳದಿಂದ ಐಸಿಸ್ಗೆ ಸೇರಿದವರ ಸಂಘದ ಮುಖ್ಯಸ್ಥ ಕಾಸರಗೋಡು ಪಡನ್ನ ನಿವಾಸಿ ಅಬ್ದುಲ್ ರಶೀದ್ನ ಆಸ್ತಿಗಳ ಕುರಿತು ಮೊದಲ ಹಂತದಲ್ಲಿ ಕಂದಾಯ ಇಲಾಖೆ ಸಂಗ್ರಹಿಸಿದೆ. ರಶೀದ್ನ ಕಾಸರಗೋಡಿನಲ್ಲಿರುವ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.
   ಮನೆ ಹೊಂದಿರುವ ಕಾಸರಗೋಡು ಜಿಲ್ಲೆಯ ತೃಕ್ಕರೀಪುರ ಸೌತ್ ಗ್ರಾಮಾಧಿಕಾರಿಯರು ನ್ಯಾಯಾಲಯದ ನಿದರ್ೇಶನದ ಪ್ರಕಾರ ಕಂದಾಯ ವಸೂಲಾತಿ ಕ್ರಮ ಆರಂಭಿಸಿದ್ದಾರೆ. ಆಗಸ್ಟ್ 13ರಂದು ರಶೀದ್ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ನಿದರ್ೇಶನ ನೀಡಿದೆ. ರಶೀದ್ ಸಹಿತ 21 ಮಂದಿ ಕಾಸರಗೋಡು, ಪಾಲ್ಘಾಟ್ ಜಿಲ್ಲೆಗಳಿಂದ ಅಫಘಾನಿಸ್ತಾನದ ಐಸಿಸ್ ಕೇಂದ್ರಕ್ಕೆ ತೆರಳಿದ್ದರು. ಇವರ ಪೈಕಿ ಕೆಲವರು ಮೃತಪಟ್ಟಿದ್ದಾರೆ ಎಂಬುದು ಎನ್ಐಎಗೆ ಲಭಿಸಿದ ಮಾಹಿತಿಯಾಗಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries