HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೇರಳ ಎತ್ತ ಸಾಗುತ್ತಿದೆ-ಸೀ ಪ್ಲೇನ್ ಯೋಜನೆಗೂ ಎಳ್ಳು ನೀರು
      ತಿರುವನಂತಪುರ: ಕೇರಳ ಪ್ರವಾಸದ್ಯೋಮ ಅಭಿವೃದ್ಧಿ ಯೋಜನೆ ಅಂಗವಾಗಿ ವಿದೇಶಿ ಪ್ರವಾಸಿಗರು ಹಾಗೂ ದೇಶೀಯ ಪ್ರವಾಸಿಗರನ್ನು ಆಕಷರ್ಿಸುವ ಸಲುವಾಗಿ ರೂಪಿಸಿದ್ದ ಜಲ ವಿಮಾನ (ಸೀ ಪ್ಲೇನ್) ಯೋಜನೆಯನ್ನು ಕೇರಳ ರಾಜ್ಯ ಸರಕಾರ ಕೈ ಬಿಟ್ಟಿದೆ.
   ಸುಮಾರು 15 ಕೋಟಿ ರೂ.ನಷ್ಟು ವೆಚ್ಚ ಮಾಡಿದ ಜಲ ವಿಮಾನ ಯೋಜನೆ ಯನ್ನು ಕೈಬಿಡಲಾಗಿದ್ದು, ಖರೀದಿಸಿದ ಉಪಕರಣಗಳನ್ನು ಹಲವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ನೀಡಲು ಸರಕಾರ ಆದೇಶ ಹೊರಡಿಸಿದೆ.
   ಮೀನುಗಾರರ ವಿರೋಧವೇ ಯೋಜನೆ ಕೈ ಬಿಡುವುದಕ್ಕೆ ಪ್ರಧಾನ ಕಾರಣ ಎಂದು ಮೂಲಗಳು ತಿಳಿಸುತ್ತಿವೆ. ಹಿಂದಿನ ಯುಡಿಎಫ್ ಸರಕಾರ ಜಲ ವಿಮಾನ ಯೋಜನೆ ಆರಂಭಿಸಿತ್ತು. ಅಷ್ಟಮುಡಿ, ಪುನ್ನಮಡ, ಬೇಕಲ, ಕೊಚ್ಚಿ, ಕುಮಾರಗಂ ಮತ್ತಿತರ ಕಡೆಗಳಲ್ಲಿ ಜಲ ವಿಮಾನ ನಿಲ್ದಾಣ ನಿಮರ್ಿಸುವ ಸಲುವಾಗಿ ಸುಮಾರು ಆರು ಕೋಟಿ ರೂ. ಮೊತ್ತದ ಉಪಕರಣಗಳನ್ನು ಖರೀದಿಸಲಾಗಿತ್ತು. ಇವೆಲ್ಲವನ್ನು ಹಲವು ಸಾರ್ವಜನಿಕ ಸಂಸ್ಥೆಗಳಿಗೆ ವಿತರಿಸಲು ಸರಕಾರ ತೀಮರ್ಾನಿಸಿದೆ. ಯೋಜನೆ ಅನಿಶ್ಚಿತವಾದ ಹಿನ್ನೆಲೆಯಲ್ಲಿ ಪ್ರತಿ ಕೇಂದ್ರವನ್ನು ಪೊಲೀಸ್ ಸಂರಕ್ಷಣೆಯಲ್ಲಿರಿಸಲಾಗಿದ್ದು, ಇದಕ್ಕಾಗಿ ಪ್ರತಿ ವರ್ಷ ಒಂದೂವರೆ ಕೋಟಿ ರೂ. ವೆಚ್ಚ ತಗಲುತ್ತಿದೆ. ಇದರ ಬದಲು ಇವುಗಳನ್ನು ಸರಕಾರಿ ಸಂಸ್ಥೆಗಳಿಗೆ ನೀಡಲು ತೀಮರ್ಾನ ಕೈಗೊಳ್ಳಲಾಗಿದೆ.
   ಸ್ಪೀಡ್ ಬೋಟ್ಗಳನ್ನು ಕೆಟಿಡಿಸಿಗೂ, ಟಿಡಿಪಿಸಿಗೂ ನೀಡಲಾಗಿದೆ. ಬ್ಯಾಗೇಜ್ ಸ್ಕ್ಯಾನರ್, ಎಕ್ಸ್ರೇ ಮೆಷಿನ್, ಸಿಸಿಟಿವಿಗಳು, ಫ್ಲೋಟಿಂಗ್ ಜೆಟ್ಟಿ ಮೊದಲಾದುವುಗಳನ್ನು ವಿವಿಧ ಸ್ವಾಯತ್ತ ಸಂಸ್ಥೆಗಳಿಗೆ ನೀಡಲು ಉದ್ದೇಶಿಸಲಾಗಿತ್ತು. 
    ತಿರುವನಂತಪುರ-ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ವಿಮಾನ ಇಳಿಸುವ ಸಲುವಾಗಿ ಮಾಡಿಕೊಂಡ ಒಪ್ಪಂದವನ್ನು ಸರಕಾರ ರದ್ದುಗೊಳಿಸಿದೆ. ಸಾಕಷ್ಟು ಅಧ್ಯಯನ ನಡೆಸದೆ ಯುಡಿಎಫ್ ಸರಕಾರ ಯೋಜನೆ ಆರಂಭಿಸಿರುವುದರಿಂದ ಕೈ ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಈ ತನಕ ಯೋಜನೆಗೆ ಮಾಡಲಾದ ವೆಚ್ಚದ ಕುರಿತು ನಿಖರವಾದ ಲೆಕ್ಕಾಚಾರ ನಡೆಸುವಂತೆ ನಿದರ್ೇಶನ ನೀಡಲಾಗಿದೆ.
   ಅಮೆರಿಕದಿಂದ ವಿಮಾನ: ವರ್ಷಗಳ ಹಿಂದೆಯೇ ಯೋಜನೆಗೆ ಅಗತ್ಯವಿರುವ ವಿಶೇಷ ವಿಮಾನಗಳನ್ನು ಆಮೆರಿಕದಿಂದ ತರಿಸಲು ತೀಮರ್ಾನಿಸಲಾಗಿತ್ತ್ತು. ಒಂಬತ್ತು ಮಂದಿ ಕುಳಿತು ಪ್ರಯಾಣಿಸಬಹುದಾದ 208 ಕಾರವನ್ ಮಾಡೆಲ್ನ ಕಿರು ವಿಮಾನಕ್ಕೆ ಸುಮಾರು 12 ಕೋಟಿ ರೂ. ಬೆಲೆ ಹೊಂದಿದೆ. ಹೈದರಾಬಾದ್ನಲ್ಲಿಯೇ ಇದರ ನೋಂದಣಿ ಸಹ ನಡೆಸಲು, ಬಳಿಕ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್(ಡಿಜಿಸಿಎ) ನಾಗರಿಕ ವ್ಯೋಮ ಯಾನದ ಸಟರ್ಿಫಿಕೇಟ್ ಲಭಿಸಿದ ನಂತರ ಕೊಚ್ಚಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿತ್ತ್ತು.
   ಆದರೆ ರಾಜ್ಯದಲ್ಲಿ ಯುಡಿಎಫ್ ಸರಕಾರದ ಅವಧಿಯ ಬಳಿಕ  ಎಲ್ಡಿಎಫ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಈ ಯೋಜನೆ ಮಂದ ಗತಿಯಲ್ಲಿ ನಡೆಯುತ್ತಿತ್ತು.  ಈ ವಿಮಾನ ಯಾನ ಆರಂಭಿಸುವುದರ ವಿರುದ್ಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಮೀನುಗಾರರ ಸಂಘಟನೆಗಳ ಜೊತೆ ಚಚರ್ೆ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನದಲ್ಲಿ ಸರಕಾರ ತಯಾರಿ ನಡೆಸಿತ್ತು. ಅದು ವಿಫಲಗೊಂಡ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಡುವುದು ಒಳಿತು ಎಂದು ಸರಕಾರ ನಿರ್ಧರಿಸಿತೆಂದು ಅಂದಾಜಿಸಲಾಗಿದೆ.
    ಮೊದಲ ಹಂತದಲ್ಲಿ ಕೊಲ್ಲಂನ ಅಷ್ಟಮುಡಿ ಕಾಯಲ್, ಆಲಪ್ಪುಯ ಮತ್ತು ಕಾಸರಗೋಡಿನಲ್ಲಿ ಪರೀಕ್ಷಾರ್ಥ ಈ ವಿಮಾನ ಲ್ಯಾಂಡಿಂಗ್ ನಡೆಸಲು ಮತ್ತು ಆ ಸಂದರ್ಭದಲ್ಲಿ ಆರು ಆಸನಗಳಿರುವ ಸೆಸ್ನಾ 206 ವಿಮಾನವನ್ನು ತರಲಾಗಿತ್ತು. ಐದು ಗಂಟೆಗಳಷ್ಟು ಹಾರಾಟ ನಡೆಸುವ ಸಾಮಥ್ರ್ಯವನ್ನು ಹೊಂದಿದ ಸೆಸ್ನಾ 206 ಎಚ್ಫ್ಲೋಟ್ ಪ್ಲೇನ್ ಅಷ್ಟಮುಡಿ ಸರೋವರದ ತೀರದಿಂದ ಸೀ ಪ್ಲಾನ್ ಸೇವೆಯನ್ನು ಪ್ರಾರಂಭಿಸಿತ್ತಾದರೂ ಮೀನುಗಾರರ ಪ್ರತಿಭಟನೆಯಿಂದಾಗಿ ಕೇವಲ ಐದೇ ನಿಮಿಷದಲ್ಲಿ ವಾಪಸಾಗಬೇಕಾಯಿತು.
        ಕೇರಳ ಇನ್ನೆಂತು ಬೆಳೆದೀತು?!
    ರಾಜ್ಯದ ಆದಾಯದ ಕುಂಠಿತತೆ ಮತ್ತು ದಿನೇದಿನೇ ಬೆಳೆಯುತ್ತಿರುವ ವಿವಿಧ ಬೇಡಿಕೆಗಳ ಪೂರೈಕೆಯ ಹಿನ್ನೆಲೆಯಲ್ಲಿ ಹೊಸ ಹೊಸ ಯೋಜನೆಗಳ ತುತರ್ು ಜಾರಿಯಾಗಬೇಕಾದ ಅಗತ್ಯವಿದೆ. ಆದರೆ ವಿವಿಧ ಕಾರಣಗಳನ್ನು ನೀಡಿ ಸರಕಾರಗಳು ಯೋಜನೆಗಳಿಂದ ಹಿಂದೆ ಸರಿಯುತ್ತಿರುವುದು ಅಭಿವೃದ್ದಿಯನ್ನು ಕುಂಠಿತಗೊಳಿಸಲಿದೆ. ರಾಜ್ಯದ ಆಡಳಿತ ಚುಕ್ಕಾಣಿಯನ್ನು ಸರಣಿಯಂತೆ ಹಿಡಿಯುವ ಯುಡಿಎಫ್ ಮತ್ತು ಎಲ್ಡಿಎಫ್  ಸರಕಾರಗಳು ಅವುಗಳದ್ದೇ ವಿವಿಧ ಸಂಘಟನೆಗಳಿಂದ ನೂತನ ಯೋಜನಾನುಷ್ಠಾನಗಳನ್ನು ಜಾರಿಗೊಳಿಸಲಾರೆ ತೊಳಲುತ್ತಿರುವುದನ್ನೂ ಮುಚ್ಚಿಡುವಂತಿಲ್ಲ ಎಂಬುದೂ ಗಮನೀಯ. ಈ ಹಿನ್ನೆಲೆಗಳಲ್ಲಿ ರಾಷ್ಟ್ರದ ಇತರ ರಾಜ್ಯಗಳಿಗಿಂತ ಕೇರಳ ಇನ್ನಷ್ಟು ಹಿನ್ನಡೆಗೆ ಸರಿಯುವ ಭೀತಿ ಎದುರಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries