ಕಾಂತಾವರದಲ್ಲಿ ಕಂಪೇರಲಿರುವ `ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ `ಜಲವರ್ಣ ಮಾಂತ್ರಿಕ'
ಜು.22 ರಂದು ಕಾಂತಾವರದಲ್ಲಿ ಬಿಡುಗಡೆಗೊಳ್ಳಲಿದೆ ಪಿ.ಎಸ್ ಪುಣಿಚಿತ್ತಾಯರ ಕುರಿತಾದ ಕೃತಿ ಬಿಡುಗಡೆ
ಮುಳ್ಳೇರಿಯ: ಖ್ಯಾತ ಚಿತ್ರ ಕಲಾವಿದ, ಕಾಂಚನಗಂಗಾ ಕಲಾಗ್ರಾಮದ ಸೃಷ್ಟಿಕರ್ತ ಪಿ.ಎಸ್.ಪುಣಿಂಚಿತ್ತಾಯರ ಕುರಿತಾದ ಕೃತಿ `ಜಲವರ್ಣ ಮಾಂತ್ರಿಕ ಪುಣಿಂಚಿತ್ತಾಯ' ಜುಲೈ 22 ರಂದು ಕಾಂತಾವರ ಕನ್ನಡ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದು ಕಾಂತಾವರ ಕನ್ನಡ ಸಂಘದ `ನಾಡಿಗೆ ನಮಸ್ಕಾರ' ಗ್ರಂಥಮಾಲೆಯ 238 ನೇ ಕೃತಿಯಾಗಿದೆ. ಕವಿ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿಕರ್ತರು. ಪುಸ್ತಕೋತ್ಸವದಂಗವಾಗಿ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದ್ದು ಪಿ.ಎಸ್.ಪುಣಿಂಚಿತ್ತಾಯರ ಕಲಾ ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಕನ್ನಡ ನಾಡುನುಡಿಗೆ ಸೇವೆ ಸಲ್ಲಿಸಿದ ಮಹನೀಯರುಗಳ ಕುರಿತಾದ ಪುಸ್ತಕಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ.
ಬೆಳಗ್ಗೆ 10 ಗಂಟೆಗೆ ಪ್ರೊ.ಉದ್ಯಾವರ ಮಾಧವ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸುವರು. `ಹೊಸತು' ಮಾಸಪತ್ರಿಕೆಯ ಸಂಪಾದಕ ಹಾಗೂ ನವಕನರ್ಾಟಕ ಪ್ರಕಾಶನದ ವ್ಯವಸ್ಥಾಪಕ ನಿದರ್ೇಶಕ ಡಾ.ಸಿದ್ದನಗೌಡ ಪಾಟೀಲ ಕೃತಿ ಬಿಡುಗಡೆಗೊಳಿಸುವರು.
ನಿಸರ್ಗದ ಸೊಬಗನ್ನು ಕುಂಚದಲ್ಲಿ ಸೆರೆ ಹಿಡಿಯುವ ಪಿ.ಎಸ್.ಪುಣಿಂಚಿತ್ತಾಯರು ಜಲವರ್ಣ ಮಾಧ್ಯಮದಲ್ಲಿ ಶ್ರೇಷ್ಠ ಕಲಾಕೃತಿಗಳನ್ನು ನೀಡಿದವರು. ಕೃಷಿ ತೋಟ ಮತ್ತು ಮನೆ ಪರಿಸರವನ್ನು ಕಲಾಗ್ರಾಮವಾಗಿಸಿ, ಗ್ರಾಮೀಣ ಚಿತ್ರ ಗ್ಯಾಲರಿ ಆರಂಭಿಸಿ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದವರು. ಚಿತ್ರ ರಚನಾ ತರಬೇತಿ, ಕಮ್ಮಟ, ಕಾಯರ್ಾಗಾರ, ಕಲಾಯಾತ್ರೆ, ಪ್ರಾತ್ಯಕ್ಷಿಕೆ, ಪ್ರದರ್ಶಗಳ ಮೂಲಕ ಹೊಸ ಹೊಸ ಕಲಾವಿದರನ್ನು ಸೃಷ್ಟಿಸಿದವರು. ಅವರ ಶಿಷ್ಯರನೇಕರು ದೇಶವಿದೇಶಗಳಲ್ಲಿ ಕೀತರ್ಿವಂತರಾಗಿದ್ದಾರೆ.
ಚಿತ್ರಕಲೆಯ ಬಗ್ಗೆ ಅರಿವು ಮೂಡಿಸಲು ಜಲವರ್ಣ ಪ್ರಚಾರ ಕಲಾಯಾತ್ರೆಯನ್ನು ಕೈಗೊಂಡವರಲ್ಲಿ ಪುಣಿಂಚಿತ್ತಾಯರು ಮೊದಲಿಗರು. ಸಂಪನ್ಮೂಲ ವ್ಯಕ್ತಿಯಾಗಿ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ, ತರಬೇತಿ ನೀಡುತ್ತಾ ಬಂದಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಕಲಾಶಾಲೆ, ಮುಂಬಯಿಯ ನೂತನ ಕಲಾಮಂದಿರ ಮೊದಲಾದೆಡೆಗಳಲ್ಲಿ ಚಿತ್ರಕಲೆಯನ್ನು ಕರಗತಮಾಡಿ ಪ್ರಕೃತಿಯ ಬೆಡಗು, ಬೆರಗನ್ನು ವರ್ಣಕುಂಚಗಳಲ್ಲಿ ಪಡಿಮೂಡಿಸುವ ಕಲಾವಂತಿಕೆಯನ್ನು ಹಂತಹಂತವಾಗಿ ಸಿದ್ಧಿಸಿಕೊಂಡರು.
ಕನರ್ಾಟಕ ಮತ್ತು ಕೇರಳ ರಾಜ್ಯಗಳ ಲಲಿತಕಲಾ ಅಕಾಡೆಮಿಗಳಲ್ಲಿ ಸುದೀರ್ಘಕಾಲ ಸದಸ್ಯರಾಗಿ, ಅಕಾಡೆಮಿಯ ಪ್ರಕಟಣೆಗಳ ಸಂಪಾದಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಕೇರಳ ತುಳು ಅಕಾಡೆಮಿಯ ಅಧ್ಯಕ್ಷರಾಗುವ ಅವಕಾಶವೂ ಲಭಿಸಿತ್ತು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಪುಣಿಂಚಿತ್ತಾಯರನ್ನು ಅರಸಿ ಬಂದಿವೆ. ಅವರು ಸ್ಥಾಪಿಸಿದ ಕಾಂಚನಾಗಂಗಾ ಕಲಾಗ್ರಾಮವು ಸಾಂಸ್ಕೃತಿಕ ನಕಾಶೆಯಲ್ಲಿ ಕಾಸರಗೋಡಿಗೆ ಮೆರುಗಿನ ಸ್ಥಾನ ಕಲ್ಪಿಸಿದೆ.