HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಸಿದ್ದಿಬೈಲು ಮೋರಿಸಂಕ ದುರಸ್ತಿಪಡಿಸಲು ಆಗ್ರಹಿಸಿ ಬಿಎಂಎಸ್ ಮಾಚರ್್ ಹಾಗೂ ಧರಣಿ
    ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯ ಹಲವು ಧಾಮರ್ಿಕ ಕೇಂದ್ರಗಳಿಗೆ ತೆರಳುವ ಕಣ್ಣೂರು ಸಿದ್ದಿಬೈಲಿನ ಮೋರಿಸಂಕ ವರ್ಷಗಳಾಗಿ ಮುರಿದು ಬಿದ್ದಿರುವ ಸ್ಥಿತಿಯಲ್ಲಿದ್ದು, ಕೂಡಲೇ ಸರಿಪಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಬಿಎಂಎಸ್ ಪುತ್ತಿಗೆ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಪುತ್ತಿಗೆ ಗ್ರಾಮ ಪಂಚಾಯತಿ ಕಚೇರಿಗೆ ಮಾಚರ್್ ಹಾಗೂ ಧರಣಿ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
   ಈ ಮೂಲಕ ಪರಿಹಾರವಾಗದಿದ್ದಲ್ಲಿ ಮುಂದೆ ಹೆಚ್ಚಿನ ಹೋರಾಟಕ್ಕೆ ನೇತೃತ್ವ ನೀಡಬೇಕಾದೀತು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಕೆ. ನಾರಾಯಣ ಅಡ್ಕತ್ತಬೈಲು ಮುನ್ನೆಚ್ಚರಿಕೆ ನೀಡಿದರು. ಪಂಚಾಯತಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಮುಕಾರಿಕಂಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದಶರ್ಿ ದಿನೇಶ್ ಬಂಬ್ರಾಣ, ರತೀಶ್ ಉಳಿಯತ್ತಡ್ಕ, ಬಾಬುಮೋನ್ ಮೊದಲಾದವರು ಮಾತನಾಡಿದರು. ಹರೀಶ್ ಸಿದ್ದಿಬೈಲು ಸ್ವಾಗತಿಸಿ, ರಾಮಚಂದ್ರ ಕುಲಾಲ್ ನಗರ ವಂದಿಸಿದರು.
   ಮೋರಿಸಂಕ ಕುಸಿತದ ಬಗ್ಗೆ:
         ಪ್ರಥಮ ವಾಷರ್ಿಕೋತ್ಸವದ ಸಂಭ್ರಮದಲ್ಲಿ ಸ್ಲಾಬ್ ಕುಸಿದ ಮೋರಿಸಂಕ
     ಸೀತಾಂಗೋಳಿ - ವಿದ್ಯಾನಗರ ರಾಜ್ಯ ಹೆದ್ದಾರಿಯ  ಕಣ್ಣೂರ್ - ಅನಂತಪುರ ರಸ್ತೆಯಲ್ಲಿ  ಸಿದ್ದಿಬೈಲು ಮೋರಿ ಸಂಕ ಕುಸಿದು ಒಂದು ವರ್ಷಕ್ಕೆ ಕೇವಲ  10 ದಿನಗಳು ಮಾತ್ರವಿರುವಾಗ ಈವರೆಗೆ ಯಾವುದೇ ತುತರ್ು ಕಾಮಗಾರಿಗೆ ಕ್ರಮ ಕೈಗೊಳ್ಳದ ಪುತ್ತಿಗೆ ಗ್ರಾಮ ಪಂಚಾಯತು ಅಧಿಕೃತರ ನೀರಸ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
   ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯ ಕಣ್ಣೂರ್ 9ನೇ ವಾಡರ್ಿಗೆ ಒಳಪಡುವ ಅನಂತಪುರ ದೇವಸ್ಥಾನ ರಸ್ತೆಯ ಸಿದ್ದಿಬೈಲು ಎಂಬಲ್ಲಿ ಮೋರಿ ಸಂಕ  ಕುಸಿದು ಒಂದು ವರ್ಷವಾದರೂ ಈ ವರೆಗೆ ದುರಸ್ತಿ ಕಾರ್ಯ ಮಾಡದಿರುವುದು ಮತ್ತು ಅಧಿಕೃತರು ತುರ್ತಗಿ ಭೇಟಿಕೊಟ್ಟು ರಸ್ತೆ ಅಪಘಾತವನ್ನು ಆಹ್ವಾನಿಸುವ ಬಗ್ಗೆ ಸೂಚನಾ ಫಲಕವನ್ನಾಗಲಿ ಸ್ಥಾಪಿಸದಿರುವುದರಿಂದ ದಿನನಿತ್ಯ ಸಣ್ಣ-ಸಣ್ಣ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇದೆ ಎಂದು ನಾಗರಿಕರು ಆರೋಪಿಸುತ್ತಾರೆ.
   ಕೇರಳ ಸರಕಾರದ ಪ್ರಮುಖ ತೀರ್ಥ ಕ್ಷೇತ್ರವಾದ  ಶ್ರೀ ಅನಂತಪುರ ದೇವಸ್ಥಾನಕ್ಕೆ ಆಗಮಿಸುವ  ರಾಜ್ಯ-ಹೊರರಾಜ್ಯ ಯಾತ್ರಾಥರ್ಿಗಳ ವಾಹನಗಳು, ಕಿನ್ಫ್ರಾ ಇಂಡಸ್ಟ್ರಿಯಲ್ ಗೆ ಸರಕು ಸಾಗಿಸುವ ಘನ ವಾಹನಗಳು, ವಿವಿಧ ಶಾಲಾ ವಾಹನಗಳು ಮತ್ತು ಮಾಯಿಪ್ಪಾಡಿ - ನಾಯಿಕ್ಕಾಪು ಮೂಲಕ ಕುಂಬಳೆಗೆ ತೆರಳುವ ಅತಿ ಹತ್ತಿರದ ದಾರಿ ಆಗಿರುವುದರಿಂದ ಹಲವಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯ ಮೋರಿ ಸಂಕವು ಸಂಪೂರ್ಣ ಕುಸಿತದ ಭೀತಿಯಲ್ಲಿದೆ.
   ಗ್ರಾಮ  ಪಂಚಾಯತಿನ ಪ್ರತಿ ವಾಷರ್ಿಕ ಮುಂಗಡ ಪತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಮತ್ತು ಸುರಕ್ಷತೆಗೆ ಕೋಟಿ ಲೆಕ್ಕದಲ್ಲಿ ಅನುದಾನ ಮೀಸಲಿರಿಸುದ್ದರು ಇಂತಹ ತುತರ್ು ಕಾಮಗಾರಿಯ ಬಗ್ಗೆ ಜಾಗೃತರಾಗದಿರುವುದು ಅತ್ಯಂತ ವಿಷಾದನೀಯ ಎಂದು ನಾಗರಿಕರು ತಿಳಿಸುತ್ತಾರೆ.
     ಚುನಾವಣೆ ಸಮಯದಲ್ಲಿ ವಿವಿಧ ವಾಗ್ದಾನಗನ್ನು ನೀಡಿ  ಗೆದ್ದ ನಂತರ ಜನಸೇವೆಗೆ ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಜನಪ್ರತಿನಿಧಿಗಳು 5 ವರ್ಷದ ಅವಧಿಯಲ್ಲಿ  ತಮ್ಮ ತಮ್ಮ ಜೇಬು ತುಂಬಿಸುವ ಕಾರ್ಯದಲ್ಲಿ ನಿರತವಾಗಿರುದರಿಂದ ಇಂಥಹಾ ಕೆಲಸಗಳ ಬಗ್ಗೆ ನಿರಾಸಕ್ತಿ ಹೊಂದಲು ಕಾರಣವೆಂದು ಆ ರಸ್ತೆಯಲ್ಲಿ ಸಂಚಾರಿಸುವ  ಎಲ್ಲಾ ನಾಗರಿಕರು ಏಕಕಂಠದಿಂದ ಆರೋಪಿಸುತ್ತಾರೆ.
     ಜುಲೈ 28 ಕ್ಕೆ ಈ ಸಂಕ ಕುಸಿದು ಒಂದು ವರ್ಷ ಪೂತರ್ಿಗೊಳ್ಳಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries