HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಗಡಿನಾಡಿನ ಅಂತಸತ್ವ ಕಾಪಿಡುವಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ ಮಹತ್ತರ-ಶ್ರೀಕೃಷ್ಣಯ್ಯ ಅನಂತಪುರ
   ಬದಿಯಡ್ಕ: ಕವಿಯಾದವನಿಗೆ ನಿಧರ್ಿಷ್ಟ ವಸ್ತುವನ್ನು ಲಕ್ಷ್ಯವಾಗಿರಿಸಿ ಕಾವ್ಯ ರಚಿಸಲು ಸಾಧ್ಯವಿಲ್ಲ. ಅಂತರಂಗದಲ್ಲಿ ಸ್ಪುರಿಸುವ ಭಾವಗಳಿಗೆ ಅಕ್ಷರಗಳನ್ನು ಪೋಣಿಸಿದಾಗ ಅದು ಸುಂದರ ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಅದಕ್ಕೆ ಪ್ರೋತ್ಸಾಹಗಳು ಲಭ್ಯವಾದಾಗ ಮತ್ತಷ್ಟು ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರ್ಲದ "ಕವಿ ಹೃದಯದ ಸವಿ ಮಿತ್ರರು" ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಸರಣಿ ಸಾಹಿತ್ಯ ಚಿಂತನ-ಕವಿಗೋಷ್ಠಿಗಳ ಭಾಗವಾಗಿ ಭಾನುವಾರ ಅಪರಾಹ್ನ ನೀಚರ್ಾಲಿನ ಶ್ರೀಕುಮಾರ ಸ್ವಾಮಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ 4ನೇ ಸಾಹಿತ್ಯ ಕವಿಗೋಷ್ಠಿಯನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಮಾತನಾಡಿದರು.
    ಗಡಿನಾಡು ಕಾಸರಗೋಡಿನ ಕನ್ನಡ ಅಂತಸ್ವತ್ವವನ್ನು ಕಾಪಿಡುವಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಸಾಹಿತ್ಯಕ್ಕೆ ಜನರನ್ನು ಒಗ್ಗೂಡಿಸುವ, ಭಾಷಾ ಪ್ರೇಮ ಬೆಳೆಸುವ ಶಕ್ತಿಯಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಆಧುನಿಕ ಕಾಲಘಟ್ಟದ ಬದಲಾದ ಪರಿಸರ-ಪ್ರಪಂಚದಲ್ಲಿ ಇತರ ಕ್ಷೇತ್ರಗಳಂತೆ ಸಾಹಿತ್ಯ ಕ್ಷೇತ್ರವೂ ಬದಲಾವಣೆಗಳೊಂದಿಗೆ ಹೊಸ ಹಾದಿಯತ್ತ ಹೊರಳಿದೆ. ಆದರೆ ಗೇಯತೆ, ವಸ್ತು ವಿಷಯಗಳನ್ನು ಶಾಸ್ತ್ರೀಯತೆಯ ಚೌಕಟ್ಟಿನಲ್ಲಿ ಕಡೆದು ನಿಲ್ಲಿಸುವ ಕ್ರಮಗಳಿಂದ ಕಳಚದಂತೆ ಮುನ್ನಡೆಸುವ ಅಗತ್ಯ ಇದೆ  ಎಂದು ಅವರು ಎಚ್ಚರಿಸಿದರು.
    ನಿವೃತ್ತ ಉಪಜಿಲ್ಲಾಧಿಕಾರಿ, ಸಂಘಟಕ ಬಿ.ಬಾಲಕೃಷ್ಣ ಅಗ್ಗಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕಾಸರಗೋಡಿನ ವರ್ತಮಾನದ ಕನ್ನಡದ ತಲ್ಲಣಗಳ ಮಧ್ಯೆ ಜನರಲ್ಲಿ ಭಾಷಾ ಪ್ರೇಮ ಮೂಡಿಸುವಲ್ಲಿ ಅಲ್ಲಲ್ಲಿ ಕವಿ, ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸುವ ಉಪಕ್ರಮಗಳು ಬಲ ನೀಡುತ್ತದೆ ಎಂದು ತಿಳಿಸಿದರು.
   ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಹರೀಶ್ ಪೆರ್ಲ, ಡಾ. ಸುರೇಶ್ ನೆಗಲಗುಳಿ, ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಉಪಸ್ಥಿತರಿದ್ದು ಮಾತನಾಡಿದರು.
    ಬಳಿಕ ಉದಯೋನ್ಮುಖ ಕವಿಗಳಾದ ಆಶಾಲತಾ ಪೆರಡಾಲ, ಶಾರದಾ ಎಸ್.ಭಟ್ ಕಾಡಮನೆ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ದಯಾನಂದ ರೈ ಕಲ್ವಾಜೆ, ಶಾಂತಾ ರವಿ ಕುಂಟಿನಿ, ಚೇತನಾ ಕುಂಬಳೆ, ಕೆ.ಎನ್.ಅನ್ಸಾರಿ ಮೂಡಂಬೈಲು,ಮಂಜೇಶ್ವರ, ಸೋಮಶೇಖರ ಹಿಪ್ಪರಗಿ, ಶ್ವೇತಾ ಕಜೆ, ಲತಾ ಆಚಾರ್ಯ ಬನಾರಿ, ಚಿತ್ರಕಲಾ ದೇವರಾಜ್, ಪ್ರಭಾವತಿ ಕೆದಿಲಾಯ ಪುಂಡೂರು, ದೇವರಾಜ್ ಕೆ.ಎಸ್, ಮೌನೇಶ್ ಆಚಾರ್ಯ ಕಡಂಬಾರ್,ಸುಶೀಲಾ ಪದ್ಯಾಣ, ಜ್ಯೋಸ್ನ್ಯಾ ಎಂ.ಕಡಂದೇಲು, ಚಿತ್ತರಂಜನ್ ಕಡಂದೇಲು ಸ್ವರಚಿತ ಕವನಗಳನ್ನು ವಾಚಿಸಿದರು.
    ಪ್ರಭಾವತಿ ಕೆದಿಲಾಯ ಪುಂಡೂರು ಸ್ವಾಗತಿಸಿ, ಮಣಿರಾಜ್ ವಾಂತಿಚ್ಚಾಲ್ ವಂದಿಸಿದರು. ಪುರುಷೋತ್ತಮ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು. ನಿರಂಜನ ಆಚಾರ್ಯ ನೀಚರ್ಾಲು ಸಹಕರಿಸಿದರು.
      ವಿಶಿಷ್ಟತೆ:
   ವೇದಿಕೆ ಮುನ್ನಡೆಸುತ್ತಿರುವ ಸರಣಿ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮುಕ್ತ ಸ್ವಾಗತ ವ್ಯಕ್ತವಾಗಿದ್ದು, ಗೋಷ್ಠಿಯಲ್ಲಿ ಹಲವಾರು ಮಂದಿ ಸಾಹಿತ್ಯ ಪ್ರೇಮಿಗಳು ಪಾಲ್ಗೊಂಡಿದ್ದರು. ಮೂರು ಗಂಟೆಗಳಿಗಿಂತಲೂ ಹೆಚ್ಚುಹೊತ್ತು ನಡೆದ ಕವಿಗೋಷ್ಠಿಯಲ್ಲಿ ಕನ್ನಡ, ತುಳು ಕವಿತೆಗಳು ಹದವಾಗಿ ಬೀಳುತ್ತಿದ್ದ ಮಳೆಯ ಮಧ್ಯೆ ಹೊಸ ವಾತಾವರಣ ಸೃಷ್ಟಿಸುವಲ್ಲಿ ಸಫಲವಾಯಿತು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries