ಏಮ್ಸ್ ಆಸ್ಪತ್ರೆ ಜಿಲ್ಲೆಗೇ ಬೇಕು : ಎಂಡೋ ಒಕ್ಕೂಟ
ಕಾಸರಗೋಡು: ಕೇಂದ್ರ ಸರಕಾರವು ಕೇರಳಕ್ಕೆ ಮಂಜೂರುಗೊಳಿಸಿದ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲೇ ಸ್ಥಾಪಿಸಬೇಕೆಂದು ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಒತ್ತಾಯಿಸಿದೆ. ಏಮ್ಸ್ ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸುವ ಸಲುವಾಗಿ ಮಂದೆ ಕೈಗೊಳ್ಳಬೇಕಾದ ಬೃಹತ್ ಕಾರ್ಯಕ್ರಮಗಳ ಕುರಿತು ಚಚರ್ಿಸಲು ಒಕ್ಕೂಟದ ಆಶ್ರಯದಲ್ಲಿ ಜು.21ರಂದು ಬೆಳಗ್ಗೆ 10ರಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪವಿರುವ ಕಾಸರಗೋಡು ಕೋ- ಓಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಸಮಾವೇಶವನ್ನು ಕೂಡಂಕುಳಂ ಅಣು ವಿರೋಧಿ ನೇತಾರ ಎಸ್.ಪಿ.ಉದಯಕುಮಾರ್ ಉದ್ಘಾಟಿಸುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂಡೋಸಲ್ಫಾನ್ ದುರಂತ ಸೃಷ್ಟಿಸಿದ ಕಾಸರಗೋಡನ್ನು ಪ್ರತ್ಯೇಕವಾಗಿ ಪರಿಗಣಿಸಿ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸಬೇಕಾದುದು ಅತೀ ಅಗತ್ಯವಾಗಿದೆ. ಆದುದರಿಂದ ಪ್ರಸ್ತುತ ಕಾರ್ಯಕ್ರಮದಲ್ಲಿ ಎಂಡೋ ಸಂತ್ರಸ್ತರಲ್ಲದೆ ಎಲ್ಲ ವರ್ಗಗಳ ಜನರು ಪಾಲ್ಗೊಳ್ಳಬೇಕೆಂದು ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಮುನೀಸಾ ಅಂಬಲತ್ತರ, ಅಂಬಲತ್ತರ ಕುಂಞಿಕೃಷ್ಣನ್, ನಾರಾಯಣನ್ ಪೆರಿಯ, ಕೆ.ಚಂದ್ರಾವತಿ, ಅರುಣಿ, ಶಾಂತಾ, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.