HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಸರಕಾರಿ ಶಾಲೆಗಳ ಅಭ್ಯುದಯಕ್ಕೆ ಮಾದರಿ
     ಮುಳ್ಳೇರಿಯ: ಸಾರ್ವಜನಿಕ ಶಿಕ್ಷಣ ಯಜ್ಞದ ಮುಖಾಂತರ ಸರಕಾರಿ ಶಾಲೆಗಳು ಸಹಿತ ಅನುದಾನಿತ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಸಹಿತ ಸರಕಾರದ ಧನಸಹಾಯದ ಮೂಲಕ ಸರಕಾರಿ ಶಾಲೆಗಳು ಸಹಿತ ಅನುದಾನಿತ ಶಾಲೆಗಳಲ್ಲಿ ಆಧುನಿಕ ಶೈಕ್ಷಣಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
   ಪರಪ್ಪ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಿಮರ್ಾಣಗೊಂಡ ನೂತನ ಕಟ್ಟಡದ ಉದ್ಘಾಟನೆ ಸೋಮವಾರ ನೆರವೇರಿಸಿ ಅವರು ಮಾತನಾಡಿದರು.
 ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಪಾಲುದಾರರಾಗಿ ಬದಲಾವಣೆಗೆ ಕಾರಣೀಕರ್ತರಾಗಿದ್ದಾರೆ ಎಂದರು.
   ಸರಕಾರದ ಐದು ವರ್ಷಗಳ ಕಾಲಾವಧಿಯಲ್ಲಿ ಶಿಕ್ಷಣ ರಂಗದ ಮುಖಚ್ಛಾಯೆ ಸಂಪೂರ್ಣ ಬದಲಾಗಲಿದೆ ಎಂದರು. ಶಾಲೆಗಳಲ್ಲಿ ಮಾತ್ರವಲ್ಲದೆ ಉನ್ನತ ವಿದ್ಯಾಭ್ಯಾಸ ಕೇಂದ್ರಗಳಲ್ಲೂ ಆಧುನೀಕರಣಕ್ಕೆ ಸರಕಾರವು ಕ್ರಮ ಕೈಗೊಂಡಿದೆ. ಶೈಕ್ಷಣಿಕ ಮೇಲ್ದಜರ್ೆಗೆ ಪೂರಕವಾದ ಭೌತಿಕ ಆಯಾಮದಲ್ಲೂ ಗಮನ ಹರಿಸಿ ಶಿಕ್ಷಣ ರಂಗವನ್ನು ಆಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗುವುದು ಎಂದು ಅವರು ಹೇಳಿದರು. ಸಾರ್ವಜನಿರ ಸಹಭಾಗಿತ್ವದ ಮೂಲಕ ಅಭಿವೃದ್ಧಿಪಡಿಸಲಾದ ಸರಕಾರಿ ಶಾಲೆಗಳಲ್ಲಿನ ಉತ್ತಮ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣದಿಂದ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದ ಪೋಷಕರು ಸರಕಾರಿ ಶಾಲೆಗಳತ್ತ ಹೊರಳಿದ್ದಾರೆ ಎಂದರು. ಕಳೆದ ಎರಡು ವರ್ಷಗಳಲ್ಲಿ 1000 ಕೋಟಿ ರು. ಗಳಷ್ಟು ಹಣವನ್ನು ಸರಕಾರ ಶಾಲಾಭಿವೃದ್ಧಿಗೆ ನೀಡಿದೆ. ಶಾಲೆಗಳ ಪ್ರತಿಯೊಂದು ತರಗತಿಗಳು ಹೈಟೆಕ್ ಆಗುವ ಮೂಲಕ ಸ್ಮಾಟರ್್ ಆಗಿವೆ ಎಂದರು.
  ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ಜೋಸ್ ಪತಾಲಂ, ಮುಖ್ಯ ಭಾಷಣ ಮಾಡಿದರು. ಹತ್ತನೇ ತರಗತಿಯಲ್ಲಿ ಎಲ್ಲ ವಿಷಯಗಳಲ್ಲಿ ಎ'ಪ್ಲಸ್ ಪಡೆದ ಹಾಗೂ ಹನ್ನೆರಡನೇಯ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು. ಶಾಲಾ ಕಟ್ಟಡ ನಿಮರ್ಾಣಕ್ಕೆ ಸಹಕರಿಸಿದ ಸಹಾಯಕ ಅಭಿಯಂತರ ವಿ.ಎಸ್ ರಮ್ಯಾ ವರದಿ ವಾಚಿಸಿದರು. ಕೊಡೊಂ ಬೆಳ್ಳೂರ್ ಗ್ರಾ.ಪಂ ಅಧ್ಯಕ್ಷ ಎಂ.ರಾಧಾಮಣಿ, ಪರಪ್ಪ ಬ್ಲಾ.ಪಂ ಉಪಾಧ್ಯಕ್ಷ ಪಿ.ವಿ ತಂಗಮಣಿ, ಸದಸ್ಯೆ ರಾಧಾ ವಿಜಯನ್, ಕೆ.ಕಾತ್ಯರ್ಾಯನಿ, ವಿ.ವಿ. ಚಂದ್ರನ್ ಮೊದಲಾದವರು ಮಾತನಾಡಿದರು. ಸಂಘಟಕ ಸಮಿತಿ ಅಧ್ಯಕ್ಷ ವಿ.ಬಾಲಕೃಷ್ಣನ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಸುರೇಶ್ ಕಾಕಾಟ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries