HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಕೇರಳ ಸರಕಾರ ಸ್ಥಳ ನೀಡಿದರೆ ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪನೆ : ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ 
    ಕಾಸರಗೋಡು: ರಾಜ್ಯ ಸರಕಾರ ಅಗತ್ಯದ ಸ್ಥಳ ನೀಡಿದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಏಮ್ಸ್) ಕಾಸರಗೋಡಿನಲ್ಲೇ ಸ್ಥಾಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.
   ಕಾಸರಗೋಡು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು, ಕೇಂದ್ರ ಮೆಡಿಕಲ್ ಕಾಲೇಜು ಕಾಸರಗೋಡಿನಲ್ಲೇ ಸ್ಥಾಪಿಸಬೇಕೆಂದು ಸಂಸದ ಪಿ.ಕರುಣಾಕರನ್ ಅವರ ನೇತೃತ್ವದ ಸರ್ವಪಕ್ಷ ನಿಯೋಗ ಕೇಂದ್ರ ಸಚಿವರನ್ನು ಭೇಟಿ ನೀಡಿ ಸಲ್ಲಿಸಿದ ಮನವಿಗೆ ಸಚಿವರು ಏಮ್ಸ್ ಸ್ಥಾಪಿಸುವ ಕುರಿತಾಗಿ ಭರವಸೆ ನೀಡಿದರು.
    ಕೇರಳಕ್ಕೆ ಏಮ್ಸ್ ಮಂಜೂರು ಮಾಡಿದೆ. ಏಮ್ಸ್ ಬಗ್ಗೆ ಕೇರಳಕ್ಕೆ ನೀಡಿರುವ ಭರವಸೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಏಮ್ಸ್ ಸ್ಥಾಪಿಸಲು ಅಗತ್ಯದ ಸ್ಥಳವನ್ನು ನೀಡಬೇಕಾದುದು ಕೇರಳ ಸರಕಾರವಾಗಿದೆ. ಕೇರಳ ಸರಕಾರ ಸ್ಥಳ ನೀಡಿದ್ದಲ್ಲಿ ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸಲು ಕೇಂದ್ರ ಸರಕಾರದಿಂದ ಯಾವುದೇ ಅಡ್ಡಿಯಿಲ್ಲ ಎಂದರು. ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಕೇರಳ ಸರಕಾರ ಬೇಡಿಕೆ ನೀಡಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದು.
     ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡು ಮೆಡಿಕಲ್ ಕಾಲೇಜು ಸ್ಥಾಪಿಸುವುದಕ್ಕೆ ಕೆಲವೊಂದು ತಾಂತ್ರಿಕ ಅಡಚಣೆಗಳಿವೆ. ಲೋಕಸಭಾ ಕ್ಷೇತ್ರವೊಂದರಲ್ಲಿ ಪ್ರಸ್ತುತ ಮೆಡಿಕಲ್ ಕಾಲೇಜೊಂದಿದ್ದರೆ ಅಂತಹ ಕ್ಷೇತ್ರದಲ್ಲಿ ಕೇಂದ್ರ ಮೆಡಿಕಲ್ ಕಾಲೇಜು ಪರಿಗಣಿಸಬೇಕಾಗಿಲ್ಲ ಎಂಬುದು ಕೇಂದ್ರದ ನಿಲುವಾಗಿದೆ. ಕಾಸರಗೋಡು ಲೋಕಸಭಾ ವ್ಯಾಪ್ತಿಯ ಪರಿಯಾರಂನಲ್ಲಿ ಈಗಾಗಲೇ ಮೆಡಿಕಲ್ ಕಾಲೇಜು ಕಾಯರ್ಾಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕೇಂದ್ರ ಮೆಡಿಕಲ್ ಕಾಲೇಜು ಸ್ಥಾಪಿಸಲು ತಾಂತ್ರಿಕ ಅಡ್ಡಿಗಳಿವೆ ಎಂದು ಸಚಿವರು ನಿಯೋಗಕ್ಕೆ ತಿಳಿಸಿದ್ದಾರೆ.
   ಎಂಡೋಸಲ್ಫಾನ್ ಸಂಕಷ್ಟಗಳ ಕೇಂದ್ರ, ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಗಡಿ ಪ್ರದೇಶ ಎಂಬುದನ್ನು ಪರಿಗಣಿಸಿ ಕಾಸರಗೋಡು ಜಿಲ್ಲೆಯಲ್ಲೇ ಕೇಂದ್ರ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನು ವಿನಂತಿಸಿದೆ.
    ಇದೇ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವೆಡ್ಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಈ ಬೇಡಿಕೆಗಳ ಬಗ್ಗೆ ಪರಿಗಣಿಸುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.
     ನಿಯೋಗದಲ್ಲಿ ಸಂಸದರಾದ ಪಿ.ಕರುಣಾಕರನ್, ಪಿ.ಕೆ.ಶ್ರೀಮತಿ, ಶಾಸಕ ಎಂ.ರಾಜಗೋಪಾಲನ್, ಸಿಪಿಐ ಜಿಲ್ಲಾ ಕಾರ್ಯದಶರ್ಿ ಗೋವಿಂದನ್ ಪಳ್ಳಿಕಾಪ್ಪಿಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮೊದಲಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries