HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಶ್ರೀರಾಮ ನಾಮದ ಶಕ್ತಿ ಸಕಲ ದುರಿತಗಳಿಂದ ಪಾರುಗೊಳಿಸುತ್ತದೆ-ವಿದ್ವಾನ್.ವಿ.ಬಿ.ಹಿರಣ್ಯ
                           ರಾಮಾಯಣ ಪ್ರವಚನ ಸಪ್ತಾಹ ಸಮಾರೋಪ
   ಬದಿಯಡ್ಕ: ರಾಷ್ಟ್ರದ ಮಹದ್ ಗ್ರಂಥಗಳು ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವ ಜೀವ-ಜೀವನ ಸೂತ್ರಗಳನ್ನು ಬಿಂಬಿಸುತ್ತವೆ. ಶ್ರೀಮದ್ ರಾಮಾಯಣವು ಶ್ರೀರಾಮನ ಪರಿಪೂರ್ಣ ವೃತ್ತಾಂತಗಳ ಮೂಲಕ ಸಂದೇಶಗಳಿಂದ ಭೂಯಿಷ್ಠವಾಗಿ ಬ್ರಹ್ಮ ತತ್ವಗಳ ಸಂದೇಶ ಸಾರಿದೆ ಎಂದು ಹಿರಿಯ ಪ್ರವಚನಕಾರ ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಶ್ರೀಮಹಾವಿಷ್ಣು ಸೇವಾ ಸಮಿತಿ ಕಾಮರ್ಾರು ಹಾಗೂ ಮಾನ್ಯದ ಯಕ್ಷಮಿತ್ರರು ಸಾಂಸ್ಕೃತಿಕ ಸಂಘದ ಜಂಟಿ ಆಶ್ರಯದಲ್ಲಿ ಕಾಮರ್ಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಜು.17 ರಿಂದ ಆರಂಭಗೊಂಡು ಒಂದುವಾರಗಳ ಕಾಲ ನಡೆದ ಶ್ರೀಮದ್ ರಾಮಾಯಣ ಪ್ರವಚನ ಕಾರ್ಯಕ್ರಮದ ಏಳನೇ ದಿನವಾದ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ  ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
   ಶ್ರೀರಾಮನ ವ್ಯಕ್ತಿತ್ವ, ಜೀವನ ಅತ್ಯಪೂರ್ವ ಸಾಕಾರತೆಯ ಸಂಕೇತವಾಗಿದ್ದು, ತನ್ನ ಆದರ್ಶಗಳ ಮೂಲಕ ನೀಡಿದ ಸಂದೇಶ ಇಂದಿಗೂ ಪ್ರಸ್ತುತ ಎಂದು ಅವರು ತಿಳಿಸಿದರು. ರಾಮ ಎಂಬೆರಡು ಅಕ್ಷರಕ್ಕೆ ಎಲ್ಲರನ್ನೂ ಸಂರಕ್ಷಿಸುವ ಶಕ್ತಿ ಹೊಂದಿದ್ದು, ಲೌಕಿಕದ ಸಂಕಷ್ಟಗಳಿಂದ ಪಾರಾಗಲು ಒದಗಿರುವ ಕವಚವಾಗಿದೆ ಎಂದು ತಿಳಿಸಿದರು. ಶ್ರೀಮದ್ ರಾಮಾಯಣವು ಶ್ರೀರಾಮಚಂದ್ರನ ಪ್ರತಿಮಾತು, ಘಟನೆಗಳಿಂದ ಕೂಡಿದ ಮಹದ್ ಗ್ರಂಥವು ಸಮಾಸವೂ, ಹೆಚ್ಚು ವಿಸ್ತರಿಸಲ್ಪಟ್ಟ ಆದರ್ಶಗಳಿಂದೊಡಗೂಡಿ ವ್ಯಾಸವೂ ಆಗಿರುವುದರಿಂದ ರಾಮಾಯಣ ಗ್ರಂಥ ಸಮಾಸ-ವ್ಯಾಸ ಧಾರಣಗಳೆರಡೂ ಮೇಳೈಸಿರುವ ಅತ್ಯಪೂರ್ವತೆಯ ಗ್ರಂಥ. ಅದರ ಪಾರಾಯಣ, ಮನನ ಬದುಕಿನ ಸಂಕಷ್ಟಗಳಿಂದ ಪಾರುಗೊಳಿಸುವ ಶಕ್ತಿ ಸಂಚಯತೆ ಹೊಂದಿದೆ ಎಂದು ಅವರು ತಿಳಿಸಿದರು.
    ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ, ಧಾಮರ್ಿಕ ಮುಖಂಡ ತತ್ವಮಸಿ ವೇಣುಗೋಪಾಲ್ ಬೋವಿಕ್ಕಾನ ಅವರು ಮಾತನಾಡಿ, ಶ್ರೀಮಂತ ಹಿನ್ನೆಲೆಯ ಸನಾತನ ಧರ್ಮ-ಸಮಾಜ ಸಂರಕ್ಷಣೆಗಳಿಗೆ ಪರಿಹಾರಗಳು ಮಹತ್ವದ ಧರ್ಮಗ್ರಂಥಗಳಲ್ಲಿವೆ. ದೇಹ, ಮನಸ್ಸು, ಕುಟುಂಬ, ಸಮಾಜ, ರಾಷ್ಟ್ರದ ಸಮಗ್ರ ಶ್ರೇಯಸ್ಸಿನ ಅಂತಃಸತ್ವ ಶ್ರೀಮದ್ ರಾಮಾಯಣದ ವಿಶೇಷತೆಯಾಗಿದೆ ಎಂದು ತಿಳಿಸಿದರು. ಸನಾತನ ಹಿಂದೂ ಧರ್ಮ ಇಂದು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಧರ್ಮಯುದ್ದವೊಂದೇ ಪರಿಹಾರವಾಗಿದ್ದು, ರಕ್ತಪಾತದ ಧರ್ಮಸಂರಕ್ಷಣೆಯಲ್ಲಿ ಅರ್ಥವಿಲ್ಲ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ನಿಷ್ಕಳಂಕ, ಭಕ್ತಿಗಳನ್ನು ಕಾಪಿಡುವ ಮೂಲಕ ಯುವ ಸಮೂಹಕ್ಕೆ ಧರ್ಮಮಾರ್ಗದ ಶಿಕ್ಷಣ ಮನೆಮನೆಗಳ ಮೂಲಕ ಮನತಟ್ಟುವ ಪ್ರಯತ್ನಗಳಾಗಬೇಕು. ಸತ್ಯ, ಧರ್ಮನಿಷ್ಠೆ, ಕಾಯಕದಲ್ಲಿ ಲೋಪವೆಸಗದೆ ಮುನ್ನಡೆಯುವ ಶಕ್ತಿ ನಮ್ಮಲ್ಲಿ ಹರಿದುಬರಲಿ ಎಂದು ಕರೆನೀಡಿದರು.
   ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾಉಪಾಧ್ಯಕ್ಷ ಎಸ್.ಎನ್.ಮಯ್ಯ, ಕ್ಷೇತ್ರದ ಟ್ರಸ್ಟಿ ನರಸಿಂಹ ಭಟ್ ಕಾಮರ್ಾರು ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
   ಒಂದು ವಾಲ ಕಾಲ ರಾಮಾಯಣ ಪ್ರವಚನ ನೀಡಿದ ನಾರಾಯಣಮೂತರ್ಿ ಗುರುಪುರಂ ಅವರನ್ನು ಈ ಸಂದರ್ಭ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಜೊತೆಗೆ ಶ್ರೀಮದ್ ರಾಮಾಯಣ ಪ್ರವಚನ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀರಾಮಾಯಣ ರಸಪ್ರಶ್ನೆ ಸ್ಪಧರ್ೆಯ ವಿಜೇತರಾದ ಹಷರ್ಿತಾ, ವಾಣಿಶ್ರೀ, ಪುನೀತ್, ಅಶ್ವಥ್, ರಾಧಾಕೃಷ್ಣ ರೈ, ಅನಘಾ ಕೆ.ರಾಮನ್ ರನ್ನು ವಿಶೇಷವಾಗಿ ಅಭಿನಂದಿಸಿ ಬಹುಮಾನ ವಿತರಿಸಲಾಯಿತು. ಸಹಕರಿಸಿದ ಸುಬ್ರಹ್ಮಣ್ಯ ಹೊಳ್ಳ ಕುಮಾರಮಂಗಲ, ಶ್ರೀರಾಮ ಹೆಗಡೆ, ರಾಮ ನಾಯ್ಕ ಕಾಮರ್ಾರು ಅವರನ್ನು ಗೌರವಿಸಲಾಯಿತು.
   ಯಕ್ಷಮಿತ್ರರು ಸಾಂಸ್ಕೃತಿಕ ಸಂಘದ ವಿಜಯಕುಮಾರ್ ಮಾನ್ಯ ಸ್ವಾಗತಿಸಿ, ಸಂತೋಷ್ ಕುಮಾರ್ ಎಸ್ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
   ಸಂಜೆ ಶ್ರದ್ದಾ ಭಟ್ ಹಾಗೂ ಮೇಧಾ ಭಟ್ ನಾಯರ್ಪಳ್ಳ ಸಹೋದರಿಯರಿಂದ ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಿತು. ಸಚಿನ್ ಕುದ್ರೆಪ್ಪಾಡಿ ಹಿನ್ನೆಲೆಯಲ್ಲಿ ಸಹಕರಿಸಿದರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries