ರಾಮಾಯಣ ತರಗತಿ
ಪೆರ್ಲ: ಕಾತರ್ಿಕೇಯ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಭಾನುವಾರ ರಾಮಾಯಣ ಮತ್ತು ಪುಸ್ತಕ ಓದುವಿಕೆಯ ಬಗ್ಗೆ ಮಕ್ಕಳಿಗಾಗಿ ತರಗತಿ ನಡೆಯಿತು.
ಯುವವಾಗ್ಮಿ ಸಂದೀಪ್ ಶ್ರೀವತ್ಸ ರಾಮಾಯಣ ಕಾವ್ಯವು ನಮ್ಮ ಬದುಕಿಗೆ ಹೇಗೆ ಅನ್ವಯವಾಗುವುದು ಮತ್ತು ಅದರಿಂದ ಕಲಿತು ಮೈಗೂಡಿಸಬೇಕಾದ ಅಂಶಗಳು ಏನೆಲ್ಲ ಎಂಬ ವಿಚಾರಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದರು.ಮಕ್ಕಳು ಕಿರುತೆರೆಯ ಛೋಟಾ ಭೀಮ್ ನನ್ನು ಅನುಕರಿಸುವಂತೆ ಚಿತ್ರಿಸಲಾಗುತ್ತದೆ.ಅದೇ ರೀತಿ ನಾವು ಅವರ ಮನದಲ್ಲಿ ಶ್ರೀರಾಮನನ್ನು ಅನುಕರಿಸುವ ಚಿತ್ರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಕೃಷ್ಣ ಪ್ರಸಾದ್ ಮಾತನಾಡಿ ಓದುವುದು ಕಷ್ಟವಾದರೂ ಆಲಿಸುವುದರ ಮೂಲಕ ವಿಷಯಗಳನ್ನು ಮನನ ಮಾಡಬಹುದು.ಅಲ್ಲದೆ ನಮ್ಮ ಮಕ್ಕಳು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ನಾವು ಕಲಿಸಿಕೊಡಬೇಕು ಎಂದರು. ಟ್ರಸ್ಟ್ ನ ನಿದರ್ೇಶಕಿ ಸನ್ನಿಧಿ ಟಿ.ರೈ ಕಾರ್ಯಕ್ರಮ ನಿರ್ವಹಿಸಿದರು.ಸಾಹಿತಿ ರಾಜಶ್ರೀ ಟಿ. ರೈ, ಉದ್ಯಮಿ ತಾರಾನಾಥ ರೈ ಮತ್ತು ಮಕ್ಕಳು, ಪೋಷಕರು ಉಪಸ್ಥಿತದ್ದರು.