ಬಿಳಿಯಲ್ಲ ಕಪ್ಪು ಹಾಲು-ಎಂಡೋ ಪೀಡಿತ ವಿದ್ಯಾಥರ್ಿಗಳಿಗೆ ಬದುಕಲು ಅವಕಾಶವೇ ಇಲ್ಲವೇ?
ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯತು ವ್ಯಾಪ್ತಿಯ ಅಡ್ಕ ದಲಲಿರುವ ಸ್ನೇಹ ಬಡ್ಸ್ ಶಾಲೆಯ ವಿದ್ಯಾಥರ್ಿಗಳಿಗೆ ವಿತರಿಸಲಾಗುವ ಹಾಲಿನಲ್ಲಿ ಕಲಬೆರಕೆ ಪತ್ತೆಯಾಗಿ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ.
ಅಡ್ಕದಲ್ಲಿ ಕಾಯರ್ಾಚರಿಸುತ್ತಿರುವ ಬಡ್ಸ್ ಶಾಲೆಗೆ ಪ್ರತಿನಿತ್ಯ ಹಾಲು ವಿತರಿಸಲಾಗುತ್ತದೆ. ಆದರೆ ಗುರುವಾರ ವಿತರಿಸಲಾದ ಹಾಲು ಕಪ್ಪು ಬಣ್ಣದಿಂದ ಕಂಡುಬಂದಿದ್ದು, ಜೊತೆಗೆ ಕಸ ಮಿಶ್ರವಾಗಿರುವೂ ಪತ್ತೆಯಾಗಿದೆ. ಮುಳ್ಳೇರಿಯದ ಪೇಟೆಯ ಅಂಗಡಿಯಿಂದ ನಿತ್ಯ ಹಾಲು ರವಾನೆಯಾಗುತ್ತಿದ್ದು, ಪ್ಯಾಕೆಟ್ ಹಾಲು ಕಲಬೆರಕೆಯಾಗಿರುವುದು ಬೆಚ್ಚಿಬೀಳಿಸಿದೆ.
ಎಂಡೋ ಸಲ್ಫಾನ್ ಸಾಲದೇ?
ಕಾರಡ್ಕ ಗ್ರಾ.ಪಂ. ಹೆಚ್ಚಿನ ಸಂಖ್ಯೆಯಲ್ಲಿ ಎಂಡೋ ಪೀಡಿತ ಪ್ರದೇಶವಾಗಿದ್ದು, ಇಲ್ಲಿಯ ಎಂಡೋ ಪೀಡಿತ ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಸ್ನೇಹ ಬಡ್ಸ್ ಶಾಲೆ ಪ್ರವತರ್ಿಸುತ್ತಿದೆ. ಸುಮಾರು 58 ವಿದ್ಯಾಥರ್ಿಗಳು ಇಲ್ಲಿ ಕಲಿಯುತ್ತಿದ್ದು, ಸರಾಸರಿ 25 ರಿಂದ 30 ವಿದ್ಯಾಥರ್ಿಗಳು ದಿನನಿತ್ಯ ಶಾಲೆಗೆ ಆಗಮಿಸುತ್ತಾರೆ. ಇಲ್ಲಿಯ ವಿದ್ಯಾಥರ್ಿಗಳಿಗೆ ವಾರದಲ್ಲಿ ಎರಡು ಬಾರಿ ಹಾಲು ನೀಡಲಾಗುತ್ತದೆ. ಒಬ್ಬ ವಿದ್ಯಾಥರ್ಿಗೆ 150 ಮಿಲ್ಲೀಲೀಟರ್ ನಂತೆ ಹಾಲು ವಿತರಿಸಬೇಕೆಂಬುದು ಕಾನೂನು. ಈ ಕಾರಣದಿಂದ ಸುಮಾರು 3 ಲೀಟರ್ ಹಾಲು ಒಮ್ಮೆ ವಿತರಿಸಲು ಬಳಸಲಾಗುತ್ತಿದ್ದು, ಮುಳ್ಳೇರಿಯಾದ ಪೇಟೆಯ ಅಂಗಡಿಯಿಂದ ಮಿಲ್ಮಾ ಬ್ರಾಂಡಿನ ಹಾಲು ಖರೀದಿಸಲಾಗುತ್ತದೆ. ಆದರೆ ಗುರುವಾರ ಜನತಾ ಬ್ರಾಂಡಿನ ಹಾಲು ಖರೀದಿಸಲಾಗಿದ್ದು, ಅದರಲ್ಲಿ ಈ ಕಲಬೆರಕೆ ಕಂಡುಬಂದಿದೆ.
ಏನಂತಾರೆ:
ಬಡ್ಸ್ ಶಾಲೆಗೆ ಪೇಟೆಯಿಂದ ಹಾಲು ಖರೀದಿಸಿ ವಿತರಿಸಲಾಗುತ್ತಿದ್ದು, ಗುರುವಾರ ವಿತರಣೆಗೊಂಡ ಹಾಲು ಕಲಬೆರಕೆಗೊಂಡಿರುವ ಬಗ್ಗೆ ಬಡ್ಸ್ ಶಾಲಾ ಅಧಿಕೃತರು ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸ್ವಪ್ನಾ ಜೆ.
ಅಧ್ಯಕ್ಷೆ ಕಾರಡ್ಕ ಗ್ರಾಮ ಪಂಚಾಯತು.
...................................................................................................................................
2) ಗುರುವಾರ ತರಿಸಲಾದ ಹಾಲಿನ ಪ್ಯಾಕೆಟ್ ಕುದಿಸುತ್ತಿರುವಂತೆ ಕಪ್ಪು ಬಣ್ಣಕ್ಕೆ ತಿರುಗಿದ ಹಾಲು ಕಲಬೆರಕೆಯಾಗಿರುವುದು ಗಮನಕ್ಕೆ ಬಂದಿದೆ. ಹಾಲಿಗೆ ರಾಗಿ ಸೇರಿಸಿದಂತೆ ಮೇಲ್ನೋಟಕ್ಕೆ ಕಂಡುಬಂದಿದ್ದು, ಚಹಾಕ್ಕೆ ರಸ್ಕ್ಸ್ ಸೇರಿಸಿದಾಗ ಬರುವ ವಾಸನೆ ಈ ಹಾಲಿನಿಂದ ಬಂದಿದೆ. ಆದ್ದರಿಂದ ಅದನ್ನು ಬಳಸಿಲ್ಲ.ಈ ಬಗ್ಗೆ ಗ್ರಾ.ಪಂ.ಗೆ ದೂರು ನೀಡಲಾಗಿದೆ.
ಭಾರತಿ.
ಕಾರಡ್ಕ ಬಡ್ಸ್ ಶಾಲಾ ಪ್ರಾಂಶುಪಾಲೆ.