HEALTH TIPS

No title

                   ಶೌಚಾಲಯ ನನಸಾಗುವ ಸೂಚನೆ-ಮಾಧ್ಯಮ ವರದಿಗೆ ಕೊನೆಗೂ ಸ್ಪಂದನ
     ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಸಂಕಷ್ಟಕ್ಕೀಡಾಗುವ ಸಾರ್ವಜನಿಕರ ಸಂಕಷ್ಟವನ್ನು ವಿವರಿಸಿ ಪ್ರಧಾನ ಮಂತ್ರಿಯವರ ಕಚೇರಿಗೆ ಪತ್ರ ಬರೆದು ಪ್ರಧಾನಿಯವರ ಕನಸಿನ ಯೋಜನೆಯಾದ  "ಸ್ವಚ್ಛ ಭಾರತ್ ಮಿಷನ್ " ಯೋಜನೆಯಡಿಯಲ್ಲಿ ಸಾರ್ವಜನಿಕ ಶೌಚಾಲಯ ನಿಮರ್ಿಸುವಂತೆ ಮನವಿಮಾಡಲಾಗಿತ್ತು.
    ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನ ಮಂತ್ರಿಯವರ  ಕಚೇರಿ, ಈ ಮನವಿಯನ್ನು ಕೇರಳ ಸರಕಾರದ ಗ್ರಿವಿಯಾನ್ಸ್ ವಿಭಾಗದ ಜೊತೆ ಕಾರ್ಯದಶರ್ಿಯವರಿಗೆ ಆದೇಶ ನೀಡಿ ಇದಕ್ಕೆ ಶಾಶ್ವತ ಪರಿಹಾರವನ್ನು ಮಾಡಿಬೇಕಾಗಿ ಒತ್ತಾಯಿಸಿತ್ತು, ಮತ್ತು ದೂರುದಾರನಿಗೆ ಈ ಯೋಜನೆಯ ಪೂರ್ಣ ವಿವರಣೆ ನೀಡಬೇಕೆಂದು ಕೇರಳ ದೂರು ವಿಭಾಗದ ಕಾರ್ಯದಶರ್ಿಯವರು ಕುಂಬಳೆ ಗ್ರಾಮ ಪಂಚಾಯತಿನ ಕಾರ್ಯದಶರ್ಿಯವರಿಗೆ ಸೂಚಿಸಿದ್ದರು. ಆದರೆ ಪಂಚಾಯತಿನ ಕಡೆಯಿಂದ ಅಧಿಕೃತವಾಗಿ ಯಾವುದೇ ವಿವರಣೆ ಲಭಿಸಿರಲಿಲ್ಲ. 
   ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಾಧ್ಯಮಗಳು ಈ ಬಗ್ಗೆ ಪ್ರಾತಿನಿಧ್ಯ ನೀಡಿ ಸಮಸ್ಯೆಯ ಬಗ್ಗೆ ಬೆಳಕುಚೆಲ್ಲುವ ವರದಿ ಪ್ರಕಟಿದ್ದರಿಂದ ಸಾರ್ವಜನಿಕರಲ್ಲಿ ಬಾರಿ ಚಚರ್ೆಗೂ ಗ್ರಾಸವಾಗಿತ್ತು. ಬಳಿಕ ಕುಂಬಳೆಯ ಕೆಲವು ನಾಗರಿಕರು ಹಾಗೂ  ಸಂಘ ಸಂಸ್ಥೆಗಳ ವತಿಯಿಂದ ಪ್ರಧಾನ ಮಂತ್ರಿಯವರ ಕಚೇರಿಗೆ ಪತ್ರ ಬರೆದು ವಿವರಿಸಿದ್ದರು.
  ಇದಕ್ಕೆ ಯಾವುದಕ್ಕೂ ಕ್ಯಾರೇ ಎನ್ನದ ಗ್ರಾಮ ಪಂಚಾಯತಿ ಅಧಿಕೃತರ ದಾಷ್ಟ್ಯದ ವಿರುದ್ಧ ಮತ್ತು ಕೇರಳ ಮತ್ತು ಕನರ್ಾಟಕವನ್ನು ಸಂಪಕರ್ಿಸುವ ಯಾತ್ರಿಕರ ಪ್ರಮುಖ ಪೇಟೆಯಾದ ಕುಂಬಳೆಯ ಬಗ್ಗೆ ಸಮಗ್ರ ವಿವರಣೆಯೊಂದಿಗೆ ಮತ್ತೊಂದು ಪತ್ರವನ್ನು ಬರೆದು,  ದೂರಿನ ಸ್ಥಿತಿಯನ್ನು ಹಿಂಬಾಲಿಸಿ, ಕೇರಳ ಸರಕಾರದ ದೂರು ವಿಭಾಗದದೊಂದಿಗೆ  ನಿರಂತರ ಸಂಪರ್ಕದಲ್ಲಿದ್ದು ಕುಂಬಳೆ ಗ್ರಾಮ ಪಂಚಾಯತಿನ ಅಧಿಕೃತರ ಬೇಜವಾಬ್ದರಿಯ ಮನವರಿಕೆ ಮಾಡಲಾಯಿತು.
  ಇದೀಗ ಕುಂಬಳೆ ಗ್ರಾಮ ಪಂಚಾಯತಿನಲ್ಲಿ ಸಾರ್ವಜನಿಕ ಶೌಚಾಲಯ ಮಂಜೂರಾತಿ ನೀಡಲಾಗಿದ್ದು, ಕುಂಬಳೆ ಪಂಚಾಯತಿನ ಕಾರ್ಯದಶರ್ಿಯವರಿಂದ ಸಾರ್ವಜನಿಕ ಶೌಚಾಲಯ ನಿಮರ್ಿಸುವ ರೂಪುರೇಖೆ ಮತ್ತು ಯೋಜನೆಗೆ  23 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗಿದೆ.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries