ಉಚಿತ ವೈದ್ಯಕೀಯ ಶಿಬಿರ
ಸಂಘಟನೆಗಳ ಸೇವಾ ಕೈಂಕರ್ಯ ಸಮಾಜಾಭಿವೃದ್ದಿಯ ಮೈಲುಗಲ್ಲು-ಯೋಜನಾಧಿಕಾರಿ ಚೇತನಾ ಎಂ.
ಉಪ್ಪಳ: ಸನಾತನ ಧರ್ಮವು ಸೇವಾ ಕೈಂಕರ್ಯದ ಮಹತ್ವದ ಬಗ್ಗೆ ಕಳಕಳಿ ವ್ಯಕ್ತಪಡಿಸಿದೆ. ಸಮಾಜದಲ್ಲಿ ದೀನರು, ಸಂಕಷ್ಟದಲ್ಲಿರುವವರ ಬಗ್ಗೆ ನೆರವನ್ನು ನೀಡುವ ಮನೋಭಾವ ಬದುಕಿನ ಮಹತ್ವದ ಸೇವೆಯಾಗಿದ್ದು, ಸಂತೃಪ್ತ ಸಮಾಜ ನಿಮರ್ಾಣದಲ್ಲಿ ಆರೋಗ್ಯವಂತ ಜೀವನ ಶೈಲಿಯನ್ನು ಕಾಪಾಡಿಕೊಳ್ಳುವುದು ಮಹತ್ವದ್ದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಅಭಿಪ್ರಾಯ ವ್ಯಕ್ತಪಡಿಸಿದರು.
ಕುರುಡಪದವಿನ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿಗಳು ವ್ಯಾಪಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಲಪ್ತ ಸಮಯದಲ್ಲಿ ವೈದ್ಯಕೀಯ ತಪಾಸಣೆ-ಚಿಕಿತ್ಸೆಗಳನ್ನು ಪಡೆಯುವುದು ಅಗತ್ಯವಿದ್ದು, ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಸೇವಾ ಸಂಘಟನೆಗಳು ನೆರವಾಗುವುದು ಸ್ತುತ್ಯರ್ಹ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಬಂಧಕ ಗೋಪಾಲಕೃಷ್ಣ ಭಟ್ ಕುರಿಯ ಅವರು ಮಾತನಾಡಿ, ಸಂಘಟನೆಗಳು ಸಮಾಜ ಪರಿವರ್ತನೆಗೆ ಕಾರಣವಾಗುವ ಸೇವಾ ಚಟುವಟಿಕೆಗಳನ್ನು ನಡೆಸುವುದರಿಂದ ಇತರರಿಗೂ ಮಾದರಿಯಾಗುವುದರೊಂದಿಗೆ ನೆಮ್ಮದಿಗೆ ಕಾರಣವಾಗುತ್ತದೆ. ಎಲ್ಲಾ ಸಂಪತ್ತುಗಳಿಗಿಂತಲೂ ಮಿಗಿಲಾದ ಆರೋಗ್ಯ ಸಂಪತ್ತನ್ನು ಕಾಪಿಡುವಲ್ಲಿ ತೋರ್ಪಡಿಸುವ ಕಳಕಳಿಯು ಸಮಗ್ರ ವಿಕಾಸಕ್ಕೆ ದಾರಿಮಾಡಿಕೊಡುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಡಾ.ಸೂರ್ಯನಾರಾಯಣ, ಬಾಯಾರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮೋಳಿ ಥಾಮಸ್, ಪೈವಳಿಕೆ ಗ್ರಾ.ಪಂ. ಸದಸ್ಯೆ ತಾರಾ ವಿ.ಶೆಟ್ಟಿ, ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯೆ ಡಾ.ರಝೀನಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಾಶಂಸನೆಗೈದರು.
ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ನ ಕಾರ್ಯದಶರ್ಿ ರವಿ ಕುಲಾಲ್ ಮೂಂಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹೇಮಂತ ಪಾರೆಕೋಡಿ ವಂದಿಸಿದರು. ಅಕ್ಷತ್ ಬಂಡಿಮಾರು ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ವೈದ್ಯಕೀಯ ಶಿಬಿರದಲ್ಲಿ ಸ್ತ್ರೀರೋಗ ತಪಾಸಣೆ,ಮಕ್ಕಳ ತಪಾಸಣೆ, ಕಣ್ಣಿನ ತಪಾಸಣೆ,ಇಎನ್ಟಿ, ಎಲುಬು ತಪಾಸಣೆ, ಇಸಿಜಿ(ಅಗತ್ಯವಿದ್ದವರಿಗೆ ಮಾತ್ರ),ಜನರಲ್ ತಪಾಸಣೆ ಮತ್ತು ರಕ್ತದಾನ ಗಳನ್ನು ನಡೆಸಲಾಯಿತು. ಶಿಬಿರದಲ್ಲಿ ನೂರಕ್ಕಿಂತಲೂ ಮಿಕ್ಕಿದ ಗ್ರಾಮೀಣ ಜನರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.