ಶೇಣಿ ವ್ಯಕ್ತಿಯಲ್ಲ; ಶಕ್ತಿ-ಪಂಜ ಭಾಸ್ಕರ ಭಟ್
ಪೆರ್ಲ: ರಾಷ್ಟ್ರದ ಮಹಾನ್ ಕಲೆಗಳ ಪೈಕಿ ಯಕ್ಷಗಾನ ಕಲಾ ಪ್ರಕಾರ ಏರಿರುವ ಎತ್ತರ ಅತ್ಯಪೂರ್ವವಾದುದಾಗಿದ್ದು, ದಿ.ಶೇಣಿ ಗೋಪಾಲಕೃಷ್ಣ ಭಟ್ ರ ಕೊಡುಗೆ ಅತ್ಯಪೂರ್ವ ದಾಖಲೆ. ಶೇಣಿ ಗೋಪಾಲಕೃಷ್ಣ ಭಟ್ ಕೇವಲ ವ್ಯಕ್ತಿಯಾಗದೆ ಮಹಾನ್ ಶಕ್ತಿ ಎಂದು ಖ್ಯಾತ ವೈದಿಕ ವಿದ್ವಾಂಸ ಪಂಜ ಭಾಸ್ಕರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶೇಣಿ ರಂಗಜಂಗಮ ಟ್ರಸ್ಟ್ ಆಯೋಜಿಸುತ್ತಿರುವ ಶೇಣಿ ಶತಕ ಸರಣಿ ಕಾರ್ಯಕ್ರಮದ ಭಾಗವಾಗಿ ಭಾನುವಾರ ಅಪರಾಹ್ನ ಶೇಣಿ ಶ್ರೀಶಾರದಾಂಬಾ ಶಾಲೆಯಲ್ಲಿ ಆಯೋಜಿಸಿದ ಆರನೇ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.
ತಮ್ಮ ಸರಳ ವ್ಯಕ್ತಿತ್ವ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವಗಳಿಂದ ಜನಸಾಮಾನ್ಯರಿಗೆ ನಿಕಟರಾಗಿದ್ದ ಶೇಣಿಯವರು ತಮ್ಮ ಅಗಾಧ ಅನುಭವ, ಜ್ಞಾನ ಸಂಪತ್ತುಗಳಿಂದ ವಿಸ್ತಾರ ಮಾತುಗಳನ್ನು ಕಟ್ಟಿಕೊಟ್ಟವರು. ಯಕ್ಷಗಾನ ಕ್ಷೇತ್ರದ ಅತ್ಯಂತ ಸಂಕಷ್ಟದ ಸಂದರ್ಭಗಳಲ್ಲಿ ಯಕ್ಷಗಾನ ಕ್ಷೇತ್ರದ ನವ ಪ್ರಯೋಗಗಳ ಮೂಲಕ ಹೊಸ ಮುಖದಿಂದ ಪ್ರಚುರಪಡಿಸಿದ ಅವರ ಶ್ರಮದ ಫಲವಾಗಿ ಇಂದು ಯಕ್ಷಗಾನ ಜಗದಗಲ ಹಬ್ಬಲು ಕಾರಣವಾಯಿತು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ವೈದಿಕ ವಿದ್ವಾಂಸ ವೇದಮೂತರ್ಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ನಡುಮನೆ ಅವರು ಮಾತನಾಡಿ, ಬದುಕಿನ ಸಾರ್ಥಕತೆಯಲ್ಲಿ ಕೀತರ್ಿಮಾತ್ರ ಶಾಶ್ವತವಾಗಿ ಉಳಿಯುವುದಾಗಿದ್ದು, ಶೇಣಿಯವರು ಆ ಸಾಧನೆಗೈದವರು ಎಂದು ನೆನಪಿಸಿದರು. ಜನ್ಮಭೂಮಿಯ ಹೆಸರನ್ನು ನಾಲ್ದೆಸೆಗೆ ಮುಟ್ಟಿಸುವಲ್ಲಿ ಶೇಣಿಯವರ ಅಗಣಿತ ಕೊಡುಗೆಗಳ ಬಗ್ಗೆ ಅವರು ನೆನಪಿಸಿದರು.
ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅವರು ಮಾತನಾಡಿ, ಶೇಣಿಯವರು ಕಟ್ಟಿಕೊಟ್ಟ ಪಾತ್ರಗಳ ಮೂಲಕ ಧರ್ಮ ಸಾಮರಸ್ಯ, ಮಾನವೀಯ ಸಂಬಂಧಗಳನ್ನು ಬೆಳೆಸಿದ ಮಹಾನ್ ಶಕ್ತಿ ಆಗಿದ್ದರು ಎಂದು ತಿಳಿಸಿದರು. ಕಾಸರಗೋಡಿನ ಕನ್ನಡ ಭಾಷೆ, ಯಕ್ಷಗಾನ ಕಲಾ ಕೊಡುಗೆಗಳಲ್ಲಿ ಶೇಣಿಯವರು ಹಾಕಿಕೊಟ್ಟ ಹೆಜ್ಜೆಗಳಿಗೆ ಇಂದು ಶೈತಿಲ್ಯತೆ ಬರುತ್ತಿರುವುದು ಗಂಭೀರವಾಗಿದ್ದು, ಯುವ ತಲೆಮಾರು ಇನ್ನಷ್ಟು ಅಭಿರುಚಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಶಾರದಾಂಬಾ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ , ಶೇಣಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ.ಎಸ್, ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ಸೋಮಶೇಖರ ಜೆ.ಎಸ್, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರನಾಥ ನಾಯಕ್ ಉಪಸ್ಥಿತರಿದ್ದು ಶುಭಹಾರೈಸಿದರು.
ಶೇಣಿ ರಂಗಜಂಗಮ ಟ್ರಸ್ಟ್ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ಸ್ವಾಗತಿಸಿ, ಪೆರ್ಲದ ಯಕ್ಷಸ್ನೇಹೀ ಬಳಗದ ಸಂಚಾಲಕ ಸತೀಶ ಪುಣಿಚಿತ್ತಾಯ ಪೆರ್ಲ ವಂದಿಸಿದರು. ಯಕ್ಷಗಾನ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ಶೇಣಿಯವರ ಜೀವನದ ರಸನಿಮಿಷಗಳನ್ನು ಉಲ್ಲೇಖಿಸುತ್ತ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದಶಮುಖ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸತೀಶ ಪುಣಿಚಿತ್ತಾಯ ಪೆರ್ಲ, ತಲ್ಪನಾಜೆ ಶಿವಶಂಕರ ಭಟ್, ಶರಶ್ಚಂದ್ರ ಶೆಟ್ಟಿ ಶೇಣಿ(ಭಾಗವತರು), ಶ್ರೀಧರ ಎಡಮಲೆ, ಅನೂಪ್ ಸ್ವರ್ಗ, ನಾರಾಯಣ ಶಮರ್ಾ(ಚೆಂಡೆ-ಮದ್ದಳೆ), ಸಮೃದ್ದ ಪುಣಿಚಿತ್ತಾಯ (ಚಕ್ರತಾಳ)ಗಳಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್, ಪಶುಪತಿಶಾಸ್ತ್ರಿ ಕಟೀಲು, ಶೇಣಿ ವೇಣುಗೋಪಾಲ ಭಟ್ ಪಾತ್ರಗಳಿಗೆ ಜೀವತುಂಬಿದರು. ಸಮಾರಂಭದಲ್ಲಿ ಶೇಣಿ ರಂಗಜಂಗಮ ಟ್ರಸ್ಟ್ ಹಾಗೂ ಪೆರ್ಲದ ಯಕ್ಷಸ್ನೇಹೀ ಬಳಗದ ನೇತೃತ್ವದಲ್ಲಿ ಶೇಣಿ ಶತಕ ಸರಣಿ ಏಳನೇ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನೂ ಪಂಜ ಭಾಸ್ಕರ ಭಟ್ ಬಿಡುಗಡೆಗೊಳಿಸಿದರು.