ಕನ್ನಡ ಗಝಲ್
ಕವಯಿತ್ರಿ ಚೇತನಾ ಕುಂಬಳೆ:
ಕಾಲ ಕೆಟ್ಟು ಹೋಗಿದೆ, ಅನುಭವಿಸುವ ಬದುಕು ನರಕವಾಗಿದೆ
ಸ್ವಾರ್ಥಕ್ಕಾಗಿ ಮಾನವೀಯತೆಯನ್ನೇ ಮಾರಿಕೊಳ್ಳಲಾಗಿದೆ
ಈಗೀಗ ರಸ್ತೆಗಳಿಗೂ ತೀರದ ದಾಹ,ಬಾಯಾರಿದಾಗ ರಕ್ತವನ್ನೇ ಕುಡಿಯುತ್ತದೆ
ಒದ್ದಾಡಿ ಸಾಯುವುದು ಒಂದಷ್ಟು ಕನಸುಗಳು , ನಾಳಿನ ಭರವಸೆಯಾಗಿದೆ
ಗುಡಿಯೊಳಗೆ ಕಲ್ಲ ದೇವರಿಗೆ ನಿತ್ಯ ಕ್ಷೀರಾಭಿಷೇಕ ನಡೆಯುತ್ತದೆ
ಬೀದಿಯಲ್ಲಿ ಹಸಿವಿನ ಕೂಗಿಗೆ ಕಿವಿ ಕಿವುಡಾಗಿದೆ
ಯಾವುದೊ ನಿಯಮಗಳಿಗೆ ಬದ್ಧರಾಗಿ ಇಚ್ಛಿಸಿದಂತೆ ಜೀವಿಸುವ ಸ್ವಾತಂತ್ರ್ಯವಿಲ್ಲದೆ
ಜಾತಿ,ಧರ್ಮಗಳ ಗೋಡೆಯ ಮಧ್ಯೆ ಬಡ ಜೀವಗಳಿಗೆ ಉಸಿರುಗಟ್ಟಿದೆ
ತನು ಎಲ್ಲಿ ನೋಡಿದರೂ ಬರೀ ನಾಟಕ, ನೈಜ ಪಾತ್ರ ಪರದೆ ಹಿಂದೆ ಸರಿದಿದೆ
ಪ್ರೀತಿ,ಸ್ನೇಹ, ವಿಶ್ವಾಸಗಳು ಮರೆಯಾಗಿ,ಎಲ್ಲೆಡೆ ಹಿಂಸೆ, ವಂಚನೆಗಳೇ ತಲೆಯೆತ್ತಿದೆ
ಚೇತನಾ ಕುಂಬಳ