ಕಾಮರ್ಾರು ಶ್ರೀಕ್ಷೇತ್ರದಲ್ಲಿ ರಾಮಾಯಣ ಪ್ರವಚನ ಸಪ್ತಾಹಕ್ಕೆ ಚಾಲನೆ
ಬದಿಯಡ್ಕ: ಭಾರತೀಯ ಆಚರಣೆ, ಸಂಸ್ಕೃತಿಗಳು ಪ್ರಕೃತಿ ಕೇಂದ್ರಿತವಾಗಿದ್ದು, ಅದರೊಂದಿಗಿನ ಅನುಸಂಧಾನದಿಂದ ನೆಮ್ಮದಿಯ ಪ್ರಾಪ್ತಿ ಸಾಧಿತವಾಗುವ ಬಗ್ಗೆ ಪೂರ್ವಜರು ಹಲವು ರೂಢಿಗಳನ್ನು ತಂದಿರುವರು ಎಂದು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ತಿಳಿಸಿದರು.
ಶ್ರೀಮಹಾವಿಷ್ಣು ಸೇವಾ ಸಮಿತಿ ಕಾಮರ್ಾರು, ಯಕ್ಷಮಿತ್ರರು ಸಾಂಸ್ಕೃತಿಕ ಸಂಘ ಮಾನ್ಯ ಇವುಗಳ ಜಂಟಿ ಆಶ್ರಯದಲ್ಲಿ ಮಾನ್ಯ ಕಾಮರ್ಾರು ಶ್ರೀಮಹಾವಿಷ್ಣುಮೂತರ್ಿ ಕ್ಷೇತ್ರದಲ್ಲಿ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣಮೂತರ್ಿ ಗುರುಪುರಂ ನಿರ್ವಹಿಸಲಿರುವ "ಶ್ರೀಮದ್ ರಾಮಾಯಣ ಪ್ರವಚನ ಸಪ್ತಾಹ" ಕ್ಕೆ ಮಂಗಳವಾರ ಸಂಜೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ರಾಮಾಯಣ, ಭಾರತದಂತಹ ಮಹದ್ ಗ್ರಂಥಗಳು ಸಮಗ್ರ ಜೀವನ ಕ್ರಮಗಳ ಸಮದೇಶಗಳನ್ನು, ಬದುಕಿನ ಸಾಫಲ್ಯತೆಗಳನ್ನು ಎತ್ತಿತೊರಿಸುತ್ತಿದ್ದು, ಆಧುನಿಕ ಜಂಜಡದ ಬದುಕಿಗೆ ದಾರಿದೀಪಗಳಾಗಿವೆ. ಈ ನಿಟ್ಟಿನಲ್ಲಿ ಅವುಗಳೊಳಗಿನ ಸತ್ವವನ್ನು ಒಂದಷ್ಟಾದರೂ ಮನದಟ್ಟು ಮಾಡಿಕೊಳ್ಳುವಲ್ಲಿ ಪ್ರವಚನಗಳು ಸಹಕಾರಿ ಎಂದು ಅವರು ತಿಳಿಸಿದರು. ದೇವಾಲಯಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಧರ್ಮ ಪುನರುಜ್ಜೀವನಕ್ಕೆ ಪ್ರೇರಣೆ ನೀಡಿದಂತೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾಮರ್ಾರು ಶ್ರೀಮಹಾವಿಷ್ಣು ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉದ್ಯಮಿ, ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಅವರು ಮಾತನಾಡಿ, ಪೂರ್ವಜನ್ಮದ ಕರ್ಮಲೇಪಗಳ ಬದುಕಿನಲ್ಲಿ ಭಗವಂತನನ್ನು ಅರಿಯುವ ಜ್ಞಾನದ ಬೆಳಕು ನಮ್ಮಲ್ಲಿ ಮೂಡಿಬರಬೇಕು. ಅಂತಹ ಅರಿವು ನಮ್ಮನ್ನು ಸಾಯುಜ್ಯದೆಡೆಗೆ ಮುನ್ನಡೆಸುವುದು ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಮಾತನಾಡಿ, ರಾಮಾಯಣದ ಕೇಂದ್ರವಾದ ಶ್ರೀರಾಮನ ಜೀವನಾದರ್ಶ ಪ್ರತಿಯೊಬ್ಬ ಮಾನವನಿಗೂ ಇಂದು ಅಗತ್ಯ ಇದೆ. ಸತ್ಯ, ಧರ್ಮ, ನ್ಯಾಯಗಳಲ್ಲಿ ರಾಮನ ಅನುಸರಣೆ ಬದುಕಿಗೆ ಆದರ್ಶವಾಗಿದ್ದು, ರಾಮಾಯಣದ ಕುರಿತಾದ ಅರಿವನ್ನು ಮೂಡಿಸುವ ಪ್ರವಚನಗಳಿಂದ ಸತ್ಯದರ್ಶನ ಸಾಧ್ಯವಿದೆ ಎಂದು ತಿಳಿಸಿದರು. ಕೇರಳದಲ್ಲಿ ಪ್ರಾಚೀನ ಕಾಲದಿಂದಲೂ ಕರ್ಕಟಕ ಮಾಸವನ್ನು ರಾಮಾಯಣ ಪಾರಾಯಣಗಳಿಗೆ ಮೀಸಲಿರಿಸಲಾಗಿದ್ದು, ಆದ್ದರಿಂದ ರಾಮಾಯಣ ಮಾಸವೆಂದೇ ಪರಿಗಣಿಸಲ್ಪಟ್ಟಿದೆ. ಭಾರತ ಸಹಿತ ರಾಷ್ಟ್ರಾದ್ಯಂತ ರಾಮಾಯಣ ಬೀರಿರುವ ಅಪರಿಮಿತ ಪ್ರಭಾವವು ಅದರ ಆದರ್ಶಗಳ ಸೂಚಕವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ತರ್ ಕೆ, ಬಾರಿಕ್ಕಾಡು ಶ್ರೀಮಹಾವಿಷ್ಣು ಕ್ಷೇತ್ರದ ಕಾರ್ಯದಶರ್ಿ ಕೃಷ್ಣಪ್ರಸಾದ್ ಚಿತ್ತಾರಿ, ಶ್ರೀಕ್ಷೇತ್ರ ಕಾಮರ್ಾರಿನ ಆಡಳಿತ ಟ್ರಸ್ಟಿ ಗೋಪಾಲ ಭಟ್ ಪಟ್ಟಾಜೆ, ಬ್ರಹ್ಮಶ್ರೀ ನಾರಾಯಣಮೂತರ್ಿ ಗುರುಪುರಂ ಉಪಸ್ಥಿತರಿದ್ದು ಮಾತನಾಡಿದರು.
ಮಾನ್ಯ ಯಕ್ಷಮಿತ್ರರು ಸಂಘಟನೆಯ ನಿದರ್ೇಶಕ ಶ್ರೀಕೃಷ್ಣಮೂತರ್ಿ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದಶರ್ಿ ವಿಜಯಕುಮಾರ್ ಮಾನ್ಯ ವಂದಿಸಿದರು. ಅಧ್ಯಕ್ಷ ಕೆ.ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀಮಹಾವಿಷ್ಣು ಭಜನಾ ಸಂಘ ಕಾಮರ್ಾರು ತಮಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಬ್ರಹ್ಮಶ್ರೀ ನಾರಾಯಣಮೂತರ್ಿ ಗುರುಪುರಂ ಅವರಿಂದ ಶ್ರೀಮದ್ ರಾಮಾಯಣ ಪ್ರವಚನ ನಡೆಯಿತು. ಪ್ರವಚನವು ಪ್ರತಿದಿನ ಸಂಜೆ 6 ರಿಂದ ನಡೆಯಲಿದ್ದು, ಜು. 23 ರಂದು ಸಂಜೆ 7ಕ್ಕೆ ಸಮಾರೋಪಗೊಳ್ಳಲಿದೆ.