HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಬಸ್ರೂರು ತುಳುವೇಶ್ವರನ ಮಡಿಲಲ್ಲಿ
                       ತುಳುನಾಡೋಚ್ಚಯ-2018
      ಬದಿಯಡ್ಕ: ಬಸ್ರೂರು ತುಳುನಾಡಿನ ಮತ್ತು ಕನರ್ಾಟಕದ ನಾಗರೀಕತೆಯ ಪ್ರಧಾನ ಮೈಲುಗಲ್ಲಾಗಬೇಕಾದ ಒಂದು ಪ್ರದೇಶ. ಪ್ರಾಚಿನ ತುಳುನಾಡಿನ ಬಂದರು ವಾಣಿಜ್ಯ ಪ್ರದೇಶವಾದ ಬಸ್ರೂರು ಸುಮಾರು 300ಕ್ಕಿಂತಲೂ ಹೆಚ್ಚು ದೇಗುಲಗಳ ನೆಲೆವೀಡಾಗಿತ್ತು. ಇದೀಗ ಸುತ್ತಲೂ ವಾರಾಹಿನದಿಯನ್ನು ಅಪ್ಪಿಕೊಂಡಿರುವ ಈ ಪ್ರದೇಶ ಹಲವು ಸಂಸ್ಕೃತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಮೂಕವೇದನೆಯನ್ನು ಅನುಭವಿಸುತ್ತಿದೆ. ಸರಕಾರ ಮತ್ತು ಪುರಾತತ್ವ ಇಲಾಖೆಯ ಮತ್ತು ಅಕಾಡೆಮಿಗಳ ನಿರ್ಲಕ್ಷ್ಯದಿಂದ ತನ್ನ ಮಡಿಲೊಳಗಿದ್ದ ಇತಿಹಾಸವನ್ನು ಸಾರುವ ಸ್ಮಾರಕಗಳು ಮಣ್ಣುಪಾಲಾಗಿವೆ. ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳಾಗಿ, ಮೆಟ್ಟಲುಗಳಾಗಿ ನಾಮಾವಶೇಷಗೊಂಡಿವೆ. ಅಲ್ಲದೆ ತುಳುನಾಡಿನ ಹಾಗೂ ಭಾಷೆಯ ಪ್ರತೀಕವಾದ ತುಳುವೇಶ್ವರನ ದೇಗುಲವು ಶಿಥಿಲಗೊಂಡರೂ, ಪ್ರಕೃತಿ ಶಕ್ತಿಯಿಂದ ಆಲದಮರದಿಂದಾವೃತವಾದ ಗರ್ಭಗುಡಿಯಲ್ಲಿದ್ದು ತನ್ನ ಶಾಪಮೋಕ್ಷಕ್ಕಾಗಿ ಕಾಯುತ್ತಿದ್ದಾನೆ.
    ಇಂತಹ ಭವ್ಯ ಪರಂಪರೆಯ ತುಳುನಾಡಿನ ಈ ಪ್ರದೇಶವನ್ನು ಜಗತ್ತಿಗೆ ಸಾರಿ ಹೇಳಬೇಕೆಂಬ ಉದ್ದೇಶದಿಂದ ತುಳುವೆರೆ ಆಯನೊ ಕೂಟವು ನಡೆಸುವ ತುಳುನಾಡೋಚ್ಚಯ ಕಾರ್ಯಕ್ರಮವನ್ನು ಬಸ್ರೂರಿನಲ್ಲಿ ನಡೆಸಲು ತೀಮರ್ಾನಿಸಲಾಗಿದೆ. ಈ ಬಗ್ಗೆ ತುಳುವೆರೆ ಆಯನೊ ಕೂಟ ಕುಡ್ಲ ಮತ್ತು ಕಾಸರಗೋಡಿನ ಸದಸ್ಯರು ಬಸ್ರೂರು ಅಪ್ಪಣ್ಣ ಹೆಗ್ಡೆ ಮತ್ತು ಡಾ.ವಾದಿರಾಜ್ ಭಟ್ ರವರಲ್ಲಿ ಚಚರ್ಿಸಿ ಅವರ ಸಹಾಯ ಸಹಕಾರವನ್ನು ಕೇಳಿಕೊಳ್ಳಲಾಯಿತು.
    ಈ ಸಂದರ್ಭದಲ್ಲಿ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ ಈ ಮೊದಲು ಹಲವುಬಾರಿ ತುಳು ಸಮ್ಮೇಳನವನ್ನು ಆಯೋಜಿಸಲು ಹೊರಟರೂ ಅದು ಕೂಡಿಬರಲಿಲ್ಲ. ಈಗ ಕಾಲಕೂಡಿ ಬಂದಿದೆ ಎಂದು ಅನಿಸುತ್ತಿದೆ. ಸಮಸ್ತರನ್ನೂ ಒಟ್ಟು ಸೇರಿಸಿ, ತುಳುನಾಡಿನಲ್ಲಿ ಜಾತಿ-ಮತ-ಭಾಷಾ ಸೌಹಾರ್ದತೆಯನ್ನು ಸಾರುವ ತುಳುನಾಡೋಚ್ಚಯ-2018ನ್ನು ಬಸ್ರೂರಿನಲ್ಲಿ ನಡೆಸುವುದು ತುಂಬಾ ಹೆಮ್ಮೆಯ ವಿಷಯ ಎಂದರು.
   ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಾಧಿಕಾರಿಗಳಾದ ದಯಾನಂದ ಕತ್ತಲ್ಸಾರ್, ಡಾ. ರಾಜೇಶ ಆಳ್ವ ಬದಿಯಡ್ಕ, ಆಶಾ ಶೆಟ್ಟಿ ಅತ್ತಾವರ, ಹರೀಶ್ ಶೆಟ್ಟಿ ಪಣಿಯೂರು, ಪ್ರಸಾದ್.ಯಸ್ ಕೊಂಚಾಡಿ, ನಾಗಾರಾಜ್ ಕುದ್ರೊಳಿ, ಭೂಷಣ್ ಕುಲಾಲ್, ರಕ್ಷಿತ್ ಕುಡುಪು, ರಾಧಿಕ ವಾಮಂಜೂರು, ಚೇತನ್ ಕುಮಾರ್ ಕುಲಶೇಖರ, ಮೊದಲಾದವರು ಭೇಟಿನೀಡಿದ ತಂಡದಲ್ಲಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries