HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕನ್ನಡ ಗಝಲ
                       ಕವಯಿತ್ರಿ ಚೇತನಾ ಕುಂಬಳೆ:
ಬೆಳಕ ಸ್ಪರ್ಶಕ್ಕರಳುವ ಹೂಗಳ ಸೌಂದರ್ಯವ ಬಣ್ಣಿಸಲಿ ಹೇಗೆ?
ಹೂವ ಸವಿಗೆ ಮನಸೋತ ಚಿಟ್ಟೆಯಂದವ ಬಣ್ಣಿಸಲಿ ಹೇಗೆ?
    ಮಳೆ ಸುರಿಯೆ ಗರಿಬಿಚ್ಚಿ ಕುಣಿವ ನವಿಲ ನೃತ್ಯವ ಬಣ್ಣಿಸಲಿ ಹೇಗೆ?
    ಶಿಖರದ ಹಣೆಗೆ ಸಿಹಿಮುತ್ತನಿಡುವ ಮುಗಿಲ ಚೆಲುವ ಬಣ್ಣಿಸಲಿ ಹೇಗೆ?
ಹಸಿರು ಸೀರೆಯುಟ್ಟು ನಗುತ ನಿಂತ ಪ್ರಕೃತಿಯ ಮೊಗವ ಬಣ್ಣಿಸಲಿ ಹೇಗೆ?
ಮೇಘಗಳೊಂದಿಗೆ ರೆಕ್ಕೆ ಬಿಚ್ಚಿದ ಹಕ್ಕಿಗಳೊಡನಾಟವ ಬಣ್ಣಿಸಲಿ ಹೇಗೆ?
    ಮುಂಜಾನೆ ರಂಗು ಚೆಲ್ಲಿದ ಮೂಡಣವ ಬಣ್ಣಿಸಲಿ ಹೇಗೆ?
    ಜೀವಜಾಲಗಳಿಗೆ ಚೈತನ್ಯ ನೀಡುವ ರವಿಯ ಒಲವ ಬಣ್ಣಿಸಲಿ ಹೇಗೆ?
ಇರಳ ಆಗಸದಲ್ಲಿನಲಿವ ಶಶಿತಾರೆಯರ ಸ್ನೇಹವ ಬಣ್ಣಿಸಲಿ ಹೇಗೆ?
ವನದ ಖಗ ಮೃಗಗಳ ನಡುವಣ ಪ್ರೀತಿಯ ಬಂಧವ ಬಣ್ಣಿಸಲಿ ಹೇಗೆ?
    ದಡಕ್ಕಪ್ಪಳಿಸುವ ಕಡಲಲೆಗಳ ವೈಭವವ ಬಣ್ಣಿಸಲಿ ಹೇಗೆ?
    ಕಡಲ ಸೇರಲಿರುವ ನದಿಗಳ ತವಕವ ಬಣ್ಣಿಸಲಿ ಹೇಗೆ?

                 ಚೇತನಾ ಕುಂಬಳೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries