ಕೂಟ ಮಹಾಜಗತ್ತು ಅಂಗ ಸಂಸ್ಥೆಯ ಸಭೆ
ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ಆಧ್ಯಾತ್ಮಿಕ ಪೂರ್ಣತೆಯನ್ನು ಪಡೆಯಲು ಸಾಧ್ಯ
ಕುಂಬಳೆ: ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ಭೌತಿಕ ಪ್ರಗತಿ ಹಾಗೂ ಆಧ್ಯಾತ್ಮಿಕ ಪೂರ್ಣತೆಯನ್ನು ಪಡೆಯಲು ಸಾಧ್ಯ ಎಂದು ಪುರೋಹಿತರತ್ನ ಹರಿನಾರಾಯಣ ಮಯ್ಯ ಕುಂಬಳೆ ಅಭಿಪ್ರಾಯಪಟ್ಟರು.
ಕುಂಬಳೆಯಲ್ಲಿ ಇತ್ತೀಚೆಗೆ ಜರಗಿದ ಕೂಟ ಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ಸಂಪರ್ಕ ಸಭೆಯಲ್ಲಿ ಅವರು ಧಾಮರ್ಿಕ ಭಾಷಣಗೈದು ಮಾತನಾಡಿದರು.
ಅಂಗ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ಪುರೋಹಿತ ರತ್ನರಾದ ಮಾಧವ ಅಡಿಗ ಕುಂಬಳೆ, ಗಣೇಶ್ ನಾವಡ, ಜಯರಾಮ ಅಡಿಗ ಕುಂಬಳೆ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿ ಮಾತನಾಡಿದರು. ಅಂಗಸಂಸ್ಥೆಯ 150 ನೇ ಸಂಪರ್ಕ ಸಭೆಯನ್ನು ಡಿಸೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲು ಉದ್ದೇಶಿಸಲಾಗಿದ್ದು, ಇದರ ಯಶಸ್ವಿಗೆ ಸಹಕರಿಸುವಂತೆ ಅಂಗಸಂಸ್ಥೆಯ ಪ್ರಧಾನ ಕಾರ್ಯದಶರ್ಿ ನರಸಿಂಹ ಮಯ್ಯ ಮಧೂರು ಅವರು ಕರೆಯಿತ್ತರು.
ಈ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗು ಭಜನಾ ಸಂಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಸಾಲಿನ ಬಿ.ಎ.(ಕನ್ನಡ)ದಲ್ಲಿ ಪ್ರಥಮ ರ್ಯಾಂಕ್ಗಳಿಸಿದ ಸಮಾಜದ ಸುನೀತಾ ಬಿ. ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮುಂದಿನ ಸಂಪರ್ಕ ಸಭೆಯನ್ನು ಆ.12 ರಂದು ಅಪರಾಹ್ನ 3.15 ರಿಂದ ಕುಂಬಳೆಯ ಕೇಶವ ಅಡಿಗ ಅವರ ಮನೆಯಲ್ಲಿ ಜರಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕರೆ ನೀಡಲಾಯಿತು. ಇತ್ತೀಚೆಗೆ ನಿಧನರಾದ ಶಿರಿಬಾಗಿಲಿನ ಸುಮ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ವೆಂಕಟ್ರಮಣ ಮಯ್ಯ ಸ್ವಾಗತಿಸಿ, ಕೃಷ್ಣ ಕಾರಂತ ಮಾಸ್ತರ್ ವಂದಿಸಿದರು.