HEALTH TIPS

No title

                ಬಾಳೆಮೂಲೆ: ವಾಚನಾ ಪಾಕ್ಷಿಕ ಆಚರಣೆ
      ಪೆರ್ಲ: ಬಾಳೆಮೂಲೆ ನಿರಂತರ ಕಲಿಕಾ ಕೇಂದ್ರದ ಆಶ್ರಯದಲ್ಲಿ ವಾಚನಾ ಪಾಕ್ಷಿಕ ಆಚರಣೆಯು ಇತ್ತೀಚೆಗೆ ಜರಗಿತು.
        ಪತ್ರಕರ್ತ,ಸಂಘಟಕ ಜಯ ಮಣಿಯಂಪಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಓದುವ ಕ್ರಿಯೆ ನಿತ್ಯ ನಿರಂತರವಾದಾಗ ಹೊಸ ಹೊಸ ಅರಿವುಗಳ ಸಂಗ್ರಹ ಸಾಧ್ಯ. ಮನುಷ್ಯ ಉಳಿದ ವಿಚಾರಗಳಿಗೆ ವ್ಯಯಿಸುವ ಸಮಯ ಹಾಗೂ ಹಣದಂತೆ ವಾಚನಕ್ಕೂ ಮಹತ್ವ ನೀಡಿದರೆ ಜ್ಞಾನ ವೃದ್ಧಿಯೊಂದಿಗೆ ನಾಡಿನ ಪುರೋಗತಿಗೂ ಕಾರಣವಾಗಬಲ್ಲುದು ಎಂದರು.
   ಯುವ ಕವಿ ಮಣಿರಾಜ್ ವಾಂತಿಚ್ಚಾಲು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪಿ.ಎನ್.ಪಣಿಕ್ಕರ್ ಅವರ ಬದುಕಿನ ತತ್ವಾದರ್ಶಗಳು ಹಾಗೂ ವಾಚನಾ ಆಸಕ್ತಿ ಬಹು ಮುಖ್ಯ ಕ್ರಾಂತಿಯನ್ನೆ ಸೃಷ್ಟಿಸಲು ಸಾಧ್ಯವಾಗಿದ್ದು,  ಇಂದಿನ ಯುವ ಜನತೆ ಇದನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
   ಕಲಿಕಾ ಕೇಂದ್ರದ ಮುಖ್ಯ ಪ್ರೇರಕ್ ಆನಂದ ಕೆ.ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿಸರು. ಬಳಿಕ ಶಿಶು ಸಾಹಿತ್ಯ,ನವ್ಯ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯದ ಬಗ್ಗೆ ಚಚರ್ಾಗೋಷ್ಠಿ ನಡೆಯಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries