ಕೊಂಡೆವೂರಿನ "ಶ್ರೀವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ"ಯ ಆರಂಭಿಕ ಕಾರ್ಯಕ್ರಮ
"ಮುಳಿಂಜ ಶ್ರೀಕ್ಷೇತ್ರ"ದಲ್ಲಿ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆಯ ಆರಂಭಿಕ ಕಾರ್ಯಕ್ರಮವು ಗ್ರಾಮ ದೇವಸ್ಥಾನವಾದ ಶ್ರೀ ಮುಳಿಂಜ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಸೋಮವಾರ ನಡೆಯಿತು.
ಮಾತೆಯರು ಪೂರ್ಣಕುಂಭದೊಡನೆ, ಶಂಖ ಜಾಗಟೆ ವಾದನ ಸಹಿತ ಗ್ರಾಮದ ಹಿರಿಕಿರಿಯರು ರಥವನ್ನು ಸ್ವಾಗತಿಸಿ ಶ್ರೀ ಮಹಾವಿಷ್ಣುವನ್ನು ಬರಮಾಡಿಕೊಂಡರು. ಮೊದಲಿಗೆ ಭಜನಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಬಳಿಕ ನಡೆದ ಸತ್ಸಂಗದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಮುಂದಿನ ಫೆಬ್ರವರಿ 19 ರಿಂದ 24 ರ ವರೆಗೆ ನಡೆಯುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ವಿಶೇಷತೆಗಳನ್ನು ವಿವರಿಸಿದರು. ಯಾಗದ ಅಗ್ನಿದರ್ಶನ, ಯಾಗ ಹೊಗೆಯನ್ನು ಆಘ್ರಾಣಿಸುವುದು ಮತ್ತು ಪೂಣರ್ಾಹುತಿಯ ನಂತರ ನಡೆಯುವ ಅವಭೃತ ಸ್ನಾನಗಳಿಂದ ನಮ್ಮ ಪಾಪಗಳೆಲ್ಲ ಪರಿಹಾರವಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ರಥ ಪರ್ಯಟನೆಯ ಮೊದಲ ಕಾರ್ಯಕ್ರಮ ನಮ್ಮ ಗ್ರಾಮದೇಗುಲದಲ್ಲಿ ನಡೆದಿದ್ದು, ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಶ್ರದ್ಧಾಕೇಂದ್ರಗಳಿಗೆ ಸಂಚರಿಸಲಿದೆ ಎಂದರು.
ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಸಂಜೀವ ಭಂಡಾರಿ ಮುಳಿಂಜಗುತ್ತು ಮತ್ತು ಧಾಮರ್ಿಕ, ಸಾಮಾಜಿಕ ಮುಂದಾಳು ಡಾ.ಶ್ರೀಧರ ಭಟ್ ಉಪ್ಪಳ ಉಪಸ್ಥಿತರಿದ್ದರು. ನಾರಾಯಣ ಹೆಗ್ಡೆ ಕೋಡಿಬೈಲು ಸ್ವಾಗತಿಸಿ, ಹರೀಶ್ ಮಾಡ ವಂದಿಸಿದರು.
ಯಾಗದ ಪಂಚಾಯತಿ ಸಮಿತಿಗಳ, ಉಪಸಮಿತಿಗಳ, ಕಾಞಂಗಾಡ್ ಮತ್ತು ಬೆಂಗಳೂರು ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಉಳಿದ ಶ್ರದ್ಧಾ ಕೇಂದ್ರಗಳಿಗೆ ರಥ ಸಂಚರಿಸುವ ವಿವರಗಳನ್ನು ತಿಳಿಸಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದರು.