HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಪಳ್ಳತ್ತಡ್ಕ ಹವ್ಯಕ ವಲಯದ ಮಾಸಿಕ ಸಭೆ           
     ಬದಿಯಡ್ಕ: ಪಳ್ಳತ್ತಡ್ಕ ಹವ್ಯಕ ವಲಯದ ಮಾಸಿಕ ಸಭೆ ಜು. 1 ರಂದು ಉಪ್ಪಂಗಳ ಕಜೆಮಲೆ ಉದಯನಾರಾಯಣ ಭಟ್ ಇವರ ಮನೆಯಲ್ಲಿ ಜರಗಿತು. ವಲಯ ಕಾರ್ಯದಶರ್ಿ ಸುಬ್ರಹ್ಮಣ್ಯ ಕೆರೆಮೂಲೆ ಗತಸಭೆಯ ವರದಿ,ಲೆಕ್ಕಪತ್ರ ಮಂಡಿಸಿದರು.
  ಹೊಸನಗರದಲ್ಲಿ ಶ್ರೀ ಚಂದ್ರಮೌಳೀಶ್ವರ ದೇವರ ಬ್ರಹ್ಮ ಕಲಶೋತ್ಸವದ  ಸಂದರ್ಭದಲ್ಲಿ ವಿಶೇಷ ಕಲಶ ಸೇವಾಕತರ್ೃಗಳಿಗೆ ಕಲಶ ಪ್ರಸಾದ ವಿತರಿಸಲಾಯಿತು. ಮುದ್ದು ಮಂದಿರ ಪಳ್ಳತ್ತಡ್ಕದಲ್ಲಿ ಇತ್ತೀಚೆಗೆ ಸಂಪನ್ನಗೊಂಡ 100ನೇ ಪ್ರತಿರುದ್ರದ ಲೆಕ್ಕಪತ್ರವನ್ನು ವಲಯ ಕಾರ್ಯದಶರ್ಿಗಳು ಮಂಡಿಸಿದರು.
  ವಿದ್ಯಾಥರ್ಿ ಪ್ರತಿಭಾ ಪುರಸ್ಕಾರಕ್ಕೆ ಅರ್ಹತೆ ಇರುವ ವಿದ್ಯಾಥರ್ಿಗಳ ಮಾಹಿತಿಯೊದಗಿಸಲು ವಲಯ ವಿದ್ಯಾಥರ್ಿ ವಾಹಿನಿ ಪ್ರಮುಖ ಈಶ್ವರ ಭಟ್ ಮಾಹಿತಿ ನೀಡಿದರು. ಜುಲೈ 11 ಕ್ಕೆ ಮಾಣಿ ಮಠದ ಗುರುನಿವಾಸದ ಲೋಕಾರ್ಪಣೆ ಕಾರ್ಯಕ್ರಮದ ಕುರಿತು  ತಿಳಿಸಲಾಯಿತು.
  ಜುಲೈ 27 ರಿಂದ ಭಾನ್ಕುಳಿಯಲ್ಲಿ ಜರಗಲಿರುವ ಶ್ರೀ ಗುರುಗಳ ಗೋಸ್ವರ್ಗ ಚಾತುಮರ್ಾಸ್ಯದ ಕುರಿತು ಸಭೆಗೆ ಮಾಹಿತಿ ನೀಡಿದ ಮುಳ್ಳೇರಿಯಾ ಮಂಡಲ ವಿದ್ಯಾಥರ್ಿವಾಹಿನಿ ಪ್ರಮುಖ ಕೇಶವಪ್ರಸಾದ ಎಡಕ್ಕಾನ, ಈ ಸಂದರ್ಭದಲ್ಲಿ ಜರಗುವ ವಿಶೇಷ ಕಾರ್ಯಕ್ರಮಗಳ ಕುರಿತು ಮತ್ತು ಮುಂದಿನ ಬೇಸಿಗೆ ಶಿಬಿರವನ್ನು ಮುಳ್ಳೇರಿಯಾ ಮಂಡಲದಲ್ಲಿ ಜರಗುವ ಸಾಧ್ಯತೆಯನ್ನು ತಿಳಿಸಿದರು.
  ಕುಂಕುಮಾರ್ಚನೆ,ಭಜನಾ ರಾಮಾಯಣದ ಸಂಖ್ಯೆಯನ್ನು ನೀಡಿದ ಮಾತೃವಿಭಾಗ ಪ್ರಧಾನರಾದ ವಿದ್ಯಾಗೌರಿ ಉಪ್ಪಂಗಳ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುವಂತೆ ತಿಳಿಸಿದರು. ಮುಷ್ಟಿ ಅಕ್ಕಿ ಸಂಗ್ರಹ ವಿಷಯದಲ್ಲಿ ವಿಜಯಲಕ್ಷ್ಮಿ ಪಳ್ಳತ್ತಡ್ಕ ಮಾಹಿತಿ ನೀಡಿದರು. ವಲಯ ಅಧ್ಯಕ್ಷ ಗುಣಾಜೆ ರಾಮಕೃಷ್ಣ ಭಟ್ ಉಪಸ್ಥಿತರಿದ್ದು ಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
    ಸಭೆಯಲ್ಲಿ ಪದಾಧಿಕಾರಿಗಳು, ಘಟಕಾಧ್ಯಕ್ಷರು ಉಪಸ್ಥಿತರಿದ್ದರು. ರಾಮತಾರಕ,ಶಾಂತಿ ಮಂತ್ರ,ಶಂಖನಾದ ಮತ್ತು ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries