ಕನ್ನಡ ಗಝಲ್
ಕವಯಿತ್ರಿ: ಚೇತನಾ ಕುಂಬಳೆ:
ಮನವು ನಲಿಯುವುದು ನೀನಿರೆ ಸನಿಹ
ಮೌನವೂ ಮಾತನಾಡುವುದು ನೀನಿರೆ ಸನಿಹ
ಕಣ್ಗಳು ಸಂಧಿಸಿದಾಗಲೆಲ್ಲ ಒಳಗೊಳಗೆ ತಲ್ಲಣ
ಎದೆಬಡಿತವೂ ಏರುಪೇರಾಗುವುದು ನೀನಿರೆ ಸನಿಹ
ಚಂದಿರನಾಗಮನಕ್ಕೆ ಸುತ್ತೆಲ್ಲ ಬೆಳದಿಂಗಳು
ಕತ್ತಲು ಸರಿದು ಬೆಳಕಾಗುವುದು ನೀನಿರೆ ಸನಿಹ
ನಿನ್ನ ಪಿಸುಮಾತುಗಳಿಗೆ ಕೆನ್ನೆ ರಂಗೇರತ್ತದೆ
ಮೊಗದ ತುಂಬ ಲಜ್ಜೆ ಮೂಡುವುದು ಸನಿಹ ನೀನಿರೆ
ಜೊತೆಗಿಟ್ಟ ಹೆಜ್ಜೆಗಳಿಗೂ ಹೇಳಲಾಗದ ಖುಷಿ
ತನು ಮನ ಅರಳುತಿರಲಿ ಸನಿಹ ನೀನಿರೆ
ಚೇತನಾ ಕುಂಬಳೆ
ಕವಯಿತ್ರಿ: ಚೇತನಾ ಕುಂಬಳೆ:
ಮನವು ನಲಿಯುವುದು ನೀನಿರೆ ಸನಿಹ
ಮೌನವೂ ಮಾತನಾಡುವುದು ನೀನಿರೆ ಸನಿಹ
ಕಣ್ಗಳು ಸಂಧಿಸಿದಾಗಲೆಲ್ಲ ಒಳಗೊಳಗೆ ತಲ್ಲಣ
ಎದೆಬಡಿತವೂ ಏರುಪೇರಾಗುವುದು ನೀನಿರೆ ಸನಿಹ
ಚಂದಿರನಾಗಮನಕ್ಕೆ ಸುತ್ತೆಲ್ಲ ಬೆಳದಿಂಗಳು
ಕತ್ತಲು ಸರಿದು ಬೆಳಕಾಗುವುದು ನೀನಿರೆ ಸನಿಹ
ನಿನ್ನ ಪಿಸುಮಾತುಗಳಿಗೆ ಕೆನ್ನೆ ರಂಗೇರತ್ತದೆ
ಮೊಗದ ತುಂಬ ಲಜ್ಜೆ ಮೂಡುವುದು ಸನಿಹ ನೀನಿರೆ
ಜೊತೆಗಿಟ್ಟ ಹೆಜ್ಜೆಗಳಿಗೂ ಹೇಳಲಾಗದ ಖುಷಿ
ತನು ಮನ ಅರಳುತಿರಲಿ ಸನಿಹ ನೀನಿರೆ
ಚೇತನಾ ಕುಂಬಳೆ