ಬಳ್ಳುಳ್ಳಾಯರ ನಿಧನ- ಸಂತಾಪ ಸೂಚಕ ಸಭೆ
ಮುಳ್ಳೇರಿಯ: ಇತ್ತೀಚೆಗೆ ನಿಧನರಾದ ಕಾಸರಗೋಡಿನ ಹಿರಿಯ ಪ್ರಭಾವೀ ಪತ್ರಕರ್ತ, ಕನ್ನಡ ಹೋರಾಟ ಧುರೀಣ, ಶ್ರೀಮಂತ ಕಲಾವಿದ, ಸಾಮಾಜಿಕ ಮುಖಂಡ, ಜನಾನುರಾಗಿಯೂ ಆಗಿದ್ದ ಯಂ. ವಿ. ಬಳ್ಳುಳ್ಳಾಯ ವಿಧಿವಶರಾದ ಬಗ್ಗೆ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಆಶ್ರಯದಲ್ಲಿ ಸಂತಾಪ ಸೂಚನೆ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಈಶ್ವರ ಭಟ್ ಬಳ್ಳಮೂಲೆ ಅಧ್ಯಕ್ಷತೆ ವಹಿಸಿದರು. ಕಾತರ್ಿಕೇಯ ಕಲಾನಿಲಯ ಕೋಟೂರು ಮತ್ತು ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಪ್ರಗತಿಯಲ್ಲಿ ಸಕ್ರಿಯವಾಗಿ ಸಾನಿಧ್ಯ ವಹಿಸಿದ್ದ ಯಂ. ವಿ. ಬಳ್ಳುಳ್ಳಾಯರ ಬಗ್ಗೆ ಹಲವು ವಿಚಾರಗಳನ್ನು ಸದಸ್ಯರು ಸಂಸ್ಮರಣೆ ಮಾಡಿದರು.
ಯಂ. ವಿ. ಬಳ್ಳುಳ್ಳಾಯರ ಅಭಿಮಾನಿಗಳನ್ನೂ ಸೇರಿಸಿಕೊಂಡು ಸಂಸ್ಮರಣಾ ಕಾರ್ಯಕ್ರಮವನ್ನು ಮುಳಿಯಾರು ಕ್ಷೇತ್ರದಲ್ಲಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕೃಷ್ಣ ಭಟ್ ಅಡ್ಕ, ರಾಘವೇಂದ್ರ ಉಡುಪುಮೂಲೆ, ಅನುಪಮಮಾ ರಾಘವೇಂದ್ರ, ರಾಜೇಶ್ವರಿ, ಸುಬ್ರಹ್ಮಣ್ಯ ಭಟ್ ಅಡ್ಕ, ಡಾ. ಶಿವಕುಮಾರ ಅಡ್ಕ, ಮುರಳಿಕೃಷ್ಣ ಸ್ಕಂದ ಉಪಸ್ಥಿತರಿದ್ದರು. ಗೋವಿಂದಬಳ್ಳಮೂಲೆ ಪ್ರಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ಭಟ್ ಅಡ್ಕ ವಂದಿಸಿದರು.