HEALTH TIPS

No title

             ಏತಡ್ಕ ಗ್ರಂಥಾಲಯ : ವಾಚನ ಪಕ್ಷಾಚರಣೆ ಸಮಾರೋಪ
    ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯವು ಆಚರಿಸಿಕೊಂಡು ಬಂದ ವಾಚನ ಪಕ್ಷದ ಸಮಾರೋಪ ಸಮಾರಂಭವು ಸಮಾಜ ಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಏತಡ್ಕ ಶಾಲಾ ಅಧ್ಯಾಪಿಕೆ ಸರೋಜಾ ಎನ್.ಕೆ. ಓದುವಿಕೆಯ ಪ್ರಯೋಜನಗಳನ್ನು ವಿವರಿಸಿದರು. ವ್ಯಕ್ತಿತ್ವ, ಜ್ಞಾನದ ಅಭಿವೃದ್ಧಿ, ಪ್ರಪಂಚದ ಅರಿವು, ಮನೋರಂಜನೆ ಓದುವುದರಿಂದ ಸಿಗುತ್ತದೆ ಎಂದರು. ಕಾದಂಬರಿಕಾರ ಫ್ರಾನ್ಸಿಸ್ ಬೇಕನ್ ಹೇಳಿದ `ಕೆಲವು ಪುಸ್ತಕಗಳನ್ನು ಸವಿಯಬಹುದು, ಕೆಲವನ್ನು ನುಂಗಬಹುದು, ಕೆಲವನ್ನು ಜಗಿದು ಜೀಣರ್ಿಸಿಕೊಳ್ಳಬಹುದು' ಎಂಬ ಮಾತನ್ನು ಉದ್ಧರಿಸಿದರು. ಗ್ರಂಥಾಲಯಗಳ ಅಭಿವೃದ್ಧಿಯಲ್ಲಿ ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್ನ ಕಾರ್ಯದಶರ್ಿಯಾಗಿದ್ದ ಐ.ವಿ.ದಾಸ್ ಅವರ ಕೊಡುಗೆಯನ್ನು ಸ್ಮರಿಸಿ ಅವರು ಮಾತನಾಡಿದರು.
    ಗ್ರಂಥಾಲಯಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದರ ಕುರಿತು ಡಾ.ವೇಣುಗೋಪಾಲ್ ಕಳೆಯತ್ತೋಡಿ ಮತ್ತು ಕೆ.ನರಸಿಂಹ ಭಟ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೈ.ಎಸ್.ಕೇಶವ ಶರ್ಮ ಅವರು ಮಾತನಾಡಿ ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ಓದಲು ಮೀಸಲಿಡಬೇಕೆಂದು ಕರೆ ನೀಡಿದರು. ತಾವು ನೋಡಿದ ದೇಶ, ವಿದೇಶಗಳ ಕೆಲವು ಗ್ರಂಥಾಲಯಗಳ ಕುರಿತು ಮಾಹಿತಿ ನೀಡಿದರು. ವೈ.ಕೆ.ಗಣಪತಿ ಸ್ವಾಗತಿಸಿ, ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು.
   ಇದೇ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳು ಮತ್ತು ಹಿರಿಯರು ಭೇಟಿ ಕೊಟ್ಟು ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries