ಕೊಂಡೆವೂರಿನ "ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ"ಯ ಕಾರ್ಯಕ್ರಮ
"ಅಂಬಾರು ಶ್ರೀ ಸದಾಶಿವ ದೇವಸ್ಥಾನ"ದಲ್ಲಿ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ವರ್ಷ ನಡೆಯಲಿರುವ "ವಿಶ್ವಜಿತ್ ಅತಿರಾತ್ರ ಸೋಮಯಾಗ"ದ ಪೂರ್ವಭಾವಿಯಾಗಿ "ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ"ಯ ಆ ಕಾರ್ಯಕ್ರಮವು "ಅಂಬಾರು ಶ್ರೀ ಸದಾಶಿವ ದೇವಸ್ಥಾನ"ದಲ್ಲಿ ಸೋಮವಾರ ನಡೆಯಿತು.
ಪೂರ್ಣಕುಂಭದೊಡನೆ , ಚೆಂಡೆ, ಜಾಗಟೆ ವಾದನ ಸಹಿತ ಗ್ರಾಮಸ್ಥರು ರಥವನ್ನು ಸ್ವಾಗತಿಸಿದರು. ಮೊದಲಿಗೆ ಭಜನೆ, ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ನಂತರ ನಡೆದ ಸತ್ಸಂಗದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಮುಂದಿನ ಫೆಬ್ರವರಿ 18 ರಿಂದ 24 ರ ವರೆಗೆ ನಡೆಯುವ "ವಿಶ್ವಜಿತ್ ಅತಿರಾತ್ರ ಸೋಮಯಾಗ"ದ ವಿಶೇಷತೆಗಳನ್ನು ವಿವರಿಸಿದರು. ವಿಷ್ಣುಸಹಸ್ರನಾಮ ಅಭಿಯಾನದ ಜೊತೆ ಸಹಸ್ರವೃಕ್ಷ ಸಮೃದ್ಧಿಯ ಅಂಗವಾಗಿ ನೆಲ್ಲಿಗಿಡ ವಿತರಣೆ ಈಗಾಗಲೇ ನಡೆಯುತ್ತಿದ್ದು, ಇನ್ನೂ ಅನೇಕ ಕಾರ್ಯಕ್ರಮದ ಯೋಜನೆಯನ್ನು ಯಾಗ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ ಮತ್ತು ಧಾಮರ್ಿಕ, ಸಾಮಾಜಿಕ ಮುಂದಾಳು ಡಾ.ಶ್ರೀಧರ ಭಟ್ ಉಪ್ಪಳ ಉಪಸ್ಥಿತರಿದ್ದರು. ವಿಷ್ಣುಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಸ್ವಾಗತಿಸಿ ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಜೀಣರ್ೋದ್ಧಾರ ಸಮಿತಿ ಪ್ರಧಾನ ಕಾರ್ಯದಶರ್ಿ ಆನಂದ ಬಿ ಚೆರುಗೋಳಿ ವಂದಿಸಿದರು.
ಜುಲೈ 13 ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ "ಐಲ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ" ಮತ್ತು 14 ರಂದು ಶನಿವಾರ ಬೆಳಿಗ್ಗೆ 10.ಕ್ಕೆ ಶಿರಿಯದ "ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ"ಗಳಿಗೆ "ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ" ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದರು.