HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಮತ್ತೆ ಬಂದಿತು ಆಟಿ
    ಉಪ್ಪಳ: 'ಆಟಿ ಆಡ ಆಡ ಸೋಣ ಓಡ ಓಡ' ತುಳುನಾಡಿನ ಪ್ರಚಲಿತ ಮಾತು ಕರ್ಕಟ ಮಾಸ ಆಡಿಕೊಂಡು ನಿಧಾನವಾಗಿ ನಡೆಯುತ್ತದೆ ಸಿಂಹ ಮಾಸ ಚುರುಕಲ್ಲಿ ಹಬ್ಬ ಹರಿದಿನಗಳ ಗೌಜಿಯಲ್ಲಿ ಕಳೆದದ್ದೇ ಗೊತ್ತಾಗುವುದಿಲ್ಲ ಎಂಬುದು ತಾತ್ಪರ್ಯ.
     ಆಟಿ ತುಳು ಮಾಸಗಳಲ್ಲಿ ತೀರಾ ಭಿನ್ನ ಹಾಗೂ ವೈವಿದ್ಯಪೂರ್ಣ ಬದುಕನ್ನು ಸಾಗಿಸುತ್ತಿದ್ದ ತಿಂಗಳು. ನಾಗರಪಂಚಮಿಯನ್ನು ಹೊರತುಪಡಿಸಿ ಯಾವುದೇ ಹಬ್ಬಹರಿದಿನಗಳಿಲ್ಲದ ಮಾಸ ಆಟಿ. ಭೂತಾರಾದನೆ ಹಾಸು ಹೊಕ್ಕಿರುವ ತುಳುನಾಡಿನಲ್ಲಿ ಭುತಸ್ಥಾನಗಳಲ್ಲೂ ಆಟಿಯಲ್ಲಿ ಗುಡಿತೆರೆಯುವುದಿಲ್ಲ ನೇಮ ಕೋಲ ನಡೆಯುವುದಿಲ್ಲ. ಧಾಮರ್ಿಕ ಶುಭ ಕಾರ್ಯಗಳಿಗೆ ನಿಷೇಧವಿದ್ದು ಹತ್ತು ಹಲವು ಜನಪದೀಯ ನಂಬಿಕೆಗಳ ಆಗರವಾಗಿದೆ. ಅನಾದಿಕಾಲದಿಂದಲೂ ತುಳುನಾಡಿನ ಪರಂಪರೆಯಲ್ಲಿ ಧಾಮರ್ಿಕ, ಸಾಂಸ್ಕೃತಿಕ ಹಾಗೂ ಜನಪದೀಯ ನಂಬಿಕೆ ಆಚರಣೆಗಳಿಂದ ವಿಶಿಷ್ಟವೂ ವೈವಿಧ್ಯ ಪೂರ್ಣವೂ ಆದಂತಹ ಮಾಸವಾಗಿದೆ.
    ತುಳುವರ ಆಟಿ ಆಚರಣೆಗಳಿಗೆ ನಾಂದಿ ಯಾಗಿದ್ದು ಆ ಸಮಯ, ಕೃಯೇ ಬದುಕಾಗಿದ್ದ ಕಾಲಘಟ್ಟ, ಆಟಿ ಬಂತೆಂದರೆ ಉಕ್ಕಿ ಹರಿಯುವ ನದಿ, ಧಾರಾಕಾರವಾಗಿ ಸುರಿಯುವ ಮಳೆ ತುಂಬಿದ ಗುಡ್ಡಕಾಡು  ಯಾವುದೇ ಆಧುನಿಕ ಸೌಕರ್ಯಗಳಿಲ್ಲದೆ ಮುಳಿ ಸೋಗೆ ಮಾಡಿನ ಮನೆಯಲ್ಲಿ ವಾಸಿಸುತ್ತಿದ್ದ ತುಳುವರ ಬದುಕು. ಮಳೆಯ ಆರ್ಭಟಕ್ಕೆ ಮನೆಯಿಂದ ಹೊರಬರಲಾಗದ ಸ್ಥಿತಿ, ಸುತ್ತು ಮುತ್ತ ಪ್ರಾಕೃತಿಕವಾಗಿ ದೊರೆಯುವ ಕೆಸು, ತಜಂಕ್, ಕಣಿಲೆ,ಹಲಸಿನ ಬೀಜ(ಪೆಲತ್ತರಿ), ಉಪ್ಪು ನೀರಲ್ಲಿ ಹಾಕಿಟ್ಟಿದ್ದ ಹಲಸಿನ ಸೊಳೆ(ಉಪ್ಪಡಚ್ಚಿಲ್), ನೀರಲ್ಲಿ ಹಾಕಿಟ್ಟಿದ್ದ ಮಾವು(ನೀರ್ ಕುಕ್ಕು)  ಗಳೇ ಊಟದ ಪದಾರ್ಥಕ್ಕೆ ಬಳಸಲ್ಪಡುತ್ತಿದ್ದ ತಿಂಗಳು, ಒಂದೆಡೆ ನಿತ್ಯ ತೇವದಿಂದ ತಲೆಎತ್ತುವ ತರತರದ ಸಾಂಕ್ರಾಮಿಕ ರೋಗಗಳು, ಚಿಮಿಣಿ ದೀಪವೇ ಬೆಳಕಿಗೆ ಆಧಾರವಾಗಿರುವ ದಿನಗಳು. ಸಮಯ ಕಳೆಯಲು ಯಾವುದೇ ಮಾಧ್ಯಮಗಳಿಲ್ಲದೆ  ತಂತ್ರ ಜ್ಞಾನದ ಸೋಂಕಿಲ್ಲದ ಚೆನ್ನೆಮಣೆಯಂತಹ ಮನೆಯೊಳಗೇ ಆಡುವ ಆಟಗಳಿಂದ ಸಮಯ ಕಳೆಯಬೇಕಾಗಿದ್ದ  ನೂರಾರು ವರ್ಷಗಳ ಹಿಂದಿನ ದಿನಗಳು, ಅಜ್ಜಿಕತೆಗಳು, ಪಾರ್ದನಗಳು ಮನೆಮನೆಗಳಲ್ಲಿ ಗುನುಗುತ್ತಿದ್ದ ದಿನಗಳು,  ಮದುವೆ ಮಾಡಿಕೊಟ್ಟಿದ್ದ ಮನೆಮಗಳು ಗಂಡನಮನೆುಂದ ತಾುಮನೆಗೆ ಒಂದಿಷ್ಟುದಿನ ಇದ್ದು ಹೋಗಲು ಬರುವ ( ಆಟಿಕುಲ್ಲೆರೆ) ಮಾಸ  ತುಳುವರ ಆಟಿಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಿದೆ.
     ತುಳುವರ ಆಟಿ
   ದಾಮರ್ಿಕ ನಂಬಿಕೆಯಂತೆ 'ಆಟಿ' ಶುಭ ಕಾರ್ಯಕ್ಕೆ ನಿಷೇಧ. ಮದುವೆ,ಮುಂಜಿ, ಉಪನಯನಾದಿಗಳು ಈತಿಂಗಳಲ್ಲಿ ನಡೆಯುವುದಿಲ್ಲ. ಸತ್ತವರ ಪ್ರೇತಕ್ಕೆ ಬಡಿಸುವುದು , ಪ್ರೇತ ವಿವಾಹಗಳು ಜರಗುತ್ತವೆ. ಆಟಿತಿಂಗಳಲ್ಲಿ ಅವಿವಾಹಿತ ಗಂಡು ಹಾಗೂ ಸಜಾತಿಯ ಹೆಣ್ಣು ಸತ್ತಿದ್ದಲ್ಲಿ ಅಂತಹ ಗಂಡು ಹೆಣ್ಣಿಗೆ ಸಾಂಕೇತಿಕ ಮದುವೆನಡೆಯುತ್ತದೆ.ಅದಕ್ಕೆ 'ಕುಲೆ ಮದಿಮೆ' ಎನ್ನುತ್ತಾರೆ.(ಪ್ರೇತ ವಿವಾಹ). ಕುಲೆಗಳಿಗೆ ಬಡಿಸುವುದು, ಅಗೆಲ್ ಇಡುವುದೂ ತುಳುವರಲ್ಲಿ ಕಾಣಬಹುದು.
   ವಾತಾವರಣದ ತೇವದಲ್ಲಿ ರೋಗಾಣುಗಳು ಹೆಚ್ಚು ಸಕ್ರಿಯವಾಗಿ ವಿವಿಧ ರೋಗ ರುಜಿನಗಳನ್ನು ತಂದೊಡ್ಡುತ್ತವೆ. ಇದನ್ನು ಮಾರಿ ರೋಗ ಎನ್ನುತ್ತಿದ್ದರು. ಇದನ್ನು ನಿವಾರಿಸಲು ತುಳುವರು ಎರಡು ರೀತಿಯ ಜನಪದೀಯ ಕ್ರಮವನ್ನು ಆಚರಿಸುತ್ತಾರೆ. ಇದರಲ್ಲಿ ಒಂದು ವೈದ್ಯಕೀಯ ನಂಬಿಕೆಯ 'ಪಾಲೆ'ಮರದ ತೊಗಟೆಯಲ್ಲಿರುವ ರಸ ಸೇವಿಸುವುದು ಇನ್ನೊಂದು ಧಾಮರ್ಿಕ ನಂಬಿಕೆಯ 'ಆಟಿಕಳಂಜ'.
     ಆಟಿ ಅಮವಾಸ್ಯೆಯದಿನ ಮುಂಜಾನೆ ಸೂರ್ಯನು ಉದಯಿಸುವ ಮೊದಲೇ ಮನೆಯ ಗಂಡಸು ಬರಿಮೈಯಲ್ಲಿ ಪಾಲೆಮರದ ಬಳಿಗೆಬಂದು ಮೂರು ಪ್ರದಕ್ಷಿಣೆ ಬಂದು ಕಚ್ಚಿ(ಕಲ್ಲಿನಿಂದ ಜಜ್ಜಿ)ಮರದ ತೊಗಟೆಯನ್ನು ತೆಗೆಯಬೇಕು ಹೀಗೆ ತೆಗೆದು ಸಂಗ್ರಹಿಸಿದ ತೊಗಟೆಯೊಂದಿಗೆ ಬಟ್ಟೆಯುಟ್ಟು ಮನೆಗೆ ಬರಬೇಕು ಆ ತೊಗಟೆಯನ್ನು ಕಡೆದು ರಸ ತೆಗೆಯುತ್ತಾರೆ. ಹಾಗೆ ಜೊತೆಗೆ ಬೆಳ್ಳುಳ್ಳಿ , ಕರಿಮೆಣಸಿನರಸವನ್ನು ತೆಗೆದು ಸೇರಿಸಿ ತಿಂಡಿತಿನ್ನುವ ಮೊದಲು ಬರಿ ಹೊಟ್ಟೆಗೆ ಸೇವಿಸುತ್ತಾರೆ. ಹಾಗೂ ಆದಿನ ರಸದ ಉಷ್ಣವನ್ನು ನಿಯಂತ್ರಿಸುವುದಕ್ಕೆ ಮೆಂತೆಯ ಅಂಬಲಿಯನ್ನು ಉಣ್ಣುತ್ತಾರೆ. ಹೀಗೆ ಪಾಲೆ ರಸ ಸೇವಿಸುವುದರಂದ ವರ್ಷವಿಡೀ ಯಾವುದೇ ರೋಗ ರುಜಿನ ಮಕ್ಕಳಿಗೆ ಹುಳ ಬಾದೆ ಬರುವುದಿಲ್ಲ ಎಂಬ ನಂಬಿಕೆ ತುಳುವರದ್ದು.
     ಆಟಿಕಳಂಜ:
  ಆಟಿಯಲ್ಲಿ ಮನುಷ್ಯರ ಹಾಗೂ ಬೆಳೆ ಜಾನುವಾರುಗಳಿಗೆ ಬರುವ ರೋಗರುಜಿನಗಳನ್ನು (ದೊಡ್ಡ ದೊಡ್ಡಕಾಯಿಲೆಗಳಿಗೆ ತುಳುವಿನಲ್ಲಿ 'ಮಾರಿ' ಎನ್ನುತ್ತಾರೆ) ನಿವಾರಿಸಲು ಕೈಲಾಸದಿಂದ ಶಿವ ಕಳುಹಿಸಿದ ಶಕ್ತಿಯೇ 'ಆಟಿಕಳಂಜ'.
   ನಲಿಕೆಯವರು ಅಥವಾ ಮೇರ ಎನ್ನುವ ಜನಾಂಗದವರು ಕಳಂಜನ ವೇಷಧರಿಸಿ ಮನೆಮನೆಗೆ ಬಂದು ಮನೆಯವರು ಕೊಟ್ಟ ಅರಸಿನ ಉಪ್ಪು ಮಸಿ ಇತ್ಯಾದಿ ಗಳನ್ನು ಮನೆಯಂಗಳದಲ್ಲಿ ನಾಲ್ಕೂ ಬದಿಗೆ ಮಂತ್ರಿಸಿ ಎಸೆದು ರೋಗ ರುಜಿನಗಳನ್ನು ನಿವಾರಣೆ ಮಡುತ್ತಾನೆ. ಆಟಿಕಳಂಜನ ವೇಶ ಭೂಷಣ ಹಾಗೂ ಪಾಡ್ದನದಲ್ಲಿ ಪ್ರಾದೇಶಿಕ ಅಲ್ಪ ವ್ಯತ್ಯಾಸಗಳನ್ನು ಗಮನಿಸಬಹುದು. ಅದರಂತೆ ಕಾಸರಗೋಡು, ಸುಳ್ಯ, ಮಂಗಳೂರು, ಉಡುಪಿ ಕಡೆಗಳ ಕಳಂಜನಲ್ಲಿನ ವ್ಯತ್ಯಾಸ ಗಮನಾರ್ಹ.
   ಮನೆ ಮನೆಗೆ ಬರುವ ಕಳಂಜ ಅಸೌಖ್ಯ ಇರುವ ಮಕ್ಕಳ, ಫಲ ಬಾರದ ತೆಂಗಿನಮರ , ಕರುಹಾಕದ ಆಕಳು, ಋತುಮತಿಯಾಗದ ಹೆಣ್ಣು, ಬಂಜೆ ಹೆಂಗಸಿನ ತಲೆಗೆ ನೀರೆರೆದರೆ ಅವರ ಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಸಿದ್ದಿಸುವುದೆಂಬ ನಂಬಿಕೆ ಇದೆ.(ಫಲವತ್ತತೆ ದೊರೆಯುತ್ತದೆ)
    ಆಟಿಕೆಲವೊಂದು  ನಾಣ್ಣುಡಿಗಳು:
  ಆಟಿಯಲ್ಲಿ ಭಯಭಕ್ತಿ ಇರಬೇಕು(ಕೇಚ್ ಕಳಿ ಉಪ್ಪೊಡುಗೆ), ಆಟಿ ಬಿಸಿಲಿಗೆ ಆನೆಯ ಬೆನ್ನೂ ಬಿರಿಯುತ್ತದೆ, ಆಟಿ ಆಡ ಆಡ  ಸೋಣ ವಾಡ ವಾಡ, ಆಟಿಯಲ್ಲಿ ಮಳೆಬಂದರೆ ಬೆಕ್ಕಿಗೂ ಅನ್ನ ಸಿಗದು, ಆಟಿಯಲ್ಲಿ ಆನೆಯೂ ನೀರು ಕುಡಿಯಿತು, ಆಟಿಯ ಹಲಸು ನಂಜುಮಗಾ ತಂದೆ ಬಂದನೋ ನೋಡುಮಗ.,  ಗಂಡ ಹೆಂಡಿರು ಚೆನ್ನಮಣೆ ಆಡ ಬಾರದು
         ಆಟಿ ವಿಪಯರ್ಾಸ:
  ಹಿಂದೆ ಆಟಿಯೆಂದರೆ ಬೇಸಾಯವೇ ಕೂಲಿ ನಾಲಿಯೇ ಬದುಕಾಗಿದ್ದ ಕಾಲ. ತುಳುವರಲ್ಲಿ ಹಿಂದೆ ಆಟಿ ತೀರಾ ಆಥರ್ಿಕ ಮುಗ್ಗಟ್ಟಿನ ಕಾಲ. ದುಡಿಯಲಾರದೆ, ಮನೆಯಲ್ಲಿ ಬೇಳೆ ಕಾಳುಗಳ ಸಂಗ್ರಹ ಇಲ್ಲದೆ ಕೆಸು, ಹಲಸಿನ ಬೀಜ, ಬಿದಿರಿನ ಎಳೆ(ಕಣಿಲೆ), ತಜಂಕ್, ಹೀಗೆ ಪ್ರಕೃತಿಯಲ್ಲಿ ಸಿಕ್ಕುವ ವಸ್ತು ತರಕಾರಿಗಳನ್ನೇ ತಿಂದು ಸಮಯ ಕಳೆಯಲು ಉಪಾಯವಿಲ್ಲದೆ ಚೆನ್ನಮಣೆ ಯಂತಹಾ ಒಳಾಂಗಣ ಆಟದಲ್ಲಿ ದಿನ ಕಳೆಯುತ್ತಿದ್ದರು. ಆದರೆ ಇಂದು ವಿದ್ಯಾವಂತ, ಧನವಂತ ಕೆಲವರು  ಆಟಿಡೊಂಜಿದಿನ ಎಂದೋ ಕೆಸರ್ಡ್ ಒಂಜಿದಿನೋ ಎಂದು ಬಗೆಬಗೆಯ ತಿಂಡಿ ತೀರ್ಥಗಳನ್ನು ಸವಿದು ಕೆಸರುಗದ್ದೆಯಲ್ಲಿ ಜನಪದ ಕುಣಿತಗಳನ್ನೋ ಹಗ್ಗ ಜಗ್ಗಾಟವನ್ನೋ ಮಾಡಿ ಆಡಿ ಸಂಭ್ರಮಿಸುತ್ತಿದ್ದಾರೆ.
                                ಯೋಗೀಶ್ ರಾವ್ ಚಿಗುರುಪಾದೆ
                        ಚಿತ್ರ: ಅಲಂಕಾರ್ ಡಿಜಿಟಲ್ ಮೀಯಪದವು.


 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries