ಮಹತ್ವದ ಸಂಶೋಧನೆ: ಮಂಗಳ ಗ್ರಹದಲ್ಲಿ ನೀರು ಪತ್ತೆ!
ತಂಪಾ: ಮಂಗಳ ಗ್ರಹದಲ್ಲಿ ಜೀವ ಸಂಕುಲದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಖಗೋಳಶಾಸ್ತ್ರಜ್ಞರಿಗೆ ಮಹತ್ವದ ಅಂಶವೊಂದು ಪತ್ತೆಯಾಗಿದೆ.
ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರು ಹೇಳುವ ಪ್ರಕಾರ ಮಂಗಳ ಗ್ರಹದಲ್ಲಿ ಸುಮಾರು 20 ಕಿ.ಮೀ ನಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ನೀರಿನ ಸರೋವರ ಪತ್ತೆಯಾಗಿದ್ದು, ಇನ್ನೂ ಹೆಚ್ಚಿನ ನೀರು ಹಾಗೂ ಜೀವ ಸಂಕುಲ ಇರುವ ಸಾಧ್ಯತೆಯನ್ನು ಪುಷ್ಟೀಕರಿಸಿದೆ.
ಮಂಗಳ ಗ್ರಹದ ಮಂಜುಗಡ್ಡೆಯ ಅಡಿಯಲ್ಲಿ ಸುಮಾರು 12 ಮೈಲಿ(20 ಕಿಮೀ) ನಷ್ಟು ವ್ಯಾಪ್ತಿಯಲ್ಲಿ ನೀರಿನ ಸರೋವರ ಹರಡಿಕೊಂಡಿರುವುದನ್ನು ಇಟಾಲಿಯ ಸಂಶೋಧಕರು ಅಮೆರಿಕ ವಿಜ್ಞಾನ ಜರ್ನಲ್ ನಲ್ಲಿ ಪ್ರಕಟಿಸಿದ್ದು, ಕೆಂಪು ಗ್ರಹದಲ್ಲಿ ಈ ವರೆಗೂ ಕಂಡುಬಂದಿರುವ ಅತಿ ದೊಡ್ಡ ಸರೋವರವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಬಾರಿ ಪತ್ತೆಯಾಗಿರುವ ಅಂಶಗಳು ಬೆರಗು ಮೂಡಿಸುವಂಥದ್ದಾಗಿದ್ದು, ಈ ಹಿಂದೆಂದೂ ಇಂತಹ ಸಂಶೋಧನಾ ಫಲಿತಾಂಶ ಕಂಡುಬಂದಿರಲಿಲ್ಲ ಎಂದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರೊಫೆಸರ್ ಅಲನ್ ಡಫ್ಫಿ ಹೇಳಿದ್ದಾರೆ. ಮಂಗಳ ಗ್ರಹ ಕನಿಷ್ಠ 3.6 ಬಿಲಿಯನ್ ವರ್ಷಗಳ ಹಿಂದೆ ಹಲವು ಸರೋವರಗಳನ್ನು ಹೊಂದಿತ್ತು. ಈಗ ಶೀಥಲ ವಾತಾವರಣ ಹೊಂದಿದ್ದು ಈ ಹಿಂದೆ ಬೆಚ್ಚಗಿನ ಹಾಗೂ ಒದ್ದೆಯ ವಾತಾವರಣ ಹೊಂದಿತ್ತು. ಆದರೆ ಈಗ ಪತ್ತೆಯಾಗಿರುವ ನೀರನ್ನು ಕುಡಿಯುವುದಕ್ಕೆ ಸಾಧ್ಯವಿಲ್ಲ, ಮಂಜುಗಡ್ಡೆ ಮುಚ್ಚಿರುವ ವಾತಾವರಣದಿಂದ ಸುಮಾರು 1.5 ಕಿ.ಮೀ ನಷ್ಟು ಆಳದಲ್ಲಿ ನೀರು ಪತ್ತೆಯಾಗಿದ್ದು ಅದರಲ್ಲಿ ಸೂಕ್ಷ್ಮಜೀವಿಯ ರೂಪಗಳು ಇವೆಯೋ ಇಲ್ಲವೋ ಎಂಬುದೂ ಸಹ ಚಚರ್ೆಯ ವಿಷಯ ಎನ್ನುತ್ತಿದ್ದಾರೆ ವಿಜ್ಞಾನಿಗಳು.