HEALTH TIPS

No title

                     ಬೆರಿಪದವಿನಲ್ಲಿ ಷಡ್ಯಂತ್ರದ ವಿರುದ್ಧ  "ಜನ ಜಾಗೃತಿ ಸಭೆ"
     ಉಪ್ಪಳ: ಕನರ್ಾಟಕದಿಂದ ಅಕ್ರಮವಾಗಿ ಕೇರಳಕ್ಕೆ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ಕನರ್ಾಟಕದ ಯುವಕರು ವಿಚಾರಿಸಿದ ಘಟನೆಯನ್ನು ತಿರುಚಿ ಕೇರಳದ ಗಡಿಭಾಗದ ಹಿಂದೂ ಸಂಘಟನೆಯ ಯುವಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪೋಲೀಸರಿಂದ ಬಂಧನ ಮಾಡಿಸುವ ಷಡ್ಯಂತ್ರದ ವಿರುದ್ಧ  ಕಾಸರಗೋಡು ಜಿಲ್ಲೆಯ ಪೈವಳಿಕೆಯ ಬೆರಿಪದವು ಪರಿಸರದಲ್ಲಿ "ಜನ ಜಾಗೃತಿ ಸಭೆ" ಗುರುವಾರ ಸಂಜೆ ನಡೆಯಿತು.
    ಈ ಸಂದರ್ಭದಲ್ಲಿ ಮಾತಾನಾಡಿದ ಭಜರಂಗದಳದ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಅವರು, ವಿಹಿಂಪ ಮತ್ತು ಭಜರಂಗದಳ ಹಿಂದುಗಳ ರಕ್ಷಣೆಗೆ ಕಟಿಬದ್ಧವಾಗಿದೆ.ನಮ್ಮ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮಗೆ ನಿರಂತರ ಪ್ರೇರಣೆ. ನಮ್ಮ ರಕ್ಷಣೆಗಾಗಿ ನಾವು ಸಂಘಟಿತರಾಗಬೇಕು. ನಮ್ಮ ಮಾತೃಶಕ್ತಿ ಜಾಗೃತವಾದರೆ ಬಲಿಷ್ಠ
ಸಮಾಜ ನಿಮರ್ಾಣ ಸಾಧ್ಯ. ನಮ್ಮ ಪ್ರತಿ ಮನೆಯಲ್ಲೂ ಶಿವಾಜಿ ಹಾಗೂ ಸಾವರ್ಕರ್  ರಂತ ವೀರರು ನಿಮರ್ಾಣವಾಗಬೇಕು.ಆಗ ನಮ್ಮ ಮೇಲೆ ಯಾವ ಆಕ್ರಮಣ ಆಗಲಾರದು ಎಂದು ಅಭಿಪ್ರಾಯಪಟ್ಟರು.
   ಭಾಜಪದ  ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಮಾತನಾಡಿ, ಕೇರಳವು ಭಾರತದ್ದೇ ಒಂದು ಭಾಗವಾಗಿದೆ.ಇಲ್ಲಿನ ಕೊನೆಯ ಹಿಂದುವಿನ ಉಸಿರುವವರೆಗೂ ಇದನ್ನು ಪಾಕಿಸ್ತಾನ ಆಗಲು ಬಿಡಲಾರೆವು ಎಂದರು. ಹಿಂದು ಯುವಕರ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಕಮ್ಯುನಿಸ್ಟ್ ಹಾಗೂ ಮುಸ್ಲಿಂ ಲೀಗ್ ಇಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆದರೆ ಹಿಂದೂ ಸಮಾಜ ಯಾವ ಕಾರಣಕ್ಕೂ ಹೆದರಬೇಕಾಗಿಲ್ಲ.ಸಂಘಟಿತರಾಗಿ ಇದ್ದು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ನಾವು ಸಶಕ್ತರಾಗಿದ್ದೇವೆ ಎಂದರು. ರಾಜ್ಯದಲ್ಲಿ ಕಮ್ಯುನಿಸ್ಟ್ ಸರಕಾರ ಆಡಳಿತದಲ್ಲಿದ್ದರೂ ತನ್ನ ಪಕ್ಷದ ವಿದ್ಯಾಥರ್ಿ ಸಂಘಟನೆಯಾದ ಎಸ್ಎಫ್ಐಯ  ಅಭಿಮನ್ಯು ಎನ್ನುವ ಯುವಕನನ್ನು ಎಸ್ಡಿಪಿಐ  ಕ್ಯಾಂಪಸ್ ಪ್ರಂಟ್ ನ ಮುಸಲ್ಮಾನರಿಂದ ಕೊಲೆಯಾದಾಗ, ಅಭಿಮನ್ಯು ಮನೆಗೆ  ಭೇಟಿ ನೀಡದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ಗ್ರಾಮ ಪಂಚಾಯತಿ ಒಂದರಲ್ಲಿ ಅಧಿಕಾರಕ್ಕಾಗಿ ಅದೇ ಎಸ್ಡಿಪಿಐ ಜೊತೆ ಸೇರಿ ಸರಕಾರ ರಚಿಸುವ ಮೂಲಕ ತನ್ನ ಪಕ್ಷದ ಕಾರ್ಯಕರ್ತರ ಜೀವಕ್ಕೆ ಬೆಲೆ ಕೊಡದೆ ಅಧಿಕಾರಕ್ಕೆ ಅಂಟಿಕೊಂಡಿರುವುದು ನಾಚಿಕೆಯ ಸಂಗತಿಯಾಗಿದೆ.ತೊಂಬತ್ತರ ದಶಕದಲ್ಲಿ ಕೇರಳ ಭಯೋತ್ಪಾದಕರ ಅಡಗುದಾಣವಾಗಿದೆ ಎಂದು ಭಾಜಪದ ಕೆ.ಜಿ ಮಾರಾರ್ ಹೇಳಿರುವುದು ಇಂದಿಗೆ ಸತ್ಯ ಎಂಬುದು ಎಲ್ಲರೂ ಒಪ್ಪುವಂತಾಗಿದೆ. ಸಂಘಟಿತವಾಗಿದ್ದು ಎಲ್ಲಾ ಆಕ್ರಮಣವನ್ನು ಎದುರಿಸಲು ಸಂಕಲ್ಪ ತೊಡೋಣ ಎಂದು ಅವರು ಹೇಳಿದರು.
     ಸಭೆಯಲ್ಲಿ ವಿಹಿಂಪದ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ, ವಿಹಿಂಪದ ಜಿಲ್ಲಾ ಕಾರ್ಯದಶರ್ಿ ಉಳುವಾನ ಶಂಕರ ಭಟ್,ವಿಹಿಂಪದ ಜಿಲ್ಲಾ ಉಪಾಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿ, ವಿಹಿಂಪದ ಪೈವಳಿಕೆ ಪಂಚಾಯತಿ ಘಟಕದ ಅಧ್ಯಕ್ಷ ಮೋಹನ ಬಲ್ಲಾಳ್,ಭಜರಂಗದಳದ ಸುರೇಶ್ ಶೆಟ್ಟಿ ಪರಂಕಿಲ, ಭಾಜಪದ ನಾಯಕರಾದ ಹರಿಶ್ಚಂದ್ರ ಮಂಜೇಶ್ವರ, ಎ.ಕೆ. ಕಯ್ಯಾರು, ಸರೋಜ ಆರ್  ಬಲ್ಲಾಳ್, ಸುಬ್ರಹ್ಮಣ್ಯ ಭಟ್, ಸದಾಶಿವ ಚೇರಾಲು, ಸುಂದರ ಶೆಟ್ಟಿ ಕಳಾಯಿ ಮೊದಲಾದವರು ಉಪಸ್ಥಿತರಿದ್ದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries