ಮತ್ತೆ ಕಾಡುವ ಮಳೆ ಹಾನಿ-ವಿದ್ಯುತ್ ಕಂಬಗಳು ಧರಾಶಾಯಿ
ಉಪ್ಪಳ: ಭಾರಿ ಗಾಳಿ ಮಳೆಗೆ ಮರಗಳು ವಿದ್ಯುತ್ತಂತಿ ಮೇಲೆ ಉರುಳಿ ಬಿದ್ದಕಾರಣ ವಿದ್ಯುತ್ ಕಂಬಗಳು ಮುರಿದು ಬಿದ್ದು ಧರಾಶಾಯಿಯಾಗಿವೆ. ಕೆ.ಎಸ್.ಇ.ಬಿ ಉಪ್ಪಳ ವಿಭಾಗಕ್ಕೆ ಒಳಪಟ್ಟಿರುವ ಸಮುದ್ರಕಿನಾರೆ ಪ್ರದೇಶವಾದ ಮಣಿಮುಂಡ-ಮುಸೊಡಿ-ಶಾರದಾನಗರ ಪರಿಸರದ 15 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮುಸೋಡಿ ಶಾರದಾ ನಗರದಲ್ಲಿ ಮರಗಳು ಬಿದ್ದ ಕಾರಣ ಟ್ರಾನ್ಸ್ಫಾರ್ಮರ್ ಹಾನಿಗೀಡಾಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಬದಿಯಿರುವ ವಿದ್ಯುತ್ ಕಂಬಗಳು ಉರುಳಿ ಬಿದ್ದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಳೆದ ಎರಡು ವಾರಗಳ ಹಿಂದೆಯೂ ಇದೇ ಪರಿಸರದ ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಇದೀಗ ಮತ್ತೆ ವಿದ್ಯುತ್ ಕಂಬಗಳು ಧರಾಶಾಯಿಯಾಗುವುದರೊಂದಿಗೆ ಅಲ್ಲಿಯ ನಿವಾಸಿಗಳು ನಿತ್ಯ ಸಂಕಷ್ಟಕ್ಕೊಳಗಾಗಿದ್ದಾರೆ.
ಮಾಹಿತಿ ಅರಿತ ಉಪ್ಪಳ ಕೆ.ಎಸ್.ಇ.ಬಿ ವಿಭಾಗದ ಅಧಿಕಾರಿ ಅಬ್ದುಲ್ಖಾದರ್, ನಾಸರ್ ಮೊದಲಾದವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದೆ. ಸ್ಥಳೀಯ ನಾಗರಿಕರು ಸಹಿತ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಮರವನ್ನು ಕತ್ತರಿಸಿ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸುವ ಕಾರ್ಯ ಮುನ್ನಡೆಯಿತು.
ಮುಳ್ಳೇರಿಯಾ ಪ್ರದೇಶದಲ್ಲೂ ಗಾಳಿ ಮಳೆಗೆ ಮರಗಳು ವಿದ್ಯುತ್ತಂತಿ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಘಟನೆ ನಡೆದಿದೆ.ಕಂಬಗಳು ಮುರಿದು ಬಿದ್ದ ಕಾರಣ ಮುಳ್ಳೇರಿಯಾದಿಂದ ಬೀರಂಗೋಳು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.