HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

Qries
                  ಮುಳ್ಳೇರಿಯದ ಮುರುಕಲು ಬಸ್ ತಂಗುದಾಣ ಇನ್ನು ಇತಿಹಾಸ
     ಮುಳ್ಳೇರಿಯ: ಇಲ್ಲಿನ ಪೇಟೆಯಲ್ಲಿ ನೂತನ ಬಸ್ ತಂಗುದಾಣವು ಮರೀಚಿಕೆಯಾಗಿರುವಂತೆಯೇ ಪುರಾತನ ಮುರುಕಲು ಬಸ್ ತಂಗುದಾಣ ಸೋಮವಾರ ಇತಿಹಾಸದ ಪುಟ ಸೇರಿತು.
    ಮುರಿದು ತೆಗೆದ ಬಸ್ ತಂಗುದಾಣ ಸುಮಾರು 50 ವರ್ಷಕ್ಕೂ ಹಳೆಯ ಇತಿಹಾಸಕ್ಕೆ ಸೇರಿದ್ದು. ಕೆಲವು ವರ್ಷಗಳ ಹಿಂದೆ ಕಾರಡ್ಕ ಗ್ರಾಮ ಪಂಚಾಯಿತಿ ವತಿಯಿಂದ ಇದನ್ನು ಟೈಲ್ಸ್ ಹಾಕಿ ನವೀಕರಿಸಲಾಗಿತ್ತು. ಆದರೆ ಸೋರುವ ರೋಗ ಶಮನವಾಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಇದರ ಹಂಚುಗಳು ಕುಸಿದು ಬೀಳುವ  ಸ್ಥಿತಿಗೆ ತಲಪಿತ್ತು. ಗಾಳಿ -ಮಳೆಗಳಿಗೆ ನೀರು ಒಳ ಸೋರುತ್ತಿತ್ತು. ಕುಸಿಯುವ ಭೀತಿಯಲ್ಲಿರುವ ಈ ನಿಲ್ದಾಣದೊಳಗೆ ನಿಂತವರಿಗೆ ಬಸ್ ತಂಗುದಾಣವೇ ಮುರಿದು ಬೀಳುವ ಭಯದಿಂದ ಪ್ರಯಾಣಿಕರೂ ಉಪಯೋಗಿಸುವಲ್ಲಿ ಹಿಂಜರಿಯುತ್ತಿದ್ದಾರೆ.
    ಕಾರಡ್ಕ ಗ್ರಾಮ ಪಂಚಾಯಿತಿಯು ಈ ಕಟ್ಟಡವನ್ನು ಹರಾಜಿನ ಮೂಲಕ ಮುರಿದು ತೆಗೆಸಿ, ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಿದ್ದ ತಂಗುದಾಣಕ್ಕೆ ತಿಲಾಂಜಲಿ ನೀಡಿತು.
    ಆದರೆ ಬದಲಿ ವ್ಯವಸ್ಥೆ ಪ್ರಶ್ನೆಯಾಗಿಯೇ ಉಳಿದಿದೆ. ನೂತನ ಬಸ್ ತಂಗುದಾಣ ನಿಮರ್ಾಣದ ಯೋಜನೆ, ಅದಕ್ಕೆ ಅಗತ್ಯ ಸ್ಥಳ ಇನ್ನೂ ಗುರುತಿಸುವಿಕೆಯಾಗದೆ ಉಳಿದುಕೊಂಡಿದೆ. ಲೋಕೋಪಯೋಗಿ ಸ್ಥಳವಾದ ಕಾರಣ ತಂಗುದಾಣ ಮುರಿದ ಸ್ಥಳದಲ್ಲಿಯೇ ಬೇರೊಂದು ನಿಲ್ದಾಣ ನಿಮರ್ಿಸಲು ಸಾಧ್ಯವಾಗದು. ಅಷ್ಟೇ ಅಲ್ಲದೆ ಸಾಕಷ್ಟು ಸ್ಥಳಾವಕಾಶವೂ ಲಭ್ಯವಿಲ್ಲ.  ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ತಾತ್ಕಾಲಿಕ ನಿಮರ್ಾಣವೂ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಅಡೂರು, ಸುಳ್ಯ ರಸ್ತೆಯಲ್ಲಿ ಪ್ರಯಾಣಿಸುವವರು ಮರದಡಿಯನ್ನೇ ಆಶ್ರಯಿಸಬೇಕಾದ ಸ್ಥಿತಿ ಇದೆ. 
  

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries