HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಎಣ್ಮಕಜೆ ಗ್ರಾ.ಪಂ. ಕಾರ್ಯದಶರ್ಿ,ಸಿಬ್ಬಂದಿಗೆ ಬೀಳ್ಕೊಡುಗೆ
    ಪೆರ್ಲ: ಎಣ್ಮಕಜೆ ಗ್ರಾ.ಪಂ. ಕಾರ್ಯದಶರ್ಿ ರೆಜಿಮೋನ್ ಪಿ.ಪಿ  ಹಾಗೂ ಲೆಕ್ಕಿಗ ಶೈಜು ಅವರಿಗೆ ವಗರ್ಾವಣೆ ಆದೇಶ ಲಭಿಸಿದ್ದು, ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರ ವಿದಾಯ ಕೂಟವನ್ನು ಶುಕ್ರವಾರ ಏರ್ಪಡಿಸಲಾಯಿತು.
   ಗ್ರಾಮ  ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಅಧ್ಯಕ್ಷತೆ ವಹಿಸಿದರು. ಕಳೆದೊಂದು ವರ್ಷದಿಂದ ಕಾರ್ಯದಶರ್ಿಯಾಗಿ ಸೇವೆ ಸಲ್ಲಿಸಿದ ರೆಜಿಮೋನ್ ಹಾಗೂ 5 ತಿಂಗಳಿನಿಂದ ಲೆಕ್ಕಿಗನಾಗಿ ಸೇವೆ ಸಲ್ಲಿಸುತ್ತಿರುವ ಶೈಶು ಅವರ ಸೇವೆಯನ್ನು ಶ್ಲಾಘಿಸಿದರು.ಪಂಚಾಯಿತಿ ಕಾಯರ್ಾಲಯದಲ್ಲಿ ಉದ್ಯೋಗಸ್ಥರ ಸ್ಥಾನಗಳೆಲ್ಲ ಭತರ್ಿಯಾಗಿದ್ದು ಸಮಯ ಸಂಬಂಧಿತವಾಗಿ ಜನರಿಗೆ ಸೇವೆ ನೀಡಲು ಸಾಧ್ಯವಾಗಿದೆ.ಇನ್ನು ಮುಂದೆ ಪ್ರಮುಖವಾದ ಹುದ್ದೆಗಳು ಭತರ್ಿಯಾಗದೆ ಜನ ಸಾಮಾನ್ಯರ ಅಗತ್ಯಗಳನ್ನು ಪೂರೈಸಲು ಹಾಗೂ ಯೋಜನೆಗಳನ್ನು ಸಮಯಾಧಾರಿತವಾಗಿ ಅನುಷ್ಠಾನಗೊಳಿಸಲು ಅಸಾಧ್ಯವಾದ ಸ್ಥಿತಿ ನಿಮರ್ಾಣವಾಗಿದೆ.ಈ ವಿಷಯವನ್ನು ಸರಕಾರದ ಗಮನಕ್ಕೆ ತಂದಿದ್ದು ಪರಿಹರಿಸಲಾಗದಿದ್ದರೆ ಜನ ಪ್ರತಿನಿಧಿಗಳ ಒಗ್ಗಟ್ಟಾದ ಹೋರಾಟ ಅನಿವಾರ್ಯವಾಗಿದೆ ಎಂದರು.
   ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಉದಯ ಚೆಟ್ಟಿಯಾರ್ ಬಜಕೂಡ್ಲು, ಆಯಿಷಾ ಎ.ಎ., ಸದಸ್ಯರಾದ ಸಿದ್ದಿಕ್ ಒಳಮೊಗೇರು, ಹನೀಫ್ ನಡುಬೈಲ್ ಮತ್ತಿತರರು ಶುಭ ಹಾರೈಸಿದರು. ಜನ ಪ್ರತಿನಿಧಿಗಳು, ಸಿಬ್ಬಂದಿಗಳು, ಉಪಸ್ಥಿತರಿದ್ದರು. ರೆಜಿಮೋನ್, ಶೈಜು ಅವರಿಗೆ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.ಹಿರಿಯ ಗುಮಾಸ್ತ ಸಮೀರ್ ಖಾನ್ ಸ್ವಾಗತಿಸಿ, ತಾಂತ್ರಿಕ ಸಹಾಯಕ ಸಫಾನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries