ಕನ್ನಡ ಗಝಲ್
ಕವಯಿತ್ರಿ ಚೇತನಾ ಕುಂಬಳೆ:
ನಿನ್ನ ಮಡಿಲಲ್ಲೇ ಕಣ್ಮುಚ್ಚಿ ಚಿರನಿದ್ರೆಗೆ ಜಾರುವೆ ಸಖ
ಕೊನೆಯ ಬಾರಿ ನಿನ್ನ ಬಿಂಬವ ಕಣ್ತುಂಬಿಕೊಳ್ಳುವೆ ಸಖ
ಸಮಯ ಎಚ್ಚರಿಸಿದಾಗ ಹೃದಯದ ಮಿಡಿತ ನಿಲ್ಲುತ್ತದೆ
ಎದೆಯ ಗರ್ಭಗುಡಿಯಲ್ಲಿ ನಿನ್ನನ್ನಿಟ್ಟು ಪೂಜಿಸುವೆ ಸಖ
ಉಸಿರು ನಿಂತ ಮೇಲೆ ದೇಹ ಸೇರುವುದು ಮಣ್ಣನ್ನೇ
ನಿನಗಾಗಿ ಕಾದಿರಿಸಿದೊಲವ ಸುಧೆಯನು ಹರಿಸುವೆ ಸಖ
ಕಾಲ್ಗೆಜ್ಜೆಗಳು ಮರೆತ ಸ್ವರವನು ನೆನಪಿಸಲು ಬಂದುಬಿಡು
ನೀ ಹಾಡುವ ಹಾಡಿಗೆ ಕ್ಷಣಹೊತ್ತು ಜಗವ ಮರೆಯುವೆ ಸಖ
ತನುವಿನೊಡಲ ಬಿಸಿ ತಣ್ಣಗಾಗುವವರೆಗೂ ಕಾಯದಿರು
ಕನಸುಗಳು ನಿನ್ನಿಂದ ಬಣ್ಣಬಳಿಸಿಕೊಳ್ಳಲು ಕಾಯುತ್ತಿವೆ ಸಖ
ಚೇತನಾ ಕುಂಬಳೆ: