HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಈ ಶಿಶುವಿನ ಶಸ್ತ್ರ ಚಿಕಿತ್ಸೆಗೆ ನೆರವಾಗುವಿರಾ?
     ಬದಿಯಡ್ಕ : ಚೊಚ್ಚಲ ಹೆರಿಗೆಯ ನೋವಿನ್ನೂ ಮಾಸದಿರುವಾಗ ಹುಟ್ಟಿದ ಮಗುವಿಗೆ ಶಸ್ತ್ರಚಿಕಿತ್ಸೆಯಾಗಬೇಕೆಂಬ ನೋವಿನಿಂದ ಬಡ ಕುಟುಂಬ ಅನುಭವಿಸಬೇಕಾದ ಆನಂದದ ಕ್ಷಣ ದೂರವಾಗಿದೆ.
ನೀಚರ್ಾಲು ಬೇಳ ಗ್ರಾಮದ ಏಣಿಯಪರ್ು ನಿವಾಸಿ ಮೋಹನಚಂದ್ರ ಮತ್ತು ಸುಜಾತ ದಂಪತಿಗಳಿಗೆ ಎಂಟುವರ್ಷಗಳ ಹಿಂದೆ ಮದುವೆಯಾಗಿತ್ತು. ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿಗಳಿಗೆ ದೈವಾನುಗ್ರಹದಿಂದ ಜುಲೈ 4ರಂದು ಚೊಚ್ಚಲ ಗಂಡು ಮಗುವಿನ ಜನನವಾಯಿತು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಹೆತ್ತ ಮಗು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿತ್ತು. ಕೂಡಲೇ ವೈದ್ಯರ ಸಲಹೆಯಂತೆ ಕುಂಬಳೆಯ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ನೀಡುವುದು ಅಸಾಧ್ಯವೆಂದು ತಿಳಿಸಿದ ವೈದ್ಯರ ಸಲಹೆಯಂತೆ ಉನ್ನತ ಚಿಕಿತ್ಸೆಗಾಗಿ ಕೇರಳದ ಎನರ್ಾಕುಳಂನ ಅಮೃತ ಆಸ್ಪತ್ರೆಗೆ ಹೋಗಬೇಕೆಂಬುದಾಗಿ ತಿಳಿಸಿದರು. ಇದೀಗ ಮಗುವಿಗೆ ಎನರ್ಾಕುಳಂನಲ್ಲಿ ತೀವ್ರನಿಗಾ ವಿಭಾಗದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮಗುವಿನ ಹೃದಯದಲ್ಲಿ ಸಣ್ಣ ರಂದ್ರವಿದ್ದು, ರಕ್ತ ಹೆಪ್ಪುಗಟ್ಟುತ್ತಿರುವುದು ಹಾಗೂ ಉಸಿರಾಡಲು ಕಷ್ಟಪಡುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕೂಲಿ ಕೆಲಸವನ್ನು ಮಾಡಿ ಕುಟುಂಬವನ್ನು ಪೋಷಿಸುತ್ತಿರುವ ಮೋಹನಚಂದ್ರರಿಗೆ ಇರುವುದು ಸರಕಾರ ನೀಡಿದ ಮೂರು ಸೆಂಟ್ಸ್ ಸ್ಥಳ ಮಾತ್ರ. ಸಣ್ಣ ಮನೆಯೊಂದರಲ್ಲಿ ವೃದ್ಧ ತಾಯಿಯೊಂದಿಗೆ ದಂಪತಿಗಳು ಜೀವನವನ್ನು ನಡೆಸುತ್ತಿದ್ದಾರೆ. ಒಂದು ದಿನ ಕೂಲಿ ಕೆಲಸಕ್ಕೆ ಹೋಗಲು ಅಸಾಧ್ಯವಾದಲ್ಲಿ ಕುಟುಂಬ ಉಪವಾಸವಿರಬೇಕಾದ ಪರಿಸ್ಥಿತಿಯಾಗಿದೆ.
ಮಗುವಿನ ಚಿಕಿತ್ಸೆಗಾಗಿ ಅಂದಾಜು ಸುಮಾರು 5 ಲಕ್ಷರೂಗಳ ಖಚರ್ಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಡಕುಟುಂಬವು ಈ ವೆಚ್ಚವನ್ನು ಭರಿಸುವುದು ಅಶಕ್ತವಾಗಿದೆ. ಸಹೃದಯಿಗಳ ಸಹಾಯವನ್ನು ಮೋಹನಚಂದ್ರರು ಅಪೇಕ್ಷಿಸುತ್ತಿದ್ದಾರೆ.
ಬ್ಯಾಂಕ್ ಖಾತೆ ವಿವರ :
   ಸುಜಾತ ಎಂ., ಕನರ್ಾಟಕ ಬ್ಯಾಂಕ್ ನೀಚರ್ಾಲು ಶಾಖೆ, ಐಎಫ್ಎಸ್ಸಿ ಕೋಡ್ ಕೆಎಆರ್ಬಿ0000532, ಉಳಿತಾಯ ಖಾತೆ ನಂಬ್ರ 5322500100979101.
      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries