HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          ಪೂಕ್ಕಯದಲ್ಲಿ ಕೇಂದ್ರ ಜಲ ಆಯೋಗ ಸವರ್ೆ ಕಚೇರಿ
     ಮುಳ್ಳೇರಿಯ: ಕುಡುಂಬುಪುಯದ ಪೂಕ್ಕಯದಲ್ಲಿ ಕೇಂದ್ರ ಜಲ ಆಯೋಗ ಸವರ್ೆ ಕಚೇರಿ ಆರಂಭಗೊಳ್ಳಲಿದೆ. ಹೊಳೆಯ ನೀರಿನ ಪ್ರಮಾಣ ಖಾಯಂ ಆಗಿ ತಪಾಸಣೆಗೊಳಪಡಿಸಲು ಈ ಸವರ್ೆ ಕಚೇರಿ ಉಪಯುಕ್ತವಾಗಲಿದೆ. ಕರಿಚ್ಚೇರಿ ಹೊಳೆ ಎಂದು ಕರೆಯಲಾಗುವ ಕುಡುಂಬೂರುಪುಯ ಮಾಚಿಪ್ಪುರದ ಮುಂಭಾಗದಿಂದ ಪಯಸ್ವಿನಿ ಹೊಳೆಯೊಂದಿಗೆ ಸೇರಿ ಚಂದ್ರಗಿರಿ ಹೊಳೆ ರೂಪುಗೊಂಡಿದೆ. ನೀರಿನ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದರಿಂದ ನೀರಿನ ಲಭ್ಯತೆ ಕುರಿತಾ ಲೆಕ್ಕಾಚಾರಗಳು ಭವಿಷ್ಯದಲ್ಲಿ ನಿಣರ್ಾಯಕವಾಗಲಿದೆ ಎಂಬುದು ಕೇಂದ್ರದ ಲೆಕ್ಕಾಚಾರವಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಗರಿಷ್ಠವಾಗಿ ಸಂರಕ್ಷಿಸಿಡಬೇಕಿದೆ. ಆದುದರಿಂದ ಹೆಚ್ಚಿನ ಹೊಳೆಗಳಲ್ಲಿ ಇಂತಹ ಸವರ್ೆ ಕಚೇರಿಗಳನ್ನು ಆರಂಭಿಸಲು ಯೋಜನೆಯಿರಿಸಲಾಗಿದೆ.
    ಪ್ರಸ್ತುತ ಪಯಸ್ವಿನಿ ಹೊಳೆಯಲ್ಲಿ ಜಲ ಆಯೋಗದ ಸವರ್ೆ ಕಚೇರಿಯಿದೆ. ಎರಿಞಿಪ್ಪುಯ ಸೇತುವೆ ಸಮೀಪ ಈ ಕಚೇರಿ ಕಾಯರ್ಾಚರಿಸುತ್ತಿದೆ. ಕಾಸರಗೋಡು ಜಿಲ್ಲೆಯ ಏಕ ಸವರ್ೆ ಕೇಂದ್ರ ಇದಾಗಿದೆ. ಪೂಕ್ಕಯದಲ್ಲಿ ತಾತ್ಕಾಲಿಕ ಬಾಡಿಗೆ ಕಟ್ಟಡದಲ್ಲಿ ಸವರ್ೆ ಕಚೇರಿ ಆರಂಭಗೊಳ್ಳಲಿದೆ. ನೀರಿನ ಪ್ರಮಾಣವನ್ನು ಲೆಕ್ಕಮಾಡುವ ಉಪಕರಣಗಳನ್ನು ಇಲ್ಲಿ ಸ್ಥಾಪಿಸಲಾಗುವುದು. ಪೂಕ್ಕಯದಲ್ಲಿ ಪ್ರಸ್ತುತ ಚೆಕ್ಡ್ಯಾಮ್ ಇರುವುದರಿಂದ ಅದರ ಮೇಲ್ಭಾಗದಲ್ಲಿ ಸವರ್ೆ ಕಚೇರಿ ಆರಂಭಿಸಲಾಗುವುದು. ಪ್ರತಿದಿನ ನೀರಿನ ಪ್ರಮಾಣವನ್ನು ತಪಾಸಣೆಗೊಳಪಡಿಸಲಾಗುವುದು. ಹೊಳೆಯ ಅಡಿಭಾಗದ ಸ್ಥಿತಿಯನ್ನು ನಿದರ್ಿಷ್ಟ ಕಾಲಾವಧಿಯಲ್ಲಿ ನೋಡಲಾಗುವುದು. ನೀರಿನಲ್ಲಿನ ಉಪ್ಪಿನ ಅಂಶ, ಕೆಸರು, ಪಿಎಚ್ ಮೌಲ್ಯ ಮೊದಲಾದವುಗಳನ್ನು ನಿರಂತರ ತಪಾಸಣೆಗೊಳಪಡಿಸಲಾಗುವುದು.
    ಹೊಳೆಯ ಸುತ್ತ ಲೈನ್ ಎಳೆದು ಮರಳಿನ ವ್ಯಾಪ್ತಿ, ಹೊಳೆಯ ಅಡಿಭಾಗಕ್ಕೆ ಬಂದು ತಲುಪುವ ಹೂಳು ಇತ್ಯಾದಿಗಳನ್ನು ತಿಳಿಯಲಿರುವ ವ್ಯವಸ್ಥೆ ಕಲ್ಪಿಸಲಾಗುವುದು. ಹೊಳೆ ತೀರದಲ್ಲಿ ನಿರಿನ ಮಟ್ಟ ತಿಳಿಯಲು ಮೀಟರ್ ಇರಲಿದೆ. ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿ ಹೊಳೆ ಹರಿಯುತ್ತದೆ ಎಂಬುದು ನೀರಿನ ಪ್ರಮಾಣ ಪರಿಶೀಲಿಸುವಲ್ಲಿ ನಿಣರ್ಾಯಕವಾಗಲಿದೆ. ಇದು ಎರಿಂಞಿಪ್ಪುಯದಲ್ಲಿ 28 ಮೀಟರ್ ಎತ್ತರದಲ್ಲಿದೆ. ಇದನ್ನು ಸೂಚಿಸುವ ಸಂಕೇತನ್ನು ಪೂಕ್ಕಯದಲ್ಲೂ ಸ್ಥಾಪಿಸಲಾಗುವುದು. ಮೂರು ವರ್ಷಗಳಿಗೊಮ್ಮೆ ಇದನ್ನು ಪರಿಶೀಲಿಸಿ ಎತ್ತರ ತಿದ್ದುಪಡಿ ಮಾಡಲಾಗುತ್ತದೆ. ಭೂಮಿಯಲ್ಲಿ  ಬರುವ ಬದಲಾವಣೆಗಳು ಸಂಕೇತ ಸ್ಥಾಪಿಸಿದ ಸ್ಥಳದಲ್ಲಿ  ಎಷ್ಟು ಬದಲಾವಣೆಗಳು  ಉಂಟಾಗುತ್ತಿವೆ ಎಂಬುದನ್ನು ತಪಾಸಣೆಗೊಳಪಡಿಸಲಾಗುವುದು.
   ಎರಿಞಿಪ್ಪುಯದ ಸವರ್ೆ ಕಚೇರಿ ಮೂವತ್ತು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಅಂದಿನಿಂದ ಇಲ್ಲಿ ನೀರಿನ ಪ್ರಮಾಣವನ್ನು ದಾಖಲಿಸಲಾಗಿದೆ. ಈ ಜೂನ್ನಲ್ಲಿ ಗತವರ್ಷಕ್ಕಿಂತ ಸುಮಾರು 672 ಅಡಿ ನೀರು ಹೆಚ್ಚು ಹರಿದಿರುವುದಾಗಿ ಅಂಕಿಅಂಶಗಳು ಹೇಳುತ್ತವೆ. 2017 ಜೂನ್ನಲ್ಲಿ 4445 ಅಡಿ ನೀರು ಹರಿದಿದ್ದರೂ ಈ ವರ್ಷ 5018 ಅಡಿಗೇರಿದೆ. ಕೊಡಗು ಜಿಲ್ಲೆಯ ಸಂಪಾಜೆಯ ಸಮೀಪ ನಾಲ್ಕು ಸಾವಿರದಷ್ಟು ಅಡಿ ಎತ್ತರದಲ್ಲಿರುವ ಬೆಟ್ಟದಿಂದ ಉದ್ಭವಿಸುವ ಪಯಸ್ವಿನಿಯ ನೀರು ಕನರ್ಾಟಕ ತಡೆ ಹಿಡಿಯಲಿದೆ ಎಂಬ ಆತಂಕವಿತ್ತು. ಆದರೆ ನೀರಿನ ಪ್ರಮಾಣ ನೋಡುವಾಗ ಇಂತಹ ಆತಂಕಗಳಿಗೆ ಅರ್ಥವಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries