HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ದಕ್ಷಿಣ ಕನ್ನಡದಲ್ಲಿ ಮಳೆ: ಹೈ ಅಲಟರ್್ಗೆ ಸಚಿವರ ಸೂಚನೆ
    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಇಬ್ಬರ ಸಾವು, ಮನೆಗಳಿಗೆ ಹಾನಿ ಹಾಗೂ ನೆರೆ ಭೀತಿ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರು ಅಧಿಕಾರಿಗಳ ಜತೆ ತುತರ್ು ಸಭೆ ನಡೆಸಿ, ಎಲ್ಲ ಅಧಿಕಾರಿಗಳು ಜಾಗೃತರಾಗಿದ್ದುಕೊಂಡು ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದರು.
   ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪ್ರಕೃತಿ ವಿಕೋಪ ಹಾನಿಗಳ ಪರಿಶೀಲನೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯಲ್ಲಿ ಜು.11ರ ತನಕ ಪ್ರತಿದಿನ ಸರಾಸರಿ ಶೇ. 160ಕ್ಕಿಂತ ಹೆಚ್ಚುವರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ವರದಿ ಮಾಡಿರುವುದರಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಸೂಚಿಸಿದರು.
   ದೇವಳ ಮುಳುಗಡೆ ಭೀತಿ: ನೇತ್ರಾವತಿ ನದಿ ನೀರಿನ ಅಪಾಯ ಮಟ್ಟ 31.5 ಮೀ. ಆಗಿದ್ದು, ಶನಿವಾರ 27ಕ್ಕೆ ತಲುಪಿದೆ. 31 ದಾಟಿದರೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಪಕ್ಕದ 70ರಷ್ಟು ಮನೆಗಳು ಮುಳುಗಡೆ ಭೀತಿ ಇದೆ. ಆದ್ದರಿಂದ ಅಲ್ಲಿ ಬೋಟ್ಗಳನ್ನು ನಿಯೋಜಿಸಿ, ಜನರಿಗೆ ಸುರಕ್ಷಿತ ಸ್ಥಳಕ್ಕೆ ರವಾನೆ, ಪುನರ್ವಸತಿ, ಆಹಾರ, ಆರೋಗ್ಯದ ಎಲ್ಲ ವ್ಯವಸ್ಥೆ ಕೈಗೊಳ್ಳಲು ಸಚಿವ ಖಾದರ್ ನಿದರ್ೇಶನ ನೀಡಿದರು.
   ಎಸಿಗಳಿಗೆ ಜವಾಬ್ದಾರಿ: ಹವಾಮಾನ ಇಲಾಖೆ ಸೂಚನೆ ಅನುಸರಿಸಿ, ಮಳೆಯಿಂದ ಸಂಭವಿಸಬಹುದಾದ ಹಾನಿ ಎದುರಿಸಲು ಮಂಗಳೂರು ಮತ್ತು ಪುತ್ತೂರು ಸಹಾಯಕ ಕಮೀಷನರ್ ನೇತೃತ್ವದಲ್ಲಿ ಎಲ್ಲ ತಾಲೂಕುಗಳ ತಹಸೀಲ್ದಾರ್ ಮತ್ತು ತಾಪಂ ಇಒಗಳು ಕಾರ್ಯಯೋಜನೆ ಸಿದ್ಧಪಡಿಸಬೇಕು. ಇತರ ಇಲಾಖೆಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಹಯೋಗ ಪಡೆದು ಕಾರ್ಯನಿರ್ವಹಿಸಬೇಕು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries