HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಆ.18 ರಂದು ವಿಧಾನಸೌಧದ ಮುಂಭಾಗ ಕಾಸರಗೋಡು ಕನ್ನಡಿಗರ ಧರಣಿ ಸತ್ಯಾಗ್ರಹ
     ಕಾಸರಗೋಡು: ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಾಂವಿಧಾನಿಕ ಹಕ್ಕಿನ ಉಲ್ಲಣಘನೆ ಸಹಿತ ವಿವಿಧ ಸಂಕಷ್ಟಗಳ ಬಗ್ಗೆ ಕನರ್ಾಟಕ ಸರಕಾರ ಕೇವಲ ಹೇಳಿಕೆಗಳ ಮೂಲಕ ಸಾಂತ್ವನ ಮಾಡುವುದನ್ನು ಕೈಬಿಟ್ಟು ಪ್ರತ್ಯಕ್ಷವಾಗಿ ಪ್ರತಿಕ್ರಿಯಿಸುವಂತ ತುತರ್ು ಕೆಲಸ ಆಗಬೇಕಾಗಿದೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಂಗಳೂರಿನ ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
    ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಒಂದರಿಂದ ಹತ್ತನೇ ತರಗತಿ ತನಕ ಕನ್ನಡ ವಿದ್ಯಾಥರ್ಿಗಳು ಮಲಯಾಳ ಕಡ್ಡಾಯ ಕಲಿಯಬೇಕೆಂಬ ನೀತಿಯನ್ನು ಪ್ರತಿಭಟಿಸಿ ಹಾಗೂ ಕನ್ನಡಿಗರ ಇನ್ನಿತರ ಸವಲತ್ತುಗಳನ್ನು ಕೇರಳ ಸರಕಾರ ಕಸಿದು ಕೊಳ್ಳುವುದನ್ನು ವಿರೋಧಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕನರ್ಾಟಕದ ಕನ್ನಡಿಗರ ಬೆಂಬಲ ಪಡೆಯಲು ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ನಾಗರಾಜ್ ಮಾಹಿತಿ ನೀಡಿದರು.
    ಈ ಕುರಿತು ಕನರ್ಾಟಕ ಸಚಿವರು, ಸಂಸದರು, ಶಾಸಕರು ಯಾವುದೇ ಮುತುವಜರ್ಿ ವಹಿಸದಿರುವುದು ಖೇದಕರವಾಗಿದೆ. ಶೀಘ್ರದಲ್ಲಿಯೇ ಕೇರಳ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ಮನವರಿಕೆ ಮಾಡಲು ಕನರ್ಾಟಕದಿಂದ ಸರ್ವಪಕ್ಷ ನಿಯೋಗ ಹೋಗಬೇಕೆಂದು ಅವರು ಒತ್ತಾಯಿಸಿದರು.
    ಈ ಬಗ್ಗೆ ಆ. 18 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸತ್ಯಾಗ್ರಹ ನಡೆಸಲು ತೀಮರ್ಾನಿಸಲಾಗಿದೆ ಎಂದರು. ಕಾಸರಗೋಡು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಕಾಸರಗೋಡು ಕನ್ನಡಿಗರು ಮತ್ತು ಕನ್ನಡ ಮುಖಂಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರಗಲಿದೆ.
     ವಾಟಾಳ್ ನಾಗರಾಜ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡ ಸೇನೆಯ ಮುಖಂಡ ರವಿ ಕುಮಾರ್ ಬೆಂಗಳೂರು, ಕನ್ನಡ ಹೋರಾಟ ಸಮಿತಿಯ ಮುಖಂಡರಾದ ಭಾಸ್ಕರ ಕಾಸರಗೋಡು, ಮಹಾಲಿಂಗೇಶ್ವರ ಭಟ್, ಶಿವರಾಮ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ಕಾಸರಗೋಡು, ಶ್ರೀಕಾಂತ್ ಕಾಸರಗೋಡು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries