HEALTH TIPS

No title

             ಸೂರಂಬೈಲ್ ಸರಕಾರಿ ಪ್ರೌಢಶಾಲೆಯಲ್ಲಿ "ಶೇಣಿ ಸಂಸ್ಮರಣೆ ಹಾಗೂ ಯಕ್ಷ-ಸಂವಾದ " ಕಾರ್ಯಕ್ರಮ
   ಕುಂಬಳೆ: ಯಕ್ಷಗಾನದ ಶಕ ಪುರುಷ ಶೇಣಿ ಗೋಪಾಲಕೃಷ್ಣ ಭಟ್ ಅವರ ಬದುಕು-ಸಾಧನೆಗಳು ವೈಶಿಷ್ಟ್ಯಪೂರ್ಣವಾಗಿ ಮಣ್ಣಿನ ಕಲೆ, ಸಂಸ್ಕ್ರತಿಯ ಪುನರುತ್ಥಾನಕ್ಕೆ ಅವಧೂತರಂತಿದ್ದು ಹೊಸ ವ್ಯಾಖ್ಯೆ ನೀಡಿದವರು. ಶೇಣಿಯವರು ಕಾಸರಗೋಡಿನವರಾಗಿ ಗಡಿನಾಡಿನ ಕೀತರ್ಿಯನ್ನು ಅಜರಾಮರರಾಗಿಸಿದ ಸಿದ್ದಿಪುರುಷ ಎಂದು ಹಿರಿಯ ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ತಿಳಿಸಿದರು.
    ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಸೂರಂಬೈಲು  ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ "ಶೇಣಿ ಸಂಸ್ಮರಣೆ ಹಾಗೂ ಯಕ್ಷ-ಸಂವಾದ " ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಉಪನ್ಯಾಸಗೈದು ಮಾತನಾಡಿದರು.
   ಅಪರಿಮಿತ ಬಹುಮುಖೀ ಫ್ರೌಢಿಮೆ-ಪಾಂಡಿತ್ಯಗಳ ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದವರಾಗಿದ್ದು, ಅವರು ಬಾಲ್ಯಕಾಲದಲ್ಲಿ ನಡೆದಾಡಿದ ಸೂರಂಬೈಲು ಪರಿಸರ ಕಲಾ ಸಿದ್ದಿಗೆ ಪ್ರೇರಣೆ ನೀಡಿದ ಪುಣ್ಯದ ಕರ್ಮಭೂಮಿ ಎಂದು ದಿವಾಣ ತಿಳಿಸಿದರು. ಹೊಸ ತಲೆಮಾರು ಆಧುನಿಕತೆಯ ಗುಂಗಿನಲ್ಲಿ ತಮ್ಮ ಪರಿಸರದ ಹಿರಿಮೆಯನ್ನು ಮರೆಯುತ್ತಿರುವುದು ದುರದೃಷ್ಟಕರ. ಆದರೆ ಬದುಕಿನ ಸಾರ್ಥಕ್ಯಕ್ಕೆ ಅಗಲಿಹೋದ ಸಾಧಕರ ನೆನಹುಗಳೊಂದಿಗೆ ಅವರು ಬಿಟ್ಟುಹೋದ ಸಾಂಸ್ಕೃತಿಕತೆಯನ್ನು ಬೆಳೆಸುವಲ್ಲಿ ಉತ್ಸುಕತೆ ತೋರ್ಪಡಿಸಬೇಕು ಎಂದು ಕಿವಿಮಾತು ಹೇಳಿದರು. ದಿ.ಶೇಣಿಯವರು ಬಾಲ್ಯದಲ್ಲಿ ಕಥಾ ಸಂಕೀರ್ತನೆಗಳ ಮೂಲಕ ಕಲಾ ಸೇವೆಯನ್ನು ಆರಂಭಿಸಿ ಬಳಿಕ ಪರಿಸರದ ಯಕ್ಷಗಾನ ಆಟ-ಕೂಟಗಳಿಂದ ಪ್ರಭಾವಿತರಾಗಿ ಬಳಿಕ ತೊಡಗಿಸಿಕೊಂಡ ಯಕ್ಷಗಾನೋಪಾಸನೆ ಮತ್ತೊಬ್ಬರಿಂದ ಮಾಡಲಾಗದ ದಾಖಲೆಯ ಮಟ್ಟಕ್ಕೇರಿಸಿರುವುದು ಶೇಣಿಯವರದ್ದೇ ಅಳಿಸಲಾರದ ಮಹಾನ್ ಕೊಡುಗೆಗಳಾಗಿ ನಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
   ಈ ಸಂದರ್ಭ ದಿವಾಣ ಶಿವಶಂಕರ ಭಟ್ ಅವರು ವಿದ್ಯಾಥರ್ಿಗಳು ಯಕ್ಷಗಾನಕ್ಕೆ ಸಂಬಂಧಿಸಿ ಕೇಳಿದ ಅನೇಕ ಪ್ರಶ್ನೆಗಳಿಗೆ  ಮತ್ತು ಸಂಶಯಗಳಿಗೆ  ಸಮರ್ಪಕವಾಗಿ ಉತ್ತರಿಸಿ ಮಾರ್ಗದರ್ಶನ ನೀಡಿದರು.
   ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಿವಾನಂದ ಪೆಣರ್ೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಭಾರ ಮುಖ್ಯೋಪಾಧ್ಯಾಯ ರಾಜೇಶ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಕಿರಣ್ ಮಾಸ್ಟರ್ ಶುಭ ಹಾರೈಸಿದರು. ಶಶಿಕಲ ಟೀಚರ್ ಸ್ವಾಗತಿಸಿ,  ಪ್ರಸನ್ನಕುಮಾರಿ ಟೀಚರ್ ವಂದಿಸಿದರು.  ಮೋಹನನಾರಾಯಣ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.  ಜ್ಯೋತಿ ಟೀಚರ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
   ದಿ.ಶೇಣಿಯವರ ಪುಣ್ಯ ತಿಥಿಯ ಭಾಗವಾಗಿ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries