HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕಿಳಿಂಗಾರಿನಲ್ಲಿ ಟಿ.ಶ್ಯಾಂಭಟ್ಟರಿಗೆ ಸ್ವರ್ಣಮುದ್ರಿತ ರುದ್ರಾಕ್ಷಿ ಹಾರದ ಸನ್ಮಾನ
     ಬದಿಯಡ್ಕ:  ಮನುಷ್ಯ ಎಷ್ಟೇ ದೊಡ್ಡ ಹುದ್ದೆ, ಪದವಿಗೇರಿದರೂ ಜೀವನದ ಮೌಲ್ಯ ಕಾಪಾಡಿಕೊಂಡು ಬದುಕಿನಲ್ಲಿ ಸದಾಚಾರಯುತ ಸಂಸ್ಕಾರಗಳನ್ನು ಪಾಲಿಸದಿದ್ದರೆ ದೊಡ್ಡವನೆನಿಸಿಕೊಳ್ಳುವುದಿಲ್ಲ. ದೊಡ್ಡವರಾಗುವುದು ಸಂಪತ್ತಿನ ಕ್ರೋಢೀಕರಣದಿಂದಲ್ಲ, ಬದಲು ಮಾನವೀಯ ಸನ್ನಡತೆಗಳ ಸಂಸ್ಕಾರದಿಂದಲೂ ಆಗಬೇಕು. ವೇದ-ವೈದಿಕತನ, ಕಲೆ-ಸಂಸ್ಕೃತಿ ಮತ್ತು ಧಾಮರ್ಿಕ, ಶಿಕ್ಷಣ ಕ್ಷೇತ್ರಕ್ಕೆ ದಾನ-ಧರ್ಮಗಳಿಂದ ಅತ್ಯಪಾರ ಕೊಡುಗೆ ಇತ್ತಿರುವ ಕನರ್ಾಟಕ ಲೋಕಸೇವಾ ಆಯೋಗದ ಆಯುಕ್ತರಾದ ಟಿ.ಶ್ಯಾಂ ಭಟ್ ಅವರು ಎಷ್ಟೇ ಎತ್ತರಕ್ಕೇರಿದರೂ ತನ್ನ ಸನಾತನ ಸಂಸ್ಕೃತಿಯನ್ನು ಪರಿಪೋಷಿಸಿತ್ತಾ ಬಂದು ಆದರ್ಶ ವ್ಯಕ್ತಿಯಾಗಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸುವುದೆಂದರೆ ವ್ಯಕ್ತಿತ್ವಕ್ಕೆ ನೀಡುವ ಮನ್ನಣೆ ಎಂದು ಶ್ರೀಮದ್ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನುಡಿದರು.
    ಕಿಳಿಂಗಾರು ನಡುಮನೆ ವೇ.ಮೂ.ಸುಬ್ರಾಯ ಭಟ್ಟರ ಪ್ರಥಮಾಬ್ದಿಕ ಶ್ರಾದ್ಧದ ಅಂಗವಾಗಿ ಕಿಳಿಂಗಾರು ನಡುಮನೆಯಲ್ಲಿ ನಡೆದ  ಸನ್ಮಾನ ಸಮಾರಂಭ ಮತ್ತು ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತು ಮಾತನಾಡಿದರು.
   ಸಮಾರಂಭದಲ್ಲಿ  ಹವ್ಯಕ ಸಮಾಜದ ಮಂಗಳೂರು ಹೋಬಳಿಯ ಪ್ರತೀಕವಾಗಿ  ಕನರ್ಾಟಕ ಲೋಕಸೇವಾ ಆಯುಕ್ತ ಡಾ. ಟಿ.ಶ್ಯಾಂ ಭಟ್ ಅವರನ್ನು ಕಿಳಿಂಗಾರು ನಡುಮನೆಯ ಪರವಾಗಿ ಸ್ವರ್ಣಮುದ್ರಿತ 58 ರುದ್ರಾಕ್ಷಿಯ ಹಾರ ತೊಡಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾಸರಗೋಡು ವಿದ್ಯುನ್ಮಂಡಳಿ ಅಭಿಯಂತರ ನಾಗರಾಜ ಭಟ್ ಅವರನ್ನು ಸನ್ಮಾನಿಸಲಾಯಿತು.
    ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಟಿ.ಶ್ಯಾಂ ಭಟ್ ಅವರು ಈ ಸನ್ಮಾನ ಹಿರಿಯರ ಮತ್ತು ವೈದಿಕ ವಿದ್ವಾಂಸರ ಆಶೀವರ್ಾದ. ದೈವಬಲ ಮತ್ತು ಗುರು ಹಿರಿಯರ ಆಶೀವರ್ಾದದಿಂದಲೇ ವೃತ್ತಿ ಜೀವನದಲ್ಲಿ ನಾನು ಗುರಿ ಸಾಧಿಸಿದ್ದೇನೆ. ವೈದಿಕರಿಗೆ ನನ್ನಿಂದ ಪ್ರಯೋಜನವಾಗಿದೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ವೈದಿಕ ಕ್ರಿಯೆಗಳನ್ನು ನಡೆಸುವ ಮೂಲಕ ನನ್ನ ಬದುಕಿಗೆ ಪ್ರಯೋಜನವಾಗಿದೆ. ವೃತ್ತಿ ಜೀವನದಲ್ಲಿ ನನ್ನ ಭಡ್ತಿಯ ಸಂದರ್ಭ ನನಗೆ ಸಾಕಷ್ಟು ಕಿರುಕುಳ, ಮಾನಸಿಕ ಸಂಘéರ್ಷ ಆಗಿದೆ. ನಾನು ವೃತ್ತಿ ಜೀವನದ ಯಾವೊಂದು ಪ್ರಕರಣಗಳಲ್ಲೂ ಸಿಲುಕಿಕೊಂಡವನಲ್ಲ. ಆದರೂ ದುರುದ್ದೇಶಪೂರಿತವಾಗಿ ಷಡ್ಯಂತ್ರ ಹೂಡಿ ನನ್ನ ವಿರುದ್ಧ ಆರೋಪ ಹೊರಿಸಲಾಗಿತ್ತು. ವಿನಾ ಕಾರಣ ಪ್ರಚಾರಗಳು ನಡೆಯಿತು. ಆದರೆ ದೇವರ ಕೃಪೆ, ಗುರು-ಹಿರಿಯರ ಆಶೀವರ್ಾದದಿಂದ ನನಗೆ ಭಡ್ತಿ ದೊರೆಯಿತು ಎಂದು ಟಿ.ಶ್ಯಾಂ ಭಟ್ ನುಡಿದರು.
    ಶ್ರೀ ಕ್ಷೇತ್ರ ಕೊಲ್ಲೂರಿನ ಅರ್ಚಕ ಬ್ರಹ್ಮಶ್ರೀ ನರಸಿಂಹ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಹಿರಿಯ ವೈದ್ಯ, ಸಾಹಿತಿ ರಮಾನಂದ ಬನಾರಿ ಟಿ.ಶ್ಯಾಂ ಭಟ್ಟರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ನಾಗರಾಜ ಭಟ್ಟರ ಅಭಿನಂದನಾ ಭಾಷಣ ಮಾಡಿದ ಅರ್ಥದಾರಿ ವಾಸುದೇವ ರಂಗಾಭಟ್ಟ ಮಧೂರು ಸನ್ಮಾನಪತ್ರ ವಾಚಿಸಿದರು. ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ಟರು ಸಹಿತ ಹಿರಿಯ ವೇದಾಂತಿಗಳು ಉಪಸ್ಥಿತರಿದ್ದರು. ಕುಂಬಳೆ ಸೀಮೆಯ ಪ್ರಮುಖ ವೈದಿಕ ಮನೆತನವಾದ ಕಿಳಿಂಗಾರು ನಡುಮನೆಯ ನೂರಾರು ಶಿಷ್ಯರು ಸಮಾರಂಭದಲ್ಲಿ ಪಾಲ್ಗೊಂಡು ಮಂತ್ರಾಕ್ಷತೆ ಪಡೆದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries