ಹಿರಿಯ ಪತ್ರಕರ್ತ, ಹೋರಾಟಗಾರ ಬಳ್ಳುಳ್ಳಾಯರಿಗೆ ನುಡಿನಮನ
ಪ್ರಖರ ಬರಹಗಳ ಮೂಲಕ ಮನೆ ಮಾತಾಗಿದ್ದರು : ನರಸಿಂಗ ರಾವ್
ಕಾಸರಗೋಡು: ಬಹುಮುಖೀ ವ್ಯಕ್ತಿತ್ವದ ಕಾಸರಗೋಡು ಕನ್ನಡ ಹೋರಾಟದ ಹಿರಿಯ ಕೊಂಡಿ ಮತ್ತು ಹಿರಿಯ ಪತ್ರಕರ್ತರಾದ ಎಂ.ವಿ.ಬಳ್ಳುಳ್ಳಾಯರ ಅಗಲುವಿಕೆ ಕಾಸರಗೋಡಿನ ಕನ್ನಡಿಗರಿಗೆ ತುಂಬಲಾರದ ನಷ್ಟ. ಕನ್ನಡ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಆರಂಭಿಸಿದ `ನಾಡ ಪ್ರೇಮಿ' ಪತ್ರಿಕೆಯಲ್ಲಿನ ಪ್ರಖರ ಬರಹಗಳ ಮೂಲಕ ಮನೆ ಮಾತಾಗಿದ್ದರು ಎಂದು ಹವ್ಯಾಸಿ ಪತ್ರಕರ್ತ, ಲೇಖಕ ನರಸಿಂಗ ರಾವ್ ಅವರು ಹೇಳಿದರು.
ಬುಧವಾರ ನಿಧನರಾದ ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ಎಂ.ವಿ.ಬಳ್ಳುಳ್ಳಾಯ ಅವರಿಗೆ ರಂಗಚಿನ್ನಾರಿ ಮತ್ತು ಕನ್ನಡ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಿದ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ತನ್ನ ಜೀವವನ್ನು ಕಾಸರಗೋಡಿನ ಕನ್ನಡಿಗರಿಗಾಗಿ ತೇದ ಅವರು ಎಂದೆಂದಿಗೂ ಪ್ರಾತ:ಸ್ಮರಣೀಯರು. ಅವರ ಜೀವನ ಸಂಘರ್ಷಮಯವಾಗಿತ್ತು ಎಂದ ಅವರು ಕನ್ನಡ ಪರ ಹೋರಾಟದಲ್ಲಿ ಜೈಲಿಗೂ ಸೇರಿದ್ದರೂ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಗಂಗಾಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ಕನ್ನಡ ಹೋರಾಟಕ್ಕೆ ಚೈತನ್ಯ ತುಂಬಿದವರು, ದೀನ ದಲಿತರ ಬಗ್ಗೆ ಬಹಳಷ್ಟು ಕಾಳಜಿಯನ್ನು ವಹಿಸಿದ್ದರು. ಕೃಷಿಕರ ಪರವಾಗಿ ಹೋರಾಡಿದ ಅವರು ಮುಂದಿನ ತಲೆಮಾರಿಗೆ ಮಾದರಿಯಾಗಿದ್ದಾರೆ ಎಂದು ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಹೇಳಿದರು.
ಬಳ್ಳುಳ್ಳಾಯರು ಅಮೂಲ್ಯವಾದ ಗ್ರಂಥ ಭಂಡಾರ. ಅವರದ್ದು ತ್ಯಾಗದ ಜೀವನ. ತಮ್ಮ ಜೀವನವನ್ನು ಕಾಸರಗೋಡಿನ ಕನ್ನಡಿಗರಿಗಾಗಿ ಮುಡಿಪಾಗಿಟ್ಟಿದ್ದರು ಎಂದು ರಾಮ ದಿವಾಣ ಅವರು ಹೇಳಿದರು.
ಬದುಕಿನ ಕೊನೆಗಾಲದವರೆಗೂ ಕಾಸರಗೋಡು ಕನ್ನಡಿಗರ ಹಕ್ಕಿಗಾಗಿ ಸತತ ಹೋರಾಟ ಮಾಡಿದವರು. ಯುವ ಪತ್ರಕರ್ತರನ್ನು ಪ್ರೋತ್ಸಾಹಿಸಿದ್ದಲ್ಲದೆ ಕಾಸರಗೋಡಿನ ಬಗ್ಗೆ ತೀವ್ರ ಕಾಳಜಿ ವಹಿಸಿದ್ದರು. ಅವರೊಂದಿಗಿನ ಒಡನಾಟವು ನೆನಪಿಸಿಕೊಳ್ಳಬೇಕಾದ ದಿನಗಳಾಗಿತ್ತು. ಅವರ ಕ್ರಿಯಾಶೀಲ ವ್ಯಕ್ತಿತ್ವವು ಯುವ ಬರಹಗಾರರಿಗೆ, ಕಾಸರಗೋಡಿನ ಕನ್ನಡಿಗರಿಗೆ ಮಾದರಿಯಾಗಿದೆ ಎಂದು ಚಿತ್ರ ನಟ, ನಿದರ್ೇಶಕ ಕಾಸರಗೋಡು ಚಿನ್ನಾ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ಕಾಸರಗೋಡು, ಬಾಲಕೃಷ್ಣ ಅಗ್ಗಿತ್ತಾಯ, ಗೋವಿಂದ ಬಳ್ಳಮೂಲೆ ಮೊದಲಾದವರು ಮಾತನಾಡಿದರು.